ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಕಾಂಪ್ಲ್ಯಾನ್ ಅಥವಾ ಪೌಷ್ಟಿಕ ಆಹಾರ ನೀಡುವುದು ಹಳೆಯ ಪದ್ಧತಿ. ಆದರೆ ಇಂದಿನ ಕಾಂಪಿಟೇಷನ್ ಜಗತ್ತಿನಲ್ಲಿ ಹೆತ್ತವರ ಹುಚ್ಚು ಹಠದಿಂದ ಬಾಲಕನೊಬ್ಬನ್ನು ಅಮಾನವೀಯ ಚಿತ್ರಹಿಂಸೆಗೆ ಒಳಗಾಗಿರುವ ದಾರುಣ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದಿದೆ. ಮಗನ ಎತ್ತರ (Height) ಹೆಚ್ಚಿಸಬೇಕೆಂಬ ಮೊಂಡುತನಕ್ಕೆ ಬಿದ್ದ ಪೋಷಕರು, ಹೆತ್ತ ಮಗನನ್ನೇ ಬಾಗಿಲಿನ ಫ್ರೇಮ್‌ಗೆ ಕಟ್ಟಿ ನೇತುಹಾಕಿರುವ ವೀಡಿಯೋ ನೋಡಿ ಇಡೀ ಇಂಟರ್ನೆಟ್ ಲೋಕವೇ ಬೆಚ್ಚಿಬಿದ್ದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆ ಬಾಲಕನ ಕೈಗಳನ್ನು ಬಾಗಿಲಿನ ಮೇಲ್ಭಾಗದ ಫ್ರೇಮ್‌ಗೆ ಕಟ್ಟಿ ಮೇಲಕ್ಕೆ ತೂಗುಹಾಕಲಾಗಿದೆ. ತೀವ್ರ ನೋವಿನಿಂದ ಕಿರುಚಾಡುತ್ತಾ ಕಣ್ಣೀರಿಡುತ್ತಿದ್ದರೂ ಹೆತ್ತ ತಂದೆ-ತಾಯಿ ಮಾತ್ರ ಕರಗದೆ ಕ್ರೂರವಾಗಿ ನಿಂತಿರುವುದನ್ನು ಇಲ್ಲಿ ನೋಡಬಹುದು. ಮಗ ಸಮಾಜದ ಕಣ್ಣಿಗೆ ಎತ್ತರವಾಗಿ ಕಾಣಬೇಕು ಎಂಬ ಒಂದೇ ಒಂದು ಹುಚ್ಚು ಉದ್ದೇಶಕ್ಕಾಗಿ ಹೆತ್ತವರೇ ಮಗುವಿಗೆ ಈ ರೀತಿ ಟಾರ್ಚರ್ ನೀಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: ಅಮೀರ್ ಖಾನ್ ಮದುವೆ ಮಾಡಿಕೊಳ್ಳಲು ನಾನು ಸಿದ್ಧ; ಇಸ್ಲಾಂ ಅನ್ನು ಸಹ ಸ್ವೀಕರಿಸುತ್ತೇನೆ ಎಂದ ರಾಖಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
WTF …. pic.twitter.com/Bj2QebTYg0
— Indrajit (@Lotus_indrajit) July 6, 2026
ಆ ಬಾಲಕನ ಕಿರುಚಾಟವು ಕೆಳಗಿನ ಮಹಡಿವರೆಗೂ ಕೇಳಿಸಿದೆ. ಇದನ್ನು ಕೇಳಿ ತಡೆಯಲಾರದೆ ಓಡಿಬಂದ ಪಕ್ಕದ ಮನೆಯ ಮಹಿಳೆಯೊಬ್ಬರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ, ಹೆತ್ತವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಮಗುವಿಗೆ ಯಾರಾದರೂ ಈ ರೀತಿ ಟಾರ್ಚರ್ ಕೊಡ್ತಾರಾ? ಮಗುವಿನ ಅಳು ನೋಡುತ್ತಿದ್ದರೆ ನನ್ನ ಎದೆ ಒಡೆದುಹೋದಂತಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಮಗುವಿಗೆ ತಂದೆಯು ಹೊಡೆಯುತ್ತಿದ್ದಾನೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

