ತುಂಬೆ ಕಾಲೇಜಿನ ಶೈಕ್ಷಣಿಕ ಸಾಧನೆ; ವಿಜ್ಞಾನ ವಿಭಾಗದಲ್ಲಿ ಹಾಜಿರತ್ ಸಫಾ, ವಾಣಿಜ್ಯದಲ್ಲಿ ಯಶಿಕಾ ಕಾಲೇಜಿಗೆ ಟಾಪರ್!

ತುಂಬೆ: ಮಾರ್ಚ್ 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತುಂಬೆ ಪದವಿಪೂರ್ವ ಕಾಲೇಜು ಅತ್ಯುತ್ತಮ ಸಾಧನೆ ಮಾಡಿದ್ದು, ಸರಾಸರಿ ಶೇ. 94ರಷ್ಟು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿಭಾಗವಾರು ಫಲಿತಾಂಶದ ವಿವರ:

Advertisement

1. ವಿಜ್ಞಾನ ವಿಭಾಗ (Science):

ಪರೀಕ್ಷೆಗೆ ಹಾಜರಾದ 77 ವಿದ್ಯಾರ್ಥಿಗಳಲ್ಲಿ 74 ಮಂದಿ ಉತ್ತೀರ್ಣರಾಗಿದ್ದು, ಶೇ. 96ರಷ್ಟು ಫಲಿತಾಂಶ ಬಂದಿದೆ.

Advertisement

ಇವರಲ್ಲಿ 28 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (Distinction) ಹಾಗೂ 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದಾರೆ.

ಕುಮಾರಿ ಹಾಜಿರತ್ ಸಫಾ ಡಿ.ಬಿ 600ಕ್ಕೆ 583 ಅಂಕಗಳನ್ನು ಗಳಿಸಿ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

Advertisement

2. ವಾಣಿಜ್ಯ ವಿಭಾಗ (Commerce):

ಹಾಜರಾದ 68 ವಿದ್ಯಾರ್ಥಿಗಳಲ್ಲಿ 63 ಮಂದಿ ಉತ್ತೀರ್ಣರಾಗಿ ಶೇ. 93ರಷ್ಟು ಫಲಿತಾಂಶ ಬಂದಿದೆ.

11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಮಾರಿ ಯಶಿಕಾ ಅವರು 572 ಅಂಕ ಗಳಿಸಿ ವಿಭಾಗಕ್ಕೆ ಟಾಪರ್ ಆಗಿದ್ದಾರೆ.

ಇದನ್ನೂ ಓದಿ: 2nd PUC ಫಲಿತಾಂಶ ಪ್ರಕಟ: ರಾಜ್ಯದ ಒಟ್ಟಾರೆ ಪಾಸಿಂಗ್ ಶೇ. 86ಕ್ಕೆ ಏರಿಕೆ; ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಸಾಧನೆ!

3. ಕಲಾ ವಿಭಾಗ (Arts):

ಪರೀಕ್ಷೆ ಬರೆದ 29 ವಿದ್ಯಾರ್ಥಿಗಳಲ್ಲಿ 27 ಮಂದಿ ಪಾಸ್ ಆಗುವ ಮೂಲಕ ಶೇ. 93ರಷ್ಟು ಫಲಿತಾಂಶ ದಾಖಲಾಗಿದೆ.

15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕುಮಾರಿ ಆಶಿಯಾ ಅಮ್ನಾ 492 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು