ಭಾರತದ ಮುಂಚೂಣಿಯ ಕಾರು ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್ (Tata Motors), ತನ್ನ ಬಹುನಿರೀಕ್ಷಿತ ‘ಟಾಟಾ ಪಂಚ್ HBX’ (Tata Punch HBX) ವಿಶೇಷ ಆವೃತ್ತಿಯ ಹೊಸ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ವರ್ಷದ ಆರಂಭದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ HBX ಮಾದರಿಯ ಬಗ್ಗೆ ಆನಂತರ ಕಂಪನಿಯು ಯಾವುದೇ ಹೊಸ ಅಪ್‌ಡೇಟ್ ನೀಡಿರಲಿಲ್ಲ. ಇದರಿಂದಾಗಿ ಈ ಕಾರು ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಅನುಮಾನ ಗ್ರಾಹಕರಲ್ಲಿ ಮೂಡಿತ್ತು. ಆದರೆ ಇದೀಗ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಅಧಿಕೃತ ಟೀಸರ್ ಬಿಡುಗಡೆ ಮಾಡಿದ್ದು, ಪಂಚ್ HBX ಇನ್ನೂ ಕಂಪನಿಯ ಭವಿಷ್ಯದ ಯೋಜನೆಯ ಪ್ರಮುಖ ಭಾಗವಾಗಿರುವುದು ಸ್ಪಷ್ಟವಾಗಿದೆ.
ಹೊಸ ಟಾಟಾ ಪಂಚ್ HBX ತನ್ನ ಮೂಲ ವಿನ್ಯಾಸದ ಶೈಲಿಯನ್ನು ಉಳಿಸಿಕೊಂಡಿದ್ದರೂ, ಸಾಮಾನ್ಯ ಆವೃತ್ತಿಗಿಂತ ಹೆಚ್ಚು ರಗಡ್ (Rugged) ಹಾಗೂ ಸಾಹಸಪ್ರಿಯ ಆಫ್-ರೋಡ್ ಶೈಲಿಯ ಲುಕ್ ಪಡೆದುಕೊಂಡಿದೆ. ವಾಹನ ಪ್ರಿಯರನ್ನು ಸೆಳೆಯಲು ಇದರಲ್ಲಿ ಹಲವು ಆಕರ್ಷಕ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗಕ್ಕೆ ಹೆಚ್ಚು ಸ್ಪೋರ್ಟಿ ಲುಕ್ ನೀಡಲು ಹೊಸ ಬಂಪರ್‌ಗಳು ಹಾಗೂ ಸ್ಕಿಡ್ ಪ್ಲೇಟ್‌ಗಳನ್ನು ಅಳವಡಿಸಲಾಗಿದೆ.

ಅತ್ಯಾಕರ್ಷಕ ಡ್ಯುಯಲ್-ಟೋನ್ ಶೈಲಿಯ 16 ಇಂಚಿನ ಅಲಾಯ್ ವೀಲ್‌ಗಳು, ದಪ್ಪನೆಯ ಸೈಡ್ ಕ್ಲಾಡಿಂಗ್ ಮತ್ತು ವಿಶಾಲವಾದ ವೀಲ್ ಆರ್ಚ್‌ಗಳು ಕಾರಿನ ಗತ್ತನ್ನು ಹೆಚ್ಚಿಸಿವೆ. ಕಪ್ಪು ಬಣ್ಣದ ರೂಫ್ (Roof) ಹಾಗೂ ಹೊರಗಿನ ರಿಯರ್ ವ್ಯೂ ಮಿರರ್‌ಗಳು (ORVM), ಏರ್-ಶೀಲ್ಡ್ ರಿಯರ್ ಸ್ಪಾಯ್ಲರ್ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಇನ್ನುಳಿದಂತೆ ಸಾಮಾನ್ಯ ಪಂಚ್ ಫೇಸ್‌ಲಿಫ್ಟ್‌ನಲ್ಲಿರುವ ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಡಿಆರ್‌ಎಲ್‌ಗಳನ್ನು (DRL) ಈ ವಿಶೇಷ ಆವೃತ್ತಿಯಲ್ಲೂ ಮುಂದುವರಿಸಲಾಗಿದೆ.
ಇದನ್ನೂ ಓದಿ: ಇವಿ ಮಾರುಕಟ್ಟೆಯಲ್ಲಿ ಪೇಟೆಂಟ್ ವಾರ್!; ಆನ್‌ಲೈನ್‌ನಲ್ಲಿ ಲೀಕ್ ಆಯ್ತು ಅಥರ್ ಮತ್ತು ಸಿಂಪಲ್ ಎನರ್ಜಿಯ ಹೊಸ ಫ್ಯಾಮಿಲಿ ಸ್ಕೂಟರ್‌ಗಳ ಲುಕ್
ಕಾರಿನ ಕಾರ್ಯಕ್ಷಮತೆಯ ವಿಚಾರಕ್ಕೆ ಬಂದರೆ, ನಂಬಲರ್ಹ ವರದಿಗಳ ಪ್ರಕಾರ ಪಂಚ್ HBX ಆವೃತ್ತಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಬಳಸುವ ಸಾಧ್ಯತೆ ಇದೆ. ಈ ಎಂಜಿನ್ 118 hp ಗರಿಷ್ಠ ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರೊಂದಿಗೆ 6-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಲಭ್ಯವಾಗುವ ನಿರೀಕ್ಷೆಯಿದ್ದು, ಕಾರಿನ ಒಟ್ಟಾರೆ ಪರ್ಫಾರ್ಮೆನ್ಸ್‌ನಲ್ಲಿ ಯಾವುದೇ ಹೆಚ್ಚುವರಿ ತಾಂತ್ರಿಕ ಬದಲಾವಣೆಗಳು ಇರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ವಿಶೇಷ ವಿನ್ಯಾಸದೊಂದಿಗೆ ಬರಲಿರುವ ಈ ಆಫ್-ರೋಡ್ ಮಾದರಿಯು ಸದ್ಯದಲ್ಲೇ ಭಾರತೀಯ ರಸ್ತೆಗಳಿಗೆ ಇಳಿಯಲಿದ್ದು, ಮಧ್ಯಮ ವರ್ಗದ ಎಸ್‌ಯುವಿ ಪ್ರಿಯರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ.
ಆಟೋ ಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

