Breaking News

ಇಂದಿನ ರಾಶಿ ಭವಿಷ್ಯ: ಆಗಸ್ಟ್ 08 ಶನಿವಾರ ಶನಿದೇವನ ಕೃಪೆಯಿಂದ ಈ ರಾಶಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಶನಿವಾರದ ಈ ದಿನದಂದು ಚಂದ್ರನ ಉತ್ತುಂಗ ಸ್ಥಾನ ಹಾಗೂ ಶನಿದೇವನ ಪ್ರಭಾವದಿಂದಾಗಿ ದ್ವಾದಶ ರಾಶಿಗಳ ಫಲಫಲಗಳು ಹೇಗಿರಲಿವೆ ಎಂಬ ವಿವರ ಇಲ್ಲಿದೆ:

ಮೇಷ ರಾಶಿ (Aries)

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳು ದೊರೆಯಲಿವೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆ ಸಿಗಲಿದೆ. ಕೋಪ ಹಾಗೂ ದುಡುಕಿನ ನಿರ್ಧಾರಗಳನ್ನು ತಪ್ಪಿಸಿ.

ವೃಷಭ ರಾಶಿ (Taurus)

ನೆಮ್ಮದಿಯ ದಿನ ನಿಮ್ಮದಾಗಲಿದೆ. ಆದಾಯ ಹೆಚ್ಚಳ ಹಾಗೂ ಉಳಿತಾಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೇಳುವಿರಿ. ಅನಗತ್ಯ ಹಾಗೂ ಐಷಾರಾಮಿ ವೆಚ್ಚಗಳನ್ನು ನಿಯಂತ್ರಿಸುವುದು ಒಳಿತು. ಕುಟುಂಬದಲ್ಲಿ ಪ್ರೀತಿ ಮತ್ತು ಸೌಹಾರ್ದತೆ ಹೆಚ್ಚಲಿದೆ.

ಮಿಥುನ ರಾಶಿ (Gemini)

ಶನಿದೇವನ ಅನುಗ್ರಹದಿಂದ ಧನಲಾಭದ ಯೋಗವಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸ ಬದಲಾಯಿಸುವ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ಸಂಭಾಷಣೆಯಲ್ಲಿ ತಾಳ್ಮೆ ಕಾಯ್ದುಕೊಳ್ಳಿ.

ಕಟಕ ರಾಶಿ (Cancer)

ಆರ್ಥಿಕ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಲು ಸೂಕ್ತ ದಿನ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮತ್ತು ಕಚೇರಿ ರಾಜಕೀಯದಿಂದ ದೂರವಿರುವುದು ಒಳ್ಳೆಯದು. ಯಾರಿಗೂ ಸಾಲ ನೀಡಬೇಡಿ.

ಸಿಂಹ ರಾಶಿ (Leo)

ಹಣದ ಹರಿವು ಸುಗಮವಾಗಲಿದ್ದು, ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ತಡೆಹಿಡಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಸಣ್ಣಪುಟ್ಟ ವಿಚಾರಗಳಿಗೆ ಕೋಪಗೊಳ್ಳಬೇಡಿ, ನಿರ್ಧಾರಗಳನ್ನು ಶಾಂತಚಿತ್ತದಿಂದ ತೆಗೆದುಕೊಳ್ಳಿ.

ಕನ್ಯಾ ರಾಶಿ (Virgo)

ಖರ್ಚು ವೆಚ್ಚಗಳು ಕಡಿಮೆಯಾಗಿ ನೆಮ್ಮದಿ ಸಿಗಲಿದೆ. ವೃತ್ತಿ ಜೀವನದಲ್ಲಿ ಒತ್ತಡ ಕಡಿಮೆಯಾಗಲಿದ್ದು, ನಿಮ್ಮ ಕಾರ್ಯವೈಖರಿಗೆ ಸಮಾಜ ಹಾಗೂ ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ದೊರೆಯಲಿದೆ. ವೈವಾಹಿಕ ಜೀವನದಲ್ಲಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಿ.

ತುಲಾ ರಾಶಿ (Libra)

ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಯಶಸ್ಸು ಸಿಗಲಿದೆ. ಹೂಡಿಕೆ ಹಾಗೂ ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ವ್ಯವಹಾರದಲ್ಲಿ ಸಹೋದ್ಯೋಗಿಗಳು ಮತ್ತು ಪಾಲುದಾರರನ್ನು ಎಚ್ಚರಿಕೆಯಿಂದ ನಿರ್ವಹಿಸಿ.

ವೃಶ್ಚಿಕ ರಾಶಿ (Scorpio)

ಅನಿರೀಕ್ಷಿತ ಧನಲಾಭ ಹಾಗೂ ಹಳೆಯ ಸಾಲಗಳು ವಸೂಲಿಯಾಗುವ ಸಾಧ್ಯತೆಯಿದೆ. ಭವಿಷ್ಯದ ಆರ್ಥಿಕ ಯೋಜನೆಗಳ ಮೇಲೆ ಗಮನಹರಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ.

ಧನು ರಾಶಿ (Sagittarius)

ಉಲ್ಲಾಸದ ದಿನವಾಗಿದೆ. ಹೊಸ ಜನರ ಪರಿಚಯದಿಂದ ಶೈಕ್ಷಣಿಕ ಅಥವಾ ವ್ಯವಹಾರಿಕ ರಂಗದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಹೂಡಿಕೆಗೆ ಒಳ್ಳೆಯ ಸಮಯವಾದರೂ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಮಕರ ರಾಶಿ (Capricorn)

ಕೆಲಸದಲ್ಲಿ ನಿಮ್ಮ ಮೇಲಿರುವ ಜವಾಬ್ದಾರಿಗಳು ಹೆಚ್ಚಾಗಲಿವೆ. ಹಣಕಾಸಿನ ನಿರ್ಧಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಬುದ್ಧಿವಂತಿಕೆಯಿಂದ ಯೋಚಿಸಿ ನಿರ್ಧರಿಸಿ. ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ.

ಕುಂಭ ರಾಶಿ (Aquarius)

ಉದ್ಯೋಗದಲ್ಲಿ ಸಕಾರಾತ್ಮಕ ಬದಲಾವಣೆ ಅಥವಾ ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ. ನಿಮ್ಮ ಕಾರ್ಯವೈಖರಿ ಹಿರಿಯ ಅಧಿಕಾರಿಗಳ ಮನಗೆಲ್ಲಲಿದೆ. ಆರೋಗ್ಯದ ಕಡೆಗೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯ.

ಮೀನ ರಾಶಿ (Pisces)

ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರಿಗೆ ಬಂಡವಾಳ ಹೂಡಿಕೆಗೆ ಸೂಕ್ತ ಬೆಂಬಲ ಮತ್ತು ಲಾಭ ದೊರೆಯಲಿದೆ. ದೀರ್ಘಕಾಲದ ಕನಸು ನನಸಾಗುವ ಹಾದಿಯಲ್ಲಿದೆ. ಧಾರ್ಮಿಕ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.

Leave a Reply

Your email address will not be published. Required fields are marked *