ಹೆಂಡತಿಯ ಕೈಕಾಲು ಕಟ್ಟಿ, ತಲೆ ಬೋಳಿಸಿ, ಮಸಿ ಬಳಿದು ಮೂತ್ರ ಕುಡಿಸಿದ ಪಾಪಿ; ಮಕ್ಕಳ ಕಣ್ಣೆದುರೇ ನರಕಯಾತನೆ

ರಾಯ್‌ಪುರ: ಹೆತ್ತ ಮಕ್ಕಳು ಭಯದಿಂದ ನಡುಗುತ್ತಾ ಕಣ್ಣೀರು ಹಾಕುತ್ತಿದ್ದರೂ ಕರಗದ ಪತಿಯೊಬ್ಬ, ತನ್ನದೇ ಪತ್ನಿಯ ಕೈಕಾಲುಗಳನ್ನು ಕಟ್ಟಿ ಹಾಕಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು ಅಮಾನುಷವಾಗಿ ಹಲ್ಲೆ ನಡೆಸಿರುವ ಘೋರ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತ ಆನಂದ ಪಟ್ಟಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂತ್ರಸ್ತ ಮಹಿಳೆಯನ್ನು ತಾರಾ ಎಂದು ಗುರುತಿಸಲಾಗಿದೆ. ಈಕೆ ಸುಮಾರು 15 ವರ್ಷಗಳ ಹಿಂದೆ ಜಿತೇಂದ್ರ ಘಾಸಿಯಾ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಆದರೆ, ಮದುವೆಯಾದ ಕೆಲವು ವರ್ಷಗಳಲ್ಲೇ ಇವರ ನಡುವೆ ಕೌಟುಂಬಿಕ ಕಲಹಗಳು ಆರಂಭವಾಗಿದ್ದವು. ಪತಿಯ ನಿರಂತರ ದೈಹಿಕ, ಮಾನಸಿಕ ಕಿರುಕುಳ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದ ಬೇಸತ್ತ ತಾರಾ, ಮಕ್ಕಳೊಂದಿಗೆ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಜೀವನ ನಿರ್ವಹಣೆಗಾಗಿ ಹಾಗೂ ಮಕ್ಕಳ ಓದಿಗಾಗಿ ಬೇರೆ ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದಳು.

ಜೂನ್ 14 ರಂದು ಪತ್ನಿ ತಾರಾ ಇರುತ್ತಿದ್ದ ಜಾಗವನ್ನು ಪತ್ತೆಹಚ್ಚಿದ ಜಿತೇಂದ್ರ, ಆಕೆ ಆಶ್ರಯ ಪಡೆದಿದ್ದ ಪರಿಚಯಸ್ಥರ ಮನೆಗೆ ನುಗ್ಗಿದ್ದಾನೆ. ಕಷ್ಟದ ಸಮಯದಲ್ಲಿ ನೆರವಾಗಿದ್ದ ವ್ಯಕ್ತಿಯ ಮನೆಯಲ್ಲಿದ್ದ ಪತ್ನಿಯನ್ನು ಜಿತೇಂದ್ರ ಹೊರಗೆ ಕರೆದಿದ್ದಾನೆ. ಬಳಿಕ ಆಕೆಗೆ ಅಕ್ರಮ ಸಂಬಂಧ ಇದೆ ಎಂದು ಸುಳ್ಳು ಆರೋಪ ಹೊರಿಸಿ, ಮನಬಂದಂತೆ ಬೂತು ಮಾತುಗಳಿಂದ ನಿಂದಿಸಲು ಆರಂಭಿಸಿದ್ದಾನೆ.

ಇದನ್ನೂ ಓದಿ: ಶೀಘ್ರದಲ್ಲೇ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ; ಕರಾವಳಿ, ಮಲೆನಾಡು ಟೂರಿಸಂ ಅಭಿವೃದ್ಧಿಗೆ ಪ್ರತ್ಯೇಕ ನೀತಿ ಫಿಕ್ಸ್

ಅಷ್ಟಕ್ಕೇ ನಿಲ್ಲದ ಈತ, ಮಕ್ಕಳ ಮುಂದೆಯೇ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ, ತಲೆ ಬೋಳಿಸಿ, ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾನೆ. ರಕ್ತ ಬರುವಂತೆ ಕ್ರೂರವಾಗಿ ಥಳಿಸಿ, ನಂತರ ಬಲವಂತವಾಗಿ ಮೂತ್ರ ಕುಡಿಸಿದ್ದಾನೆ. ಈ ಭೀಕರ ದೃಶ್ಯಗಳನ್ನು ಕಂಡು ಮಕ್ಕಳು ಭಯದಿಂದ ಕೂಗಾಡಿದ್ದರೂ ಈ ರಾಕ್ಷಸನಿಗೆ ದಯೆ ಬಂದಿಲ್ಲ. ಸದ್ಯ ಸಂತ್ರಸ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿ ಪತಿಯ ವಿರುದ್ಧ ಕಠಿಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು