ನಗೋಯಾ: “ಹೆಂಡತಿ ಜೊತೆಗಿನ ಜಗಳ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಒಂದೇ” ಎಂಬುದಕ್ಕೆ ಜಪಾನ್‌ನ ಮೃಗಾಲಯವೊಂದರಲ್ಲಿ ನಡೆದಿರುವ ಈ ತಮಾಷೆಯ ಘಟನೆಯೇ ಸಾಕ್ಷಿ. ತನ್ನ ಸಂಗಾತಿ (ಹೆಣ್ಣು ಗೊರಿಲ್ಲಾ) ಜೊತೆ ಸಣ್ಣ ಜಗಳ ಮಾಡಿಕೊಂಡ ನಂತರ, ಮನುಷ್ಯರಂತೆಯೇ ತೀವ್ರ ಆಲೋಚನೆಯಲ್ಲಿ ಮುಳುಗಿರುವ ಗಂಡು ಗೊರಿಲ್ಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಗೊರಿಲ್ಲಾದ ಮುಖಭಾವ ತಮಗೆ ‘ಬಹಳ ಹತ್ತಿರ ಅನಿಸುತ್ತಿದೆ’ ಎಂದು ಸಾವಿರಾರು ಪುರುಷರು ಕಮೆಂಟ್ ಮಾಡುತ್ತಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ನಾಯಕನ ಹೆಸರು ‘ಕಿಯೋಮಾಸಾ’. 13 ವರ್ಷದ ಈ ವೆಸ್ಟರ್ನ್ ಲೋಲ್ಯಾಂಡ್ ತಳಿಯ ಗಂಡು ಗೊರಿಲ್ಲಾ, ಜಪಾನ್‌ನ ನಗೋಯಾದಲ್ಲಿರುವ ಹಿಗಾಶಿಯಾಮಾ ಮೃಗಾಲಯ ಮತ್ತು ಸಸ್ಯವಿಜ್ಞಾನ ಉದ್ಯಾನವನದಲ್ಲಿ ಜನಿಸಿತ್ತು. ವಿಶೇಷವೆಂದರೆ, ಕಿಯೋಮಾಸಾ ತನ್ನ ಆಕರ್ಷಕ ಲುಕ್‌ನಿಂದಲೇ ಜಾಗತಿಕವಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ವಿಶ್ವಪ್ರಸಿದ್ಧ ಸಿಲ್ವರ್‌ಬ್ಯಾಕ್ ಗೊರಿಲ್ಲಾ ‘ಶಬಾನಿ’ಯ ಮಗನಾಗಿದ್ದಾನೆ. ತಂದೆಯಂತೆ ಮಗನೂ ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾನೆ.
ಇಲ್ಲಿದೆ ನೋಡಿ ವಿಡಿಯೋ ;
Famous gorilla Kiyomasa falls into deep contemplation after spat with mate — caught on camera in Japanese zoo pic.twitter.com/uZhzYhs5Am
— RT (@RT_com) June 9, 2026
ಸುಮಾರು ಒಂದು ನಿಮಿಷದ ಈ ವಿಡಿಯೋದಲ್ಲಿ, ಕಿಯೋಮಾಸಾ ಒಂಟಿಯಾಗಿ ಕುಳಿತುಕೊಂಡು ಮನುಷ್ಯರು ಯೋಚಿಸುವ ಶೈಲಿಯಲ್ಲಿ (Thinking Pose) ಕೈಗಳನ್ನು ಮಡಚಿ, ಒಂದು ಕೈಯನ್ನು ಬಾಯಿಯ ಮೇಲಿಟ್ಟುಕೊಂಡು ದೂರದ ಶೂನ್ಯವನ್ನು ದಿಟ್ಟಿಸುತ್ತಾ ಗಂಭೀರವಾಗಿ ಕುಳಿತಿರುವುದನ್ನು ಕಾಣಬಹುದು. ಮೃಗಾಲಯದ ವರದಿಗಳ ಪ್ರಕಾರ, ಕಿಯೋಮಾಸಾ ತನ್ನ ಸಂಗಾತಿಯೊಂದಿಗೆ ಜೋರಾಗಿ ಜಗಳವಾಡಿದ ಕೆಲವೇ ಕ್ಷಣಗಳಲ್ಲಿ ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ಇದನ್ನೂ ಓದಿ: ಬ್ಲಿಂಕಿಟ್‌ನಲ್ಲಿ ‘ಇಯರ್‌ಬಡ್ಸ್’ ಆರ್ಡರ್ ಮಾಡಿದ ಟೆಕ್ಕಿಗೆ ಸಿಕ್ತು ‘ಆಲೂಗಡ್ಡೆ’!; ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
ಎಕ್ಸ್ (ಟ್ವಿಟರ್) ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ನೆಟ್ಟಿಗರು ತಮ್ಮ ವೈಯಕ್ತಿಕ ಜೀವನಕ್ಕೆ ಹೋಲಿಸಿ ತಮಾಷೆಯ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಒಬ್ಬ ಬಳಕೆದಾರ, “ನನ್ನ ಹೆಂಡತಿ ಮುಂದೆ ನಾನು ಅತಿಯಾಗಿ ಜೋಕ್ ಮಾಡಿ ಸಿಕ್ಕಿಬಿದ್ದಾಗ ನಾನೂ ಹೀಗೆಯೇ ಇರುತ್ತೇನೆ” ಎಂದು ಬರೆದಿದ್ದಾರೆ. ಮಹಿಳೆಯೊಬ್ಬರು, “ನನ್ನ ಪತಿ ನನ್ನೊಂದಿಗೆ ಜಗಳದಲ್ಲಿ ಸೋತು ಪಕ್ಕದ ಕೋಣೆಗೆ ಹೋದಾಗ ಇದೇ ಎಕ್ಸ್‌ಪ್ರೆಷನ್ ಕೊಡ್ತಾರೆ. ಇದು ಯೂನಿವರ್ಸಲ್ ಅನ್ಸುತ್ತೆ!” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಈ ಗೊರಿಲ್ಲಾ ಮೃಗಾಲಯದಲ್ಲಿರಲು ಯೋಗ್ಯನಲ್ಲ, ಇವನ ತಲೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮನುಷ್ಯರಿಗಿಂತ ಜಾಸ್ತಿ ಆಲೋಚನೆಗಳು ಓಡುತ್ತಿವೆ” ಎಂದು ಕಾಲೆಳೆದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


