ಜೈಲಿಂದ ಬಂದರೂ ಬುದ್ಧಿ ಕಲಿಯದ ಕಳ್ಳನಿಗೆ ಸಾರ್ವಜನಿಕರ ಕ್ಲಾಸ್!: ಜಿಪಿಎಸ್ ಟ್ರ್ಯಾಕರ್ ಧರಿಸಿದ್ದವನಿಗೆ ಬಿತ್ತು ಧರ್ಮದೇಟು

ಬ್ರೆಸಿಲಿಯಾ: ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಕಾಲಿಗೆ ಎಲೆಕ್ಟ್ರಾನಿಕ್ ಆಂಕಲ್ ಮಾನಿಟರ್ (Electronic Ankle Monitor) ಧರಿಸಿದ್ದ ಹೊರಗಿದ್ದ ಅಪರಾಧಿಯೊಬ್ಬ, ಬ್ರೆಜಿಲ್‌ನಲ್ಲಿ ಮತ್ತೆ ಕಳ್ಳತನ ಮಾಡಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಕ್ರೋಶಗೊಂಡ ಸ್ಥಳೀಯ ನಾಗರಿಕರು ಆತನಿಗೆ ತೀವ್ರವಾಗಿ ಥಳಿಸಿ, ಬಳಿಕ ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ರಸ್ತೆಯ ಮಧ್ಯದಲ್ಲೇ ಬಿಟ್ಟು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ ಸ್ಥಳೀಯ ನಾಗರಿಕರು ಅಲ್ಲಿನ ಆಡಳಿತ ವ್ಯವಸ್ಥೆ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಯಾವ ನ್ಯಾಯ ಮತ್ತು ಸುರಕ್ಷತೆಯನ್ನು ಇಲ್ಲಿನ ಸರ್ಕಾರಕ್ಕೆ ನೀಡಲು ಸಾಧ್ಯವಾಗಲಿಲ್ಲವೋ, ಆ ನ್ಯಾಯವನ್ನು ಇಂದು ಸಾಮಾನ್ಯ ಜನರೇ ಒಟ್ಟಾಗಿ ತೀರ್ಮಾನಿಸಿ ಪಡೆದುಕೊಂಡಿದ್ದಾರೆ” ಎಂದು ನಾಗರಿಕರು ಘೋಷಿಸಿದ್ದಾರೆ. ಬ್ರೆಜಿಲ್‌ನ ಕೆಲವು ನಗರಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಕರುಳು ಹಿಂಡುವ ಘಟನೆ: 10 ವರ್ಷದ ಬಾಲಕಿಯ ಭೀಕರ ಹತ್ಯೆಗೈದ ಪಾಪಿ ತಂದೆ ಅರೆಸ್ಟ್!

ಇಲ್ಲಿದೆ ನೋಡಿ ಎಕ್ಸ್ ವಿಡಿಯೋ

ಸಾಮಾನ್ಯವಾಗಿ ಗಂಭೀರ ಅಪರಾಧ ಎಸಗಿದ ಕೈದಿಗಳು ಜೈಲಿನಿಂದ ಪೆರೋಲ್ ಅಥವಾ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಾಗ ಅವರ ಚಲನವಲನದ ಮೇಲೆ ನಿಗಾ ಇಡಲು ಕಾಲಿಗೆ ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಆಂಕಲ್ ಮಾನಿಟರ್ ಅಳವಡಿಸಲಾಗುತ್ತದೆ. ಆದರೆ, ಈತ ತಾನು ಸದಾ ಪೊಲೀಸರ ನಿಗಾದಲ್ಲಿದ್ದೇನೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಮತ್ತೆ ಸಾರ್ವಜನಿಕರ ಸ್ವತ್ತು ಕದಿಯಲು ಹೋಗಿ ಜನಾಕ್ರೋಶದ ಬಲೆಗೆ ಬಿದ್ದಿದ್ದಾನೆ. ಸದ್ಯ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಳ್ಳನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು