IPL: ಐಪಿಎಲ್ 2026 ಸೀಸನ್ ಪ್ರಶಸ್ತಿಗಳು, ವೈಭವ್‌ ಸೂರ್ಯವಂಶಿಗೆ ಸಿಂಹಪಾಲು

IPL 2026 Final

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆಗಿದೆ.

ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ವಾಷಿಂಗ್ಟನ್ ಸುಂದರ್ ಅಜೇಯ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರೂ ಇತರೆ ಆಟಗಾರರು ರನ್‌ ಕಲೆಹಾಕುವಲ್ಲಿ ಎಡವಿದರು. ಪರಿಣಾಮ ತಂಡವು ಬೃಹತ್‌ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.

ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಆರ್‌ಸಿಬಿ ಬೌಲರ್‌ಗಳು ಗುಜರಾತ್ ತಂಡವನ್ನು ನಿಯಂತ್ರಣದಲ್ಲಿಟ್ಟರು. 156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು.

ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಆರಂಭಿಕ ಆಘಾತಗಳ ನಡುವೆಯೂ ಜಿತೇಶ್ ಶರ್ಮಾ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ ಕೊಹ್ಲಿ ತಂಡವನ್ನು ಗುರಿಯತ್ತ ಮುನ್ನಡೆಸಿದರು. ಗುಜರಾತ್ ಪರ ಅರ್ಷದ್ ಖಾನ್ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು.

ಇದನ್ನೂ ಓದಿ: IPL Final: ಕಿಂಗ್ ಕೊಹ್ಲಿ ಏಕಾಂಗಿ ಹೋರಾಟ, ಸತತ ಎರಡನೇ ಬಾರಿ ಕಪ್ ಗೆದ್ದ ಆರ್‌ಸಿಬಿ

ಈ ಗೆಲುವಿನೊಂದಿಗೆ ಆರ್‌ಸಿಬಿ 2025 ಹಾಗೂ 2026ರಲ್ಲಿ ಸತತ ಎರಡು ವರ್ಷ ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಮಾಡಿತು.

ಫೈನಲ್ ಪಂದ್ಯದ ಪ್ರಶಸ್ತಿ ವಿಜೇತರು

ಪಂದ್ಯಶ್ರೇಷ್ಠ (Player of the Match): ವಿರಾಟ್ ಕೊಹ್ಲಿ (ಆರ್‌ಸಿಬಿ) – 42 ಎಸೆತಗಳಲ್ಲಿ ಅಜೇಯ 75 ರನ್ (₹5 ಲಕ್ಷ)
ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್: ವೆಂಕಟೇಶ್ ಅಯ್ಯರ್ (ಸ್ಟ್ರೈಕ್ ರೇಟ್ 200) – ₹1 ಲಕ್ಷ
ಅತಿ ಹೆಚ್ಚು ಸಿಕ್ಸರ್‌ಗಳು: ವಿರಾಟ್ ಕೊಹ್ಲಿ – 3 ಸಿಕ್ಸರ್‌ಗಳು – ₹1 ಲಕ್ಷ
ಅತಿ ಹೆಚ್ಚು ಬೌಂಡರಿಗಳು: ವಿರಾಟ್ ಕೊಹ್ಲಿ – 9 ಫೋರ್‌ಗಳು – ₹1 ಲಕ್ಷ
ಗ್ರೀನ್ ಡಾಟ್ ಬಾಲ್ಸ್ ಪ್ರಶಸ್ತಿ: 11 ಡಾಟ್ ಬಾಲ್‌ಗಳು – ₹1 ಲಕ್ಷ

ಐಪಿಎಲ್ 2026 ಸೀಸನ್ ಪ್ರಶಸ್ತಿಗಳು

ಚಾಂಪಿಯನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು  (ಆರ್‌ಸಿಬಿ)– ₹20 ಕೋಟಿ
ರನ್ನರ್-ಅಪ್: ಗುಜರಾತ್ ಟೈಟಾನ್ಸ್ – ₹12.5 ಕೋಟಿ

ವೈಯಕ್ತಿಕ ಪ್ರಶಸ್ತಿಗಳು

ಆರೆಂಜ್ ಕ್ಯಾಪ್: ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್) – 776 ರನ್ (₹10 ಲಕ್ಷ)
ಪರ್ಪಲ್ ಕ್ಯಾಪ್: ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್) – 29 ವಿಕೆಟ್ (₹10 ಲಕ್ಷ)
ಐಪಿಎಲ್ 2026 MVP: ವೈಭವ್ ಸೂರ್ಯವಂಶಿ – 436.5 ಅಂಕಗಳು (₹15 ಲಕ್ಷ)
ಅತಿ ಹೆಚ್ಚು ಫೋರ್‌ಗಳು: ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್) – 75 ಫೋರ್‌ಗಳು (₹10 ಲಕ್ಷ)
ಅತಿ ಹೆಚ್ಚು ಸಿಕ್ಸರ್‌ಗಳು: ವೈಭವ್ ಸೂರ್ಯವಂಶಿ – 72 ಸಿಕ್ಸರ್‌ಗಳು (₹10 ಲಕ್ಷ)
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ – ಸ್ಟ್ರೈಕ್ ರೇಟ್ 237.30 (ಟಾಟಾ ಸಿಯೆರಾ ಕಾರು ಮತ್ತು ಟ್ರೋಫಿ)
ಅತಿ ಹೆಚ್ಚು ಡಾಟ್ ಬಾಲ್‌ಗಳು: ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್) – 172 ಡಾಟ್ ಬಾಲ್‌ಗಳು (₹10 ಲಕ್ಷ)
ಕ್ಯಾಚ್ ಆಫ್ ದಿ ಸೀಸನ್: ಮನೀಷ್ ಪಾಂಡೆ (ಕೆಕೆಆರ್) – ಟಿಮ್ ಡೇವಿಡ್ ವಿಕೆಟ್ (₹10 ಲಕ್ಷ)
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ವೈಭವ್ ಸೂರ್ಯವಂಶಿ (₹10 ಲಕ್ಷ)

ಪಿಚ್ ಮತ್ತು ಮೈದಾನ ಪ್ರಶಸ್ತಿಗಳು

5 ಅಥವಾ ಹೆಚ್ಚು ಪಂದ್ಯಗಳ ಆತಿಥ್ಯ: ಈಡನ್ ಗಾರ್ಡನ್ಸ್, ಕೋಲ್ಕತ್ತಾ – ₹50 ಲಕ್ಷ
4 ಅಥವಾ ಕಡಿಮೆ ಪಂದ್ಯಗಳ ಆತಿಥ್ಯ: ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ – ₹25 ಲಕ್ಷ

ಫೇರ್ ಪ್ಲೇ ಪ್ರಶಸ್ತಿ: ಪಂಜಾಬ್ ಕಿಂಗ್ಸ್

ಆರ್‌ಸಿಬಿಯ ಸತತ ಎರಡನೇ ಐಪಿಎಲ್ ಕಿರೀಟದ ಗೆಲುವು ಹಾಗೂ ವಿರಾಟ್ ಕೊಹ್ಲಿಯ ಮತ್ತೊಂದು ಮ್ಯಾಚ್‌ವಿನ್ನಿಂಗ್ ಪ್ರದರ್ಶನ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ವೈಭವ್ ಸೂರ್ಯವಂಶಿ ಸೀಸನ್‌ನ ಬಹುತೇಕ ಪ್ರಮುಖ ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದು ಐಪಿಎಲ್ 2026ರ ಅತ್ಯಂತ ಪ್ರಭಾವಿ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು