ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಹತ್ವದ ಬೆಳವಣಿಗೆ: ಒಲೆಶ್ಕಿ ನಗರದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡ ಉಭಯ ದೇಶಗಳು

ಮಾಸ್ಕೋ : ಕಳೆದ ಹಲವು ವರ್ಷಗಳಿಂದ ಭೀಕರ ಯುದ್ಧದಲ್ಲಿ ತೊಡಗಿರುವ ರಷ್ಯಾ ಮತ್ತು ಉಕ್ರೇನ್ ದೇಶಗಳು ಮಾತುಕತೆ ಮೂಲಕ ಮಹತ್ವದ ಮಾನವೀಯ ನಿರ್ಧಾರವೊಂದಕ್ಕೆ ಬಂದಿವೆ. ದಕ್ಷಿಣ ಉಕ್ರೇನ್‌ನ ಯುದ್ಧಪೀಡಿತ ಒಲೆಶ್ಕಿ ನಗರದಲ್ಲಿ (Oleshky) ತಾತ್ಕಾಲಿಕ ಕದನ ವಿರಾಮಕ್ಕೆ (Ceasefire) ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ವೈಟ್ ಹೌಸ್ (White House) ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಅಕ್ಟೋಬರ್ 27 ರಿಂದ ಈ ಒಪ್ಪಂದ ಜಾರಿಗೆ ಬರಲಿದೆ.

ಕದನ ವಿರಾಮದ ಹಿಂದಿನ ಪ್ರಮುಖ ಉದ್ದೇಶಗಳು:

  • ಅಕ್ಟೋಬರ್ 27 ರಿಂದ ಜಾರಿ: ವರದಿಗಳ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಅಕ್ಟೋಬರ್ 27 ರಿಂದ ಒಲೆಶ್ಕಿ ನಗರದಲ್ಲಿ ಎಲ್ಲಾ ರೀತಿಯ ಶಸ್ತ್ರಾಸ್ತ್ರ ದಾಳಿ ಹಾಗೂ ವೈಷಮ್ಯವನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.

  • ಸಿವಿಲಿಯನ್‌ಗಳ ಸ್ಥಳಾಂತರ: 2022ರ ಫೆಬ್ರವರಿಯಿಂದ ರಷ್ಯಾ ವಶದಲ್ಲಿರುವ ಒಲೆಶ್ಕಿ ನಗರದಲ್ಲಿ ಸದ್ಯ ಸುಮಾರು 2,000ಕ್ಕೂ ಹೆಚ್ಚು ನಾಗರಿಕರು ಸಿಲುಕಿಕೊಂಡಿದ್ದಾರೆ. ಯುದ್ಧದ ತೀವ್ರತೆಯಿಂದಾಗಿ ಇಲ್ಲಿನ ಜನರಿಗೆ ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳು ಸಿಗದೆ ನರಳುತ್ತಿದ್ದಾರೆ. ಇವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಈ ಕದನ ವಿರಾಮ ನೆರವಾಗಲಿದೆ.

  • ಮಾನವೀಯ ನೆರವಿಗೆ ಮುಕ್ತ ಅವಕಾಶ: ಸಂಕಷ್ಟದಲ್ಲಿರುವ ಜನರಿಗೆ ಅಗತ್ಯವಿರುವ ವೈದ್ಯಕೀಯ ಸಾಮಾಗ್ರಿಗಳು, ಆಹಾರ ಹಾಗೂ ಇತರೆ ಮಾನವೀಯ ನೆರವು (Humanitarian Aid) ತಡೆರಹಿತವಾಗಿ ತಲುಪಿಸಲು ಈ ತಾತ್ಕಾಲಿಕ ವಿರಾಮ ಅವಕಾಶ ಮಾಡಿಕೊಡಲಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ