ಪುತ್ತೂರು: ನಗರದ ತೆಂಕಿಲದಲ್ಲಿರುವ ವಿವೇಕಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 5ರಂದು ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ (Gold Medal) ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳು:
ಸ್ಮೃತಿ ಕೆ.: 10ನೇ ತರಗತಿ (ಒಳಮೊಗ್ರು ಪ್ರವೀಣ್ ಪೂಜಾರಿ ಮತ್ತು ತ್ರಿವೇಣಿ ದಂಪತಿಯ ಪುತ್ರಿ)
ಲಾವಣ್ಯಾ ಕೆ. ನಾಯಕ್: 10ನೇ ತರಗತಿ (ಮುಂಡೂರಿನ ಲವಕುಮಾರ್ ಮತ್ತು ನಳಿನಾಕ್ಷಿ ನಾಯಕ್ ದಂಪತಿಯ ಪುತ್ರಿ)
ಅಭೀಶ್ ರೈ ಮಂದಾರ: 9ನೇ ತರಗತಿ (ಕುಂಬ್ರ ಸುಂದರ್ ರೈ ಮಂದಾರ ಮತ್ತು ಮಲ್ಲಿಕಾ ಎಸ್. ರೈ ದಂಪತಿಯ ಪುತ್ರ)
ಕುಶಿತ್ ಆರ್. ಎಂ.: 8ನೇ ತರಗತಿ (ಬಪ್ಪಳಿಗೆ ಎಂ. ರಾಜು ಮತ್ತು ಬಿ. ಮೇಘ ದಂಪತಿಯ ಪುತ್ರ)
ಪವಿಶ್ರೀ ಆರ್.: 8ನೇ ತರಗತಿ (ಬಲ್ನಾಡು ರಮೇಶ ಮತ್ತು ಯಶೋದ ದಂಪತಿಯ ಪುತ್ರಿ)
ಶೌರ್ಯ ಕೆ.: 8ನೇ ತರಗತಿ (ಕುಳ, ಬಂಟ್ವಾಳದ ಲೋಕೇಶ್ ಎಸ್. ಮತ್ತು ವಿಜಯಲಕ್ಷ್ಮಿ ಕೆ. ದಂಪತಿಯ ಪುತ್ರ)
ಇದನ್ನೂ ಓದಿ: ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ
ಆಡಳಿತ ಮಂಡಳಿ ಅಭಿನಂದನೆ:
ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಅವರು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದರು.ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಗೆ ಶಾಲೆಯ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಅವರು ಪತ್ರಿಕಾ ಪ್ರಕಟಣೆಯ ಮೂಲಕ ಶ್ಲಾಘಿಸಿ, ಶುಭ ಹಾರೈಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

