Breaking News

‘ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಸಂಪೂರ್ಣ ಮಾಹಿತಿ ಇಲ್ಲ, ಸದ್ಯಕ್ಕೆ ಪ್ರತಿಕ್ರಿಯಿಸಲ್ಲ’: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಮುಂಬೈ: ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ಪೂರ್ಣ ಮಾಹಿತಿ ಇಲ್ಲದಿರುವುದರಿಂದ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಲು ಸಂವಿಧಾನಾತ್ಮಕ ಮಾರ್ಗಗಳಿವೆ ಎಂದು ಪ್ರತಿಪಾದಿಸಿದರು.

“ಈ ಘಟನೆಗಳು ಏಕೆ ನಡೆದಿವೆ ಮತ್ತು ಅಲ್ಲಿ ಏನೇನು ಸಂಭವಿಸಿದೆ ಎಂಬ ಮೂಲ ಕಾರಣಗಳಿಗೆ ನಾವು ಹೋಗಬೇಕಾಗುತ್ತದೆ. ಅದಕ್ಕೆ ಬೇಕಾದ ವಿವರವಾದ ಮಾಹಿತಿ ಸದ್ಯಕ್ಕೆ ನನ್ನ ಬಳಿ ಇಲ್ಲ, ಹಾಗೂ ನಿಮ್ಮ ಬಳಿಯೂ ಸಂಪೂರ್ಣ ಚಿತ್ರಣವಿಲ್ಲ ಎಂದು ಭಾವಿಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸಂಪೂರ್ಣ ವಿವರಗಳು ತಿಳಿಯದೆ, ಏನು ನಡೆಯಿತು ಅಥವಾ ಏಕೆ ನಡೆಯಿತು ಎಂಬುದರ ಕುರಿತು ಸದ್ಯಕ್ಕೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಮೋಹನ್ ಭಾಗವತ್ ಹೇಳಿದರು.

ಇದನ್ನೂ ಓದಿ: ಗ್ರಾಹಕರಿಗೆ ಮೋಸ ಮಾಡುವ ಆನ್‌ಲೈನ್ ಆ್ಯಪ್‌ಗಳಿಗೆ ‘ಡಾರ್ಕ್ ಪ್ಯಾಟರ್ನ್’ ಬಿಸಿ: ಜೆಪ್ಟೋ, ಸ್ಪೈಸ್‌ಜೆಟ್ ಸೇರಿ 9 ಕಂಪನಿಗಳಿಗೆ ದಂಡ
ಹೊಸ ಪೀಳಿಗೆಯ (Gen Z) ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾತನಾಡಿದ ಅವರು, “Gen Z ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ಕಾರ್ಯನಿರ್ವಹಿಸಲು ಕೆಲವು ರೀತಿ-ರಿವಾಜುಗಳು ಹಾಗೂ ಮಾರ್ಗಗಳಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದ ಕನಿಷ್ಠ ಎರಡು ಭಾಷಣಗಳನ್ನು ಓದಿದರೂ, ಇಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಸುಳಿವು ನಮಗೆ ಸಿಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಇಲ್ಲಿದೆ ನೋಡಿಮ ವಿಡಿಯೋ:

“Gen Z” ಪೀಳಿಗೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ತಕ್ಷಣ ಅವರನ್ನು ರಾಷ್ಟ್ರವಿರೋಧಿಗಳು ಎಂದು ಕರೆಯಲಾಗುವುದಿಲ್ಲ, ಅವರ ಆತಂಕಗಳು ಮತ್ತು ಕುಂದುಕೊರತೆಗಳು ನೈಜವಾಗಿವೆ. ಅವರಿಗೆ ತಾರ್ಕಿಕ ಉತ್ತರಗಳನ್ನು ನೀಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *