ಕೋತಿ ಗ್ಯಾಂಗ್ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವು!

Woman dies on the spot after being attacked by monkey gang in Kareem Nagar Telangana

ಹೈದರಾಬಾದ್:‌ ಮಾನವ ಪ್ರಾಣಿ ಸಂಘರ್ಷಗಳು ನಡೆಯುತ್ತಲೇ ಇದ್ದು, ಕಾಡುಪ್ರಾಣಿಗಳು ಸಾಕುಪ್ರಾಣಿಗಳಲ್ಲದೆ ಮಾನವರ ಮೇಲೂ ದಾಳಿ ನಡೆಸುತ್ತಿರುವ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇದೆ. ಇದೀಗ ತೆಲಂಗಾಣದಲ್ಲಿ ಕೋತಿಗಳ ಗುಂಪೊಂದು ಮಹಿಳೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬುಧವಾರ ಬೆಳಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೇಸಿ ರೆಡ್ಡಿ ವಿಮಲಾ (೫೯) ಮೃತ ದುರ್ದೈವಿ. ಮಂಗಗಳು ಮಹಿಳೆಯ ತಲೆಗೆ ಬಲವಾಗಿ ಅಪ್ಪಳಿಸಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Advertisement

ಅಷ್ಟಕ್ಕೂ ಆಗಿದ್ದೇನು?

ಬೆಳ್ಳಂಬೆಳಗ್ಗೆ ಕೋತಿಗಳ ಗುಂಪು ವಿಮಲಾ ಅವರ ಮನೆಗೆ ನುಗ್ಗಿದೆ. ಅಷ್ಟಕ್ಕೂ ಸುಮ್ಮನಾಗದ ಮಂಗಗಳು, ಗಲಾಟೆಯೂ ನಡೆಸಿದೆ. ಇವುಗಳನ್ನು ಓಡಿಸಲು ಯತ್ನಿಸಿದಾಗ ಮಂಗಗಳು ವಿಮಲಾ ಅವರ ಮೈಮೇಲೆ ಹಾರಿ ಗಂಭೀರವಾಗಿ ಗಾಯಗೊಳಿಸಿವೆ. ತಲೆಗೆ ಬಲವಾಗಿ ಏಟು ಬಿದ್ದ ಹಿನ್ನೆಲೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ ಅದಾಗಲೇ ವಿಮಲಾ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

Advertisement

ಇದನ್ನೂ ಓದಿ: ಇತಿಹಾಸದಲ್ಲೇ ಗರಿಷ್ಠ ದಾಖಲೆ ಬರೆದ‌ ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಸಂಸ್ಥೆ !

ಕಳೆದ ಕೆಲವು ವರ್ಷಗಳಿಂದ ಗ್ರಾಮದಲ್ಲಿ ಮಂಗಗಳ ಕಾಟ ತೀವ್ರವಾಗಿದ್ದು, ಮಂಗಗಳ ಗುಂಪುಗಳು ಮನೆಗಳಿಗೆ ನುಗ್ಗಿ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಸಮಸ್ಯೆಗೆ ಮುಕ್ತಿ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

News Source : Social media

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು