ಮಂಗಳೂರು : ಇತ್ತೀಚೆಗೆ ಅಪಘಾತಗಳು ಹೆಚ್ಚಾಗ್ತಾ ಇವೆ. ಜೊತೆಗೆ ಅಪಾಯದಿಂದ ಪಾರಾಗುವವರು ಕೂಡಾ ತಾವು ಬದುಕಿ ಬಂದ ಕ್ಷಣವನ್ನು ಮತ್ತೆ ಮೆಲುಕು ಹಾಕಿ ಭಯಭೀತರಾಗುತ್ತಾರೆ. ಇದೀಗ ಮಂಗಳೂರಿನ ಹೊರ ವಲಯದ ಮರಕಡದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಟೈರ್ ಸ್ಪೋಟಗೊಂಡ ಕಾರೊಂದು ಅಪಘಾತಕ್ಕೀಡಾಗಿ ಮನೆಯ ಕಾಂಪೌಂಡ್ ಹಾರಿ ಬಂದು ಅಂಗಳಕ್ಕೆ ಬಂದು ಬಿದ್ದಂತಹ ಘಟನೆ ಮಂಗಳೂರಿನ ಮರಕಡದಲ್ಲಿ ನಡೆದಿದೆ. ಘಟನೆಯ ವೀಡಿಯೋ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಇದನ್ನೂ ಓದಿ : Viral Video: ಪೊಲೀಸರನ್ನು ಹೆದರಿಸಲು ಸತ್ತ ಹಾವನ್ನು ತಂದ ಕುಡುಕನ ಅವಾಂತರ
ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದವರನ್ನು ಮಂಗಳೂರಿನ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್‌ನ ಧರ್ಮಗುರು ಫಾದರ್ ಆಂಡ್ರೂ ಲಿಯೋ ಡಿಸೋಜಾ ಎಂದು ಗುರುತಿಸಲಾಗಿದೆ.
ವಿಡಿಯೋ ನೋಡಿ :
View this post on Instagram
ಇದನ್ನೂ ಓದಿ : ನಿಧಿಗಾಗಿ ಮಗುವಿನ ಬಲಿಗೆ ಸಿದ್ಧತೆ! ಮಕ್ಕಳ ರಕ್ಷಣಾ ಘಟಕಾಧಿಕಾರಿಗಳ ಎಂಟ್ರಿ
ಮರಕಡದಲ್ಲಿ ಬರುತ್ತಿದ್ದಾಗ ಏಕಾಏಕಿ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದು, ಇದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ವೇಗವಾಗಿ ಸಾಗಿ ಪಕ್ಕದ ಕಾಂಪೌಂಡ್ ಏರಿ ಮನೆಯೊಂದರ ಗೋಡೆಗೆ ಗುದ್ದಿ ಅಂಗಳಕ್ಕೆ ಬಿದ್ದಿದೆ. ಕೂಡಲೇ ಅಲ್ಲಿಗೆ ಓಡಿ ಬಂದ ಸ್ಥಳೀಯರು ಮಗುಚಿ ಬಿದ್ದ ಕಾರನ್ನು ನೇರವಾಗಿ ನಿಲ್ಲಿಸಿ ಕಾರಿನೊಳಗಿದ್ದ ಫಾದರ್ ಆಂಡ್ರೂ ಅವರನ್ನು ಅಲ್ಲಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇವರೇ ನನ್ನನ್ನು ಬದುಕಿಸಿದ್ದಾನೆ ಎಂದು ಹೇಳಿದರು. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

