‘ಕಾಂತಾರ: ಚಾಪ್ಟರ್ 2’ ಕಥೆ ಬರೆಯಲು ಕೂತ ರಿಷಬ್ ಶೆಟ್ಟಿ! ಕೈಯಲ್ಲಿವೆ ಮತ್ತೆರಡು ಪ್ಯಾನ್-ಇಂಡಿಯಾ ಮೆಗಾ ಸಿನಿಮಾಗಳು

2025ರಲ್ಲಿ ತೆರೆಕಂಡು ಭಾರಿ ದಾಖಲೆ ಬರೆದಿದ್ದ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕಾಂತಾರ ಬುಡಕಟ್ಟು ಜನಾಂಗ ಮತ್ತು ಕ್ರೂರ ರಾಜ ಹಾಗೂ ಆತನ ಮಕ್ಕಳ ನಡುವಿನ ಸಂಘರ್ಷವನ್ನು ತೋರಿಸಲಾಗಿತ್ತು. ಚಿತ್ರದ ಕೊನೆಯಲ್ಲೇ ಮುಂದಿನ ಭಾಗದ ಸುಳಿವು ನೀಡಲಾಗಿತ್ತು. ಈಗ ಸಿದ್ಧವಾಗುತ್ತಿರುವ ‘ಕಾಂತಾರ: ಚಾಪ್ಟರ್ 2’ ಕಥೆಯಲ್ಲಿ, ಆ ರಾಜಮನೆತನದ ಮುಂದಿನ ಪೀಳಿಗೆ ಹಾಗೂ ಬುಡಕಟ್ಟು ಸಮುದಾಯದ ನಡುವೆ ನಡೆಯುವ ಬಿಗ್ ಫೈಟ್ ಮತ್ತು ದೈವಿಕ ಶಕ್ತಿಗಳ ಹಸ್ತಕ್ಷೇಪದ ಮತ್ತಷ್ಟು ರೋಚಕ ಕಥೆ ಅನಾವರಣಗೊಳ್ಳಲಿದೆ.

ರಿಷಬ್ ಕೈಯಲ್ಲಿವೆ ಎರಡು ದೈತ್ಯ ಚಿತ್ರಗಳು: ಮಲ್ಟಿಟಾಸ್ಕ್ ಮಾಡಲ್ಲ ಎಂದ ನಟ!

Advertisement

ನಿರ್ದೇಶನದ ಜೊತೆಗೆ ನಟನಾಗಿಯೂ ರಿಷಬ್ ಶೆಟ್ಟಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಬತ್ತಳಿಕೆಯಲ್ಲಿ ಈಗ ಎರಡು ದೊಡ್ಡ ಪ್ಯಾನ್-ಇಂಡಿಯಾ ಸಿನಿಮಾಗಳಿವೆ. ಆದರೆ ಏಕಕಾಲಕ್ಕೆ ಎರಡು ಚಿತ್ರಗಳಲ್ಲಿ ನಟಿಸಲು ತಾವು ಇಷ್ಟಪಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ನನಗೆ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಲು ಆಗುವುದಿಲ್ಲ, ಮಲ್ಟಿಟಾಸ್ಕ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮೊದಲು ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಮುಗಿಸಿಕೊಡಲಿದ್ದೇನೆ. ಅದಾದ ಬಳಿಕವಷ್ಟೇ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದೇನೆ. ಈ ಎರಡು ಚಿತ್ರಗಳಿಗೂ ನನಗೆ ಸಂಪೂರ್ಣ ಭಿನ್ನವಾದ ಲುಕ್ ಮತ್ತು ತಯಾರಿ ಬೇಕಾಗಿದೆ” ಎಂದು ರಿಷಬ್ ಶೆಟ್ಟಿ ತಮ್ಮ ಯೋಜನೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೇರುಗಳನ್ನು ಮರೆಯದ ‘ಡಿವೈನ್ ಸ್ಟಾರ್’: ರಿಷಬ್ ಶೆಟ್ಟಿ ಮನೆಯಲ್ಲಿ ಸಾಂಪ್ರದಾಯಿಕ ಯಕ್ಷಗಾನ, ಭಜನಾ ವೈಭವ

ಒಟ್ಟಾರೆಯಾಗಿ, ಬ್ಯಾಕ್ ಟು ಬ್ಯಾಕ್ ಮೆಗಾ ಪ್ರೊಜೆಕ್ಟ್‌ಗಳ ಮೂಲಕ ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *