Breaking News

2027ರ ವಿಶ್ವಕಪ್ ಬೆನ್ನಲ್ಲೇ ‘ಕಿಂಗ್ ಕೊಹ್ಲಿ’ ಗುಡ್‌ಬೈ

ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿಯ ಕುರಿತು ಅತ್ಯಂತ ಪ್ರಮುಖ ಘೋಷಣೆಯೊಂದನ್ನು ಮಾಡಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ (2027 ODI World Cup) ತಮ್ಮ ವೃತ್ತಿಜೀವನದ ಕೊನೆಯ ಟೂರ್ನಿಯಾಗಿದ್ದು, ಭಾರತಕ್ಕಾಗಿ ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಗೆದ್ದು ಕೊಡುವುದು ತಮ್ಮ ಅಂತಿಮ ಗುರಿಯಾಗಿದೆ ಎಂದು ಪ್ರಸಾರಕ ಸಂಸ್ಥೆ ‘ಜಿಯೋಸ್ಟಾರ್’ (JioStar) ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿರುವ ಕೊಹ್ಲಿ, ಪ್ರಸ್ತುತ ಕೇವಲ 50 ಓವರ್‌ಗಳ ಏಕದಿನ (ODI) ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 2027ರ ವಿಶ್ವಕಪ್ ವರೆಗೆ ವಿರಾಟ್ ಕೊಹ್ಲಿ ಭಾರತದ ಪರ ಒಟ್ಟು ಎಷ್ಟು ಏಕದಿನ ಪಂದ್ಯಗಳನ್ನು ಆಡಲಿದ್ದಾರೆ ಎಂಬ ಸರಣಿವಾರು ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರುವ ಖಚಿತ ಸರಣಿಗಳ ವಿವರ

ಪ್ರಸ್ತುತ ಬೋರ್ಡ್‌ಗಳ ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 2026 ರಿಂದ ಜನವರಿ 2027 ರವರೆಗೆ ಭಾರತ ಒಟ್ಟು 14 ಖಚಿತ ದ್ವಿಪಕ್ಷೀಯ ಏಕದಿನ ಪಂದ್ಯಗಳನ್ನು ಆಡಲಿದೆ.

1. ಭಾರತ vs ವೆಸ್ಟ್ ಇಂಡೀಸ್ (ಸ್ವದೇಶಿ ಸರಣಿ – 3 ODI):

1ನೇ ಏಕದಿನ: ಸೆಪ್ಟೆಂಬರ್ 27, 2026 (ತಿರುವನಂತಪುರಂ)

2ನೇ ಏಕದಿನ: ಸೆಪ್ಟೆಂಬರ್ 30, 2026 (ಗೌಹಾಟಿ)

3ನೇ ಏಕದಿನ: ಅಕ್ಟೋಬರ್ 3, 2026 (ನ್ಯೂ ಚಂಡೀಗಢ)

2. ಭಾರತ vs ನ್ಯೂಜಿಲ್ಯಾಂಡ್ (ನ್ಯೂಜಿಲ್ಯಾಂಡ್ ಪ್ರವಾಸ – 5 ODI):

1ನೇ ಏಕದಿನ: ನವೆಂಬರ್ 4, 2026 (ಆಕ್ಲ್ಯಾಂಡ್)

2ನೇ ಏಕದಿನ: ನವೆಂಬರ್ 7, 2026 (ವೆಲ್ಲಿಂಗ್ಟನ್)

3ನೇ ಏಕದಿನ: ನವೆಂಬರ್ 10, 2026 (ಹ್ಯಾಮಿಲ್ಟನ್)

4ನೇ ಏಕದಿನ: ನವೆಂಬರ್ 13, 2026 (ಮೌಂಟ್ ಮಾವುಂಗನುಯಿ)

5ನೇ ಏಕದಿನ: ನವೆಂಬರ್ 15, 2026 (ಮೌಂಟ್ ಮಾವುಂಗನುಯಿ)

3. ಭಾರತ vs ಶ್ರೀಲಂಕಾ (ಸ್ವದೇಶಿ ಸರಣಿ – 3 ODI):

1ನೇ ಏಕದಿನ: ಡಿಸೆಂಬರ್ 13, 2026 (ದೆಹಲಿ)

2ನೇ ಏಕದಿನ: ಡಿಸೆಂಬರ್ 16, 2026 (ಬೆಂಗಳೂರು)

3ನೇ ಏಕದಿನ: ಡಿಸೆಂಬರ್ 19, 2026 (ಅಹಮದಾಬಾದ್)

4. ಭಾರತ vs ಝಿಂಬಾಬ್ವೆ (ಸ್ವದೇಶಿ ಸರಣಿ – 3 ODI):

1ನೇ ಏಕದಿನ: ಜನವರಿ 3, 2027 (ಕೋಲ್ಕತ್ತಾ)

2ನೇ ಏಕದಿನ: ಜನವರಿ 6, 2027 (ಹೈದರಾಬಾದ್)

3ನೇ ಏಕದಿನ: ಜನವರಿ 9, 2027 (ಮುಂಬೈ)

ಇದನ್ನೂ ಓದಿ: ಏಷ್ಯನ್ ಗೇಮ್ಸ್ ಪ್ರಿಪರೇಶನ್‌ನಲ್ಲಿ ಭಾರತಕ್ಕೆ ಬಿಗ್ ಶಾಕ್: ಜಪಾನ್ ವಿರುದ್ಧ ಜಸ್ಟ್ ಇನ್ ಡ್ರಾಮಾ; 2 ರನ್‌ಗಳ ರೋಚಕ ಜಯ ಸಾಧಿಸಿದ ಇಂಡಿಯಾ

ಏಷ್ಯಾ ಕಪ್ 2027 ಹಾಗೂ ಐಸಿಸಿ ಏಕದಿನ ವಿಶ್ವಕಪ್ 2027:

ಏಷ್ಯಾ ಕಪ್ 2027: 2027ರ ಏಷ್ಯಾ ಕಪ್ ಕೂಟವು ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಪಂದ್ಯಗಳ ಅಧಿಕೃತ ದಿನಾಂಕ ಮತ್ತು ಸ್ಥಳಗಳು ಇನ್ನೂ ಪ್ರಕಟವಾಗಬೇಕಿದೆ. ಭಾರತ ಫೈನಲ್ ತಲುಪಿದರೆ ಕೊಹ್ಲಿ ಖಾತೆಗೆ ಹೆಚ್ಚುವರಿಯಾಗಿ ಗರಿಷ್ಠ 6 ಏಕದಿನ ಪಂದ್ಯಗಳು ಸೇರ್ಪಡೆಯಾಗಲಿವೆ.

2027ರ ಏಕದಿನ ವಿಶ್ವಕಪ್: ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುತ್ತಿರುವ 2027ರ ಏಕದಿನ ವಿಶ್ವಕಪ್ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿದೆ. ಇದು ವಿರಾಟ್ ಕೊಹ್ಲಿ ಅವರ 5ನೇ ಹಾಗೂ ಕೊನೆಯ ವಿಶ್ವಕಪ್ ಆಗಿರಲಿದೆ. 14 ತಂಡಗಳು ಭಾಗವಹಿಸುವ ಈ ಮಹಾಸಮರದ ಪಂದ್ಯಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಮತ್ತಷ್ಟ ಓದಲು ಇಲ್ಲಿ ಕ್ಲಿಕ್‌ ಮಾಡಿ