ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಭಾರತದ ಯುವ ಚೆಸ್ ದ್ರುವತಾರೆ, ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ (R Praggnanandhaa) ಅವರನ್ನು ರಾಜಧಾನಿ ಚೆನ್ನೈನಲ್ಲಿ ಭೇಟಿಯಾಗಿ ವಿಶೇಷವಾಗಿ ಸನ್ಮಾನಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಪ್ರತಿಷ್ಠಿತ ‘ನಾರ್ವೆ ಚೆಸ್ 2026’ (Norway Chess 2026) ಚಾಂಪಿಯನ್‌ಶಿಪ್ ಪಟ್ಟವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಪ್ರಜ್ಞಾನಂದ ಅವರಿಗೆ, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ (SDAT) ಪರವಾಗಿ ಮುಖ್ಯಮಂತ್ರಿಗಳು 50 ಲಕ್ಷ ರೂಪಾಯಿ ನಗದು ಬಹುಮಾನದ ಚೆಕ್ ಹಸ್ತಾಂತರಿಸಿ ಗೌರವಿಸಿದರು.
ಇಲ್ಲಿದೆ ನೋಡಿ ವಿಡಿಯೋ:
#WATCH | Chennai | Tamil Nadu CM Vijay meets Indian Grandmaster R Praggnanandhaa and awards him Rs 50 lakh on behalf of the Sports Development Authority of Tamil Nadu after the chess player won the Norway Chess 2026 title.
(Source: TNDIPR) pic.twitter.com/Lf4dNgYrEX
— ANI (@ANI) June 8, 2026
ವಿಶ್ವದ ಘಟಾನುಘಟಿ ಆಟಗಾರರನ್ನು ಮಣಿಸಿ ನಾರ್ವೆ ಚೆಸ್ 2026 ಟ್ರೋಫಿಯನ್ನು ಮುಡಿಗೇರಿಸಿಕೊಂಡ ಪ್ರಜ್ಞಾನಂದ ಅವರ ಸಾಧನೆಯನ್ನು ಮುಖ್ಯಮಂತ್ರಿ ವಿಜಯ್ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಗೆಲುವು ಇಡೀ ದೇಶಕ್ಕೆ ಮತ್ತು ತಮಿಳುನಾಡಿಗೆ ಹೆಮ್ಮೆಯ ವಿಷಯವಾಗಿದ್ದು, ಮುಂಬರುವ ದಿನಗಳಲ್ಲಿ ಯುವ ಪೀಳಿಗೆಗೆ ಇದು ದೊಡ್ಡ ಪ್ರೇರಣೆಯಾಗಲಿದೆ ಎಂದು ಸಿಎಂ ಆಶಿಸಿದರು. ಸನ್ಮಾನದ ವೇಳೆ ಪ್ರಜ್ಞಾನಂದ ಅವರ ಕುಟುಂಬಸ್ಥರು ಹಾಗೂ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


