ಕೊರೊನಾ ವೈರಸ್ ಜನ್ಮರಹಸ್ಯ ಬಯಲು ಮಾಡಿದ ತುಳಸಿ ಗಬ್ಬಾರ್ಡ್!: ‘ವುಹಾನ್ ಲ್ಯಾಬ್‌ಗೆ ಫೌಸಿ ಹಣ ನೀಡಿದ್ದು ನಿಜ

ವಾಷಿಂಗ್ಟನ್: ಇಡೀ ಜಗತ್ತನ್ನೇ ನಡುಗಿಸಿದ್ದ ಕೋವಿಡ್-19 (COVID-19) ಸಾಂಕ್ರಾಮಿಕ ರೋಗಕ್ಕೆ ಕಾರಣ ಎನ್ನಲಾದ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (WIV) ಪ್ರಯೋಗಾಲಯಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಅವರು ಧನಸಹಾಯ ನೀಡಿದ್ದರು ಎಂದು ಅಮೆರಿಕದ ನಿರ್ಗಮಿತ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ (DNI) ತುಳಸಿ ಗಬ್ಬಾರ್ಡ್ (Tulsi Gabbard) ಅತ್ಯಂತ ಸ್ಫೋಟಕ ಆರೋಪ ಮಾಡಿದ್ದಾರೆ.

ತಮ್ಮ ಅಧಿಕಾರದ ಕೊನೆಯ ದಿನದಂದು ಈವರೆಗೂ ಯಾರೂ ನೋಡಿರದ ಅತ್ಯಂತ ರಹಸ್ಯ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೂಲಕ ಅವರು ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

ತೆರಿಗೆದಾರರ ಹಣ ಮಾರಕ ಸಂಶೋಧನೆಗೆ ಬಳಕೆ!:

2020 ರಲ್ಲಿ ಅಮೆರಿಕಕ್ಕೆ ಕೋವಿಡ್ ಲಗ್ಗೆ ಇಟ್ಟಾಗ ಇಡೀ ಬೈಡನ್ ಸರ್ಕಾರದ ಕೋವಿಡ್ ನಿಯಂತ್ರಣ ಕಾರ್ಯತಂತ್ರದ ನೇತೃತ್ವ ವಹಿಸಿದ್ದ ಆಂಥೋನಿ ಫೌಸಿ, ಅಮೆರಿಕದ ತೆರಿಗೆದಾರರ ಲಕ್ಷಾಂತರ ಡಾಲರ್ ಹಣವನ್ನು ಚೀನಾದ ವುಹಾನ್ ಲ್ಯಾಬ್‌ಗೆ ವರ್ಗಾಯಿಸಿದ್ದರು ಎಂದು ತುಳಸಿ ಗಬ್ಬಾರ್ಡ್ ಬಿಡುಗಡೆ ಮಾಡಿದ ದಾಖಲೆಗಳು ಬಹಿರಂಗಪಡಿಸಿವೆ. ಬಾವಲಿಗಳ ಕರೋನವೈರಸ್ ಕುರಿತು ಅತ್ಯಂತ ಅಪಾಯಕಾರಿ ಎನ್ನಲಾಗುವ ‘ಗೇನ್-ಆಫ್-ಫಂಕ್ಷನ್’ (Gain-of-Function Research) ಸಂಶೋಧನೆ ನಡೆಸಲು ಫೌಸಿ ಹಣಕಾಸಿನ ನೆರವು ನೀಡಿದ್ದರು ಎನ್ನಲಾಗಿದೆ.

ಸತ್ಯ ಮರೆಮಾಚಿ ಜಗತ್ತಿಗೆ ಸುಳ್ಳು ಹೇಳಿದ ಫೌಸಿ?:

ತುಳಸಿ ಗಬ್ಬಾರ್ಡ್ ಅವರ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಜಂಟಿ ಹೇಳಿಕೆಯಲ್ಲಿ, “ಕೋವಿಡ್-19 ವೈರಸ್ ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ (Lab-Leak Origins) ಎಂಬ ಸತ್ಯವನ್ನು ಮರೆಮಾಚಲು ಫೌಸಿ ಅವರು ರಾಜಕೀಯ ಪ್ರಭಾವದ ಅಧಿಕಾರಿಗಳೊಂದಿಗೆ ಸೇರಿ ವ್ಯವಸ್ಥಿತ ಸಂಚು ರೂಪಿಸಿದ್ದರು. ಈ ದಾಖಲೆಗಳು ಕರೋನಾ ವೈರಸ್‌ನ ಮೌಲ್ಯಮಾಪನ ಮತ್ತು ತನಿಖೆಯನ್ನು ಹಾದಿ ತಪ್ಪಿಸುವಲ್ಲಿ ಫೌಸಿ ಅವರ ನೇರ ಪಾತ್ರವನ್ನು ಬಹಿರಂಗಪಡಿಸುತ್ತವೆ” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕರಿದ್ದ ಹಡಗಿನ ಮೇಲೆ ಅಮೆರಿಕದಿಂದ ಕ್ಷಿಪಣಿ ದಾಳಿ

ಸಂಸತ್ತಿನಲ್ಲೇ ಸುಳ್ಳು ಪ್ರಮಾಣ ಮಾಡಿದರೇ ತಜ್ಞ?:

ಅಷ್ಟೇ ಅಲ್ಲದೆ, 2024 ರಲ್ಲಿ ಅಮೆರಿಕದ ಸಂಸತ್ತಿನ (Congress) ಮುಂದೆ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಡಾ. ಫೌಸಿ ಅವರು ತಮಗೆ ವೈರಲ್ ಸಂಶೋಧನೆಗಳ ಬಗ್ಗೆ ಅಥವಾ ಗುಪ್ತಚರ ಅಧಿಕಾರಿಗಳ ಜೊತೆಗಿನ ಚರ್ಚೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸುಳ್ಳು ಹೇಳಿದ್ದರು ಎಂಬುದನ್ನು ಈ ಇತ್ತೀಚಿನ ದಾಖಲೆಗಳು ಸಾಬೀತುಪಡಿಸುತ್ತವೆ ಎಂದು ಗಬ್ಬಾರ್ಡ್ ಕಚೇರಿ ಗಂಭೀರ ಆರೋಪ ಮಾಡಿದೆ. ಅಮೆರಿಕದ ಗುಪ್ತಚರ ಇಲಾಖೆಯ ಮುಖ್ಯಸ್ಥೆಯೊಬ್ಬರು ತಮ್ಮ ಅಧಿಕಾರಾವಧಿಯ ಕೊನೆಯ ದಿನವೇ ಈ ಮಹತ್ವದ ಸತ್ಯವನ್ನು ಹೊರಹಾಕಿರುವುದು ಚೀನಾ ಮತ್ತು ಅಮೆರಿಕದ ಮಾಜಿ ಆಡಳಿತಕ್ಕೆ ಭಾರಿ ಮುಖಭಂಗ ಉಂಟುಮಾಡಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು