ಥಿಯೇಟರ್‌ಗಳಿಗೆ ಬರುವ ಮೊದಲೇ, ಬಾರ್ಡರ್ 2 ದೇಶದ ಗಡಿಗಳನ್ನು ಮೀರಿ ಸಂಚಲನ ಸೃಷ್ಟಿಸಲು ಪ್ರಾರಂಭಿಸಿದೆ. ಇತ್ತೀಚೆಗೆ ‘X’ ನಲ್ಲಿ ನಡೆದ ‘Ask Me Anything’ ಪ್ರಶ್ನೆ ಸಮಯದಲ್ಲಿ, ವರುಣ್ ಧವನ್ ಪಾಕ್ ಅಭಿಮಾನಿಯಿಂದ ಬಾರ್ಡರ್ 2 ಸಿನಿಮಾ ಬಿಡುಗಡೆಯ ಬಗ್ಗೆ ಪ್ರಶ್ನೆಯೊಂದನ್ನು ಸ್ವೀಕರಿಸಿದ್ದಾರೆ.
ಅಲಿ ಹೈದರ್ ಮೀರಾನಿ ಎಂಬವರು ನಟ ವರುಣ್ ಧವನ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಈ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯ ಬಗ್ಗೆ ಕೇಳಿದರು ಮತ್ತು ಗದರ್ ಚಿತ್ರದಲ್ಲಿ ಸನ್ನಿ ಡಿಯೋಲ್ ಅವರ ಐಕಾನಿಕ್ ಪಾತ್ರ ತಾರಾ ಸಿಂಗ್ ಬಗ್ಗೆಯೂ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡರು .

“ಭಾಯ್ ಆಪ್ಕಿ ಬಾರ್ಡರ್ 2 ಪಾಕಿಸ್ತಾನ್ ಮೆ ಕಬ್ ಬಿಡುಗಡೆ ಹೋಗಿ ಔರ್ ಮೈನ್ ತಾರಾ ಸಿಂಗ್ ಕಾ ಬಹುತ್ ಬಡಾ ಫ್ಯಾನ್ ಹೂನ್, ಅನ್ಕೋ ಮೇರಾ ಸಲಾಮ್ ಕೆಹನಾ,” ಎಂದು ಹೈದರ್ ಬರೆದಿದ್ದಾರೆ.
ಇದನ್ನೂ ಓದಿ: ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ನಾಲ್ಕನೇ ವಾರದಲ್ಲೂ ಶತಕ : ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ

#border 2 is a film based on the 1971 war and some true events around that. I’m sure sunny sir ke pakistan mein bhi fan hain #varunsays https://t.co/ATeumyuRP2
— Varun Dhawan (@Varun_dvn) January 6, 2026
ಪಾಕಿಸ್ತಾನದಲ್ಲಿ ಚಿತ್ರ ಬಿಡುಗಡೆ ಬಗ್ಗೆ ವರುಣ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಗಡಿಯಾಚೆಗಿನ ಸನ್ನಿ ಡಿಯೋಲ್ ಅವರ ಜನಪ್ರಿಯತೆಯನ್ನು ಅವರು ಒಪ್ಪಿಕೊಂಡರು. “ಬಾರ್ಡರ್ 2 1971 ರ ಯುದ್ಧ ಮತ್ತು ಅದರ ಸುತ್ತಲಿನ ಕೆಲವು ನೈಜ ಘಟನೆಗಳನ್ನು ಆಧರಿಸಿದ ಚಿತ್ರ. ಸನ್ನಿ ಸರ್‌ಗೆ ಪಾಕಿಸ್ತಾನದಲ್ಲೂ ಫ್ಯಾನ್ ಇದ್ದಾರೆ ಎಂದು ನನಗೆ ಖಚಿತವಾಗಿದೆ ” ಎಂದು ನಟ ವರುಣ್ ಪ್ರತಿಕ್ರಿಯಿಸಿದರು.
A war can never be one by an individual it takes all forces to come together. In #border2 we have the army,navy and airforce together oh ya and also the one man army sunny Deol #varunsays https://t.co/QDr5QJQvst
— Varun Dhawan (@Varun_dvn) January 6, 2026
ಬಾರ್ಡರ್ 2 ಪಾಕಿಸ್ತಾನದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಧುರಂಧರ್ ನಂತೆ ನಿಷೇಧಿಸಲ್ಪಡುತ್ತದೆಯೇ ಎಂಬುದರ ಕುರಿತು ಯಾವುದೇ ವರದಿಗಳಾಗಿಲ್ಲ.
ಬಾರ್ಡರ್ 2 ಚಿತ್ರಕಥೆ ನಿಮ್ಮನ್ನು ಸೆಳೆದ ಬಗ್ಗೆ ಕೃಷ್ಣ ಎಂಬವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವರುಣ್, “ಒಬ್ಬ ವ್ಯಕ್ತಿಯಿಂದ ಯುದ್ಧ ಎಂದಿಗೂ ಸಾಧ್ಯವಿಲ್ಲ, ಎಲ್ಲಾ ಪಡೆಗಳು ಒಟ್ಟಿಗೆ ಸೇರಬೇಕಾಗುತ್ತದೆ. border2 ಚಿತ್ರದಲ್ಲಿ ನಾವು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯನ್ನು ಒಟ್ಟಿಗೆ ಹೊಂದಿದ್ದೇವೆ ಮತ್ತು ಒನ್ ಮ್ಯಾನ್ ಆರ್ಮಿ ಸನ್ನಿ ಡಿಯೋಲ್ ಕೂಡ ಇದ್ದಾರೆ” ಎಂದಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

