ಉಡುಪಿ: ಮಲ್ಪೆ ಕಡಲತೀರದಲ್ಲಿ ಕಣ್ಣುಮನ ಸೆಳೆದ ಭವ್ಯ ‘ಗಂಗಾರತಿ’; ಕೊಡವೂರು ದೇವಸ್ಥಾನದ ಮಹಾರುದ್ರ ಯಾಗದ ಅಂಗವಾಗಿ ವಿಶೇಷ ಪೂಜೆ!

ಉಡುಪಿ: ಧಾರ್ಮಿಕ ನಗರಿ ಉಡುಪಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗುತ್ತಿರುವ ‘ಮಹಾರುದ್ರ ಯಾಗ’ದ ಅಂಗವಾಗಿ ಪ್ರಸಿದ್ಧ ಮಲ್ಪೆ ಬೀಚ್‌ನಲ್ಲಿ ರವಿವಾರ ಸಂಜೆ ಅತ್ಯಂತ ಕಲಾತ್ಮಕ ಹಾಗೂ ಭವ್ಯವಾದ ಗಂಗಾರತಿ ಕಾರ್ಯಕ್ರಮ ನೆರವೇರಿತು.

ಕೊಡವೂರು ಕ್ಷೇತ್ರದಿಂದ ಕಡಲತೀರದವರೆಗೆ ತಾಲೂಕಿನ ಭಕ್ತಾದಿಗಳು ಸಕಲ ವಾದ್ಯ-ಮೇಳಗಳೊಂದಿಗೆ ಆಗಮಿಸಿದ್ದರು. ರವಿವಾರ ಸಂಜೆ ಸೂರ್ಯಾಸ್ತದ ಸುಂದರ ಹೊತ್ತಿನಲ್ಲಿ ಮಲ್ಪೆಯ ಸಮುದ್ರ ತೀರದಲ್ಲಿ ಅರ್ಚಕ ವೃಂದದವರು ಕರಾವಳಿಯ ಸಂಸ್ಕೃತಿಗೆ ಅನುಗುಣವಾಗಿ ಸಮುದ್ರ ರಾಜನಿಗೆ ಮತ್ತು ಗಂಗೆಗೆ ಮಹಾಮಂಗಳಾರತಿ ನೆರವೇರಿಸಿದರು. ನೂರಾರು ದೀಪಗಳ ಜ್ವಾಲೆಯಲ್ಲಿ ಬೆಳಗಿದ ಭವ್ಯ ಗಂಗಾರತಿಯ ಈ ದಿವ್ಯ ದೃಶ್ಯವು ಸ್ಥಳದಲ್ಲಿದ್ದ ಸಾವಿರಾರು ಭಕ್ತರ ಮತ್ತು ಪ್ರವಾಸಿಗರ ಕಣ್ಣುಮನ ಸೆಳೆಯಿತು.

ಇದನ್ನೂ ಓದಿ;ಉಡುಪಿ: 90 ಅಡಿ ಆಳದ ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ; ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಸಾಹಸ!

ಈ ವಿಶೇಷ ಧಾರ್ಮಿಕ ಕರ ಸೇವೆಯ ನೇತೃತ್ವವನ್ನು ಪ್ರಮುಖ ಉದ್ಯಮಿ ಹಾಗೂ ದೇವಸ್ಥಾನದ ಪ್ರಮುಖರಾದ ಪ್ರಸಾದ್ ರಾಜ್ ಕಾಂಚನ್ ಅವರು ವಹಿಸಿಕೊಂಡಿದ್ದರು. ಕರಾವಳಿಯ ಇತಿಹಾಸದಲ್ಲಿ ಇಂತಹ ಭವ್ಯ ಗಂಗಾರತಿ ಕಾರ್ಯಕ್ರಮಗಳು ಧಾರ್ಮಿಕ ಜಾಗೃತಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ವಿಶಿಷ್ಟ ಮೈಲಿಗಲ್ಲಾಗಿವೆ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು