ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾರುಕಟ್ಟೆ ಮೌಲ್ಯವು ಆಕಾಶವನ್ನೇ ಮುಟ್ಟಿದೆ. ಲೀಗ್ನ ಮೊದಲ ಆವೃತ್ತಿಯ ಚಾಂಪಿಯನ್ ತಂಡವಾದ ರಾಜಸ್ಥಾನ ರಾಯಲ್ಸ್, ಬರೋಬ್ಬರಿ ₹15,286 ಕೋಟಿ (1.63 ಬಿಲಿಯನ್ ಡಾಲರ್) ಮೊತ್ತಕ್ಕೆ ಮಾರಾಟವಾಗುವ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿದೆ. ಈ ಬೃಹತ್ ಒಪ್ಪಂದದೊಂದಿಗೆ ರಾಜಸ್ಥಾನ ರಾಯಲ್ಸ್, ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲದೆ ಜಾಗತಿಕ ಕ್ರೀಡಾ ಫ್ರಾಂಚೈಸಿಗಳ ಸಾಲಿನಲ್ಲಿ ಅತ್ಯಂತ ದುಬಾರಿ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಅಮೆರಿಕ ಮೂಲದ ಉದ್ಯಮಿ ಕಲ್ ಸೋಮನಿ (Kal Somani) ನೇತೃತ್ವದ ಒಕ್ಕೂಟವು ಈ ತಂಡವನ್ನು ಖರೀದಿಸಿದೆ. ಈ ಒಕ್ಕೂಟಕ್ಕೆ ಅಮೆರಿಕದ ದೈತ್ಯ ಕಂಪನಿ ‘ವಾಲ್ಮಾರ್ಟ್’ ಕುಟುಂಬದ ರಾಬ್ ವಾಲ್ಟನ್ ಹಾಗೂ ಎನ್ಎಫ್ಎಲ್ ತಂಡದ ಮಾಲೀಕರಾದ ಹ್ಯಾಂಪ್ ಕುಟುಂಬದ ಬೆಂಬಲವಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಯುದ್ಧದ ಬಿಸಿ: ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಬಾಲ್ಗಳ ಭಾರಿ ಅಭಾವ
ಸೋಮನಿ ಅವರು ಟ್ರುಯೋ.ಎಐ (Truyo.AI) ಮತ್ತು ಇಂಟ್ರಾಎಡ್ಜ್ ಅಂತಹ ಪ್ರಮುಖ ಕಂಪನಿಗಳ ಸ್ಥಾಪಕರಾಗಿದ್ದು, ಈಗ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟಿದ್ದಾರೆ.ಈ ಹೊಸ ಮಾಲೀಕತ್ವದ ಬದಲಾವಣೆಯು ಐಪಿಎಲ್ 2026ರ ಸೀಸನ್ ಮುಗಿದ ನಂತರ ಅಧಿಕೃತವಾಗಿ ಜಾರಿಗೆ ಬರಲಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

