ಮಹಾರಾಷ್ಟ್ರ: ಡೊಂಬಿವಿಲಿಯಲ್ಲಿ ಆರ್‌ಎಸ್‌ಬಿ-ಬಿಜಿಎಸ್‌ಬಿ ಸಪ್ತಪದಿ ವಧು-ವರ ಮೇಳ

Saptapadi bride and groom gathering in Dombivli Maharashtra

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯಲ್ಲಿರುವ ಶ್ರೀ ವರದ ಸಿದ್ಧಿವಿನಾಯಕ ಸೇವಾ ಭವನದಲ್ಲಿ ಜ.೪ ರಂದು ಸಪ್ತಪದಿ ವಧು-ವರ ಮೇಳ ಯಶಸ್ವಿಯಾಗಿ ನಡೆಯಿತು. ೧೩೦ ಕ್ಕೂ ಅಧಿಕ ಯುವಕ ಯುವತಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಮಾರು ೩೫೦ ಜನರು ಭಾಗವಹಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ೩೦ ಜನ ವಧುಗಳು ಸ್ವಯಂ ಭಾಗವಹಿಸಿದ್ದು ವಿಶೇಷವಾಗಿತ್ತು. ಗಣಪತಿ ಹೋಮ ಧಾರ್ಮಿಕ ಪೂಜಾ ಕಾರ್ಯದೊಂದಿಗೆ ಪ್ರಾರಂಭಗೊಂಡ ವಧುವರ ಮೇಳದ ವೇದಿಕೆ ಕಾರ್ಯಕ್ರಮನ್ನು ಶ್ರೀ ವರದ ಸಿದ್ದಿವಿನಾಯಕ ಸೇವಾ ಮಂಡಳದ ಅಧ್ಯಕ್ಷ ಎಂಪಿ ನಾಯಕ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

Advertisement

ವೇದಿಕೆಯಲ್ಲಿ ಉದ್ಯಮಿಯೂ ಆಗಿರುವ ಪೂನಾದ ಆರ್‌ಎಸ್‌ಬಿ ಸಂಘದ ಮಾಜಿ ಅಧ್ಯಕ್ಷ ನಟರಾಜ್ ಕಾಮತ್, ಉದ್ಯಮಿಯೂ ಆಗಿರುವ ಬೆಂಗಳೂರಿನ ಆರ್‌ಎಸ್‌ಬಿ ಸಂಘದ ಮಾಜಿ ಅಧ್ಯಕ್ಷ ನಾಗೇಂದ್ರ ಕಾಮತ್, ಆರ್‌ಎಸ್‌ಬಿ ಜೀವನ್ ಸಾಥಿ ಮ್ಯಾರೇಜ್ ಬ್ಯೂರೋದ ಮುಖ್ಯ ಸಂಚಾಲಕ ಗೋಪಾಲ್ ನಾಯಕ್, ಆರ್‌ಎಸ್‌ಬಿ ಮತ್ತು ಬಿಜಿಎಸ್‌ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರಿನ ನಿರ್ದೇಶಕ ಮೋಹನದಾಸ್ ಪ್ರಭು, ಆರ್‌ಎಸ್‌ಬಿ ಜೀವನ್ ಸಾಥಿ ಮ್ಯಾರೇಜ್ ಬ್ಯೂರೋದ ಸಹ ಸಂಚಾಲಕಿ ಸ್ಮಿತಾ ಪಾಟ್ಕರ್ ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ: India : ಭಾರತ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರ : ಹೊಸ ಕೃಷಿ ಕ್ರಾಂತಿಯ ಯುಗ

ಆರ್‌ಎಸ್‌ಬಿ ಮತ್ತು ಬಿಜಿಎಸ್‌ಬಿ ಸಪ್ತಪದಿ ವಿವಾಹ ಮಾಹಿತಿ ಕೇಂದ್ರ ಬೆಂಗಳೂರು ಮತ್ತು ಆರ್‌ಎಸ್‌ಬಿ ಜೀವನ್ ಸಾಥಿ ಮ್ಯಾರೇಜ್ ಬ್ಯೂರೋ, ಮುಂಬೈ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಭಾಂಗಣ ಊಟೋಪಚಾರ ವಸತಿ ವ್ಯವಸ್ಥೆಯನ್ನು ಒದಗಿಸಿದ ಸೇವಾ ಮಂಡಳದ ಅಧ್ಯಕ್ಷ ಎಂಪಿ ನಾಯಕ್ ಮತ್ತು ಮಂಡಳದ ಸದಸ್ಯರೆಲ್ಲರಿಗೂ ಆಭಾರಿಯಾಗಿದ್ದೇವೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು