ಉಡುಪಿ ಪರ್ಯಾಯ ಮಹೋತ್ಸವ: ಸಂಚಾರ ಮಾರ್ಗಗಳಲ್ಲಿ ಬದಲಾವಣೆ

udupi

ಉಡುಪಿ:   ಜ 17 ಮತ್ತು 18ರಂದು ನಡೆಯಲಿರುವ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಮಹೋತ್ಸವದ ಅಂಗವಾಗಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಪರ್ಯಾಯ ಪುರಪ್ರವೇಶ ಮೆರವಣಿಗೆ ಇಂದು  ನಡೆಯಲಿದೆ.

ಶಾರದಾ ಕಲ್ಯಾಣ ಮಂಟಪದಿಂದ ಮೆರವಣಿಗೆ ಆರಂಭವಾಗಿ, ಮಾರ್ಗ 169(ಎ) ಮೂಲಕ ಶಿರಿಬೀಡು ಜಂಕ್ಷನ್ಗೆ ತೆರಳಿ, ಅಲ್ಲಿಂದ ಸರ್ವಿಸ್ ಬಸ್ ನಿಲ್ದಾಣ – ತ್ರಿವೇಣಿ ಜಂಕ್ಷನ್ – ಕನಕದಾಸ ರಸ್ತೆ ಮೂಲಕ ಸಾಗಲಿ ದ್ದು, ಅದ್ದರಿಂದ  ವಾಹನ ಸಂಚಾರ ನಿಷೇದಿಸಲಾಗಿದ್ದು ಮತ್ತು ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.  ಜನವರಿ 9 ರಂದು ಮಧ್ಯಾಹ್ನ 1 ರಿಂದ ಸಂಜೆ 7 ಗಂಟೆಯವರೆಗೆ ಆದೇಶ ಜಾರಿಯಲ್ಲಿರುತ್ತದೆ.

 

ಎಲ್ಲೆಲ್ಲಿ ಸಂಚಾರ ನಿಯಮದಲ್ಲಿ ಬದಲಾವಣೆ:

ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವ ವಾಹನಗಳು ಸುನಾಗ್ ಆಸ್ಪತ್ರೆ ಬಳಿ (ಎಂಬಿಎಂ ಎದುರು) ಎಡ ತಿರುವು ಪಡೆದು, ಸುಧೀಂದ್ರ ಕಲ್ಯಾಣ ಮಂಟಪದ ಮೂಲಕ ಸಾಗಿ, ಎಸ್ಕೆಎಂ ಬಳಿ ಮತ್ತೊಂದು ಎಡ ತಿರುವು ಪಡೆದು, ಬೀಡಿನಗುಡ್ಡೆ – ಚಿತ್ತಡಿ – ಅಮ್ಮಣಿ ರಾಮಣ್ಣ ಹಾಲ್ ರಸ್ತೆ ಮೂಲಕ ಮುಂದುವರಿದು, ನಂತರ ಮಿಷನ್ ಕಾಂಪೌಂಡ್ ಜಂಕ್ಷನ್ ತಲುಪಿ ಉಡುಪಿ ನಗರ ಪ್ರವೇಶಿಸಬೇಕು.

ಇದನ್ನೂ ಓದಿ : Mangalore : ‘ಹಕ್ಕಿ ಹಬ್ಬ’ ಪಕ್ಷಿ ಉತ್ಸವ : ಜ.9 ರಿಂದ ಮಂಗಳೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು

ಮೆರವಣಿಗೆ ಪ್ರವೇಶದ ಸಮಯದಲ್ಲಿ ಶಿರಿಬೀಡು ಜಂಕ್ಷನ್ನಿಂದ ಕಿದಿಯೂರು ಹೋಟೆಲ್ ಮೂಲಕ ಸರ್ವಿಸ್ ಬಸ್ ನಿಲ್ದಾಣದವರೆಗಿನ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು.

ಮಂಗಳೂರು ಕಡೆಯಿಂದ ಉಡುಪಿ ನಗರ ಪ್ರವೇಶಿಸುವ ಎಲ್ಲಾ ವಾಹನಗಳು ಹಳೆ ಡಯಾನಾ ವೃತ್ತದಿಂದ ಮಿತ್ರ ಪ್ರಿಯ ಜಂಕ್ಷನ್ ಕಡೆಗೆ ತಿರುಗಿ, ಚಿತ್ರಾಂಜನ ವೃತ್ತ, ಸಂಸ್ಕೃತ ಕಾಲೇಜು ಜಂಕ್ಷನ್, ಜಾಮಿಯಾ ಮಸೀದಿ ಜಂಕ್ಷನ್ ಮೂಲಕ ಎಡ ತಿರುವು ಪಡೆದು ಸರ್ವಿಸ್ ಬಸ್ ನಿಲ್ದಾಣ ತಲುಪಬೇಕು.

ಈ ಸಂಚಾರ ನಿಯಮಗಳು  ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಮತ್ತು ಎಲ್ಲಾ ರೀತಿಯ ತುರ್ತು ಸೇವಾ ವಾಹನಗಳಿಗೆ ಅನ್ವಯಿಸುವುದಿಲ್ಲ.

ಪರ್ಯಾಯ ಪುರಪ್ರವೇಶ ಮೆರವಣಿಗೆ ಯ ಸಲುವಾಗಿ  ವಾಹನ ಸವಾರರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ  ಪ್ರಕಟಣೆಯಲ್ಲಿ ತಿಳಿಸಿದೆ .

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು