ಮುಂಬೈ: ಮುಂಬೈನ ಪೊವಾಯಿನಲ್ಲಿರುವ ಪ್ರತಿಷ್ಠಿತ ಐಐಟಿ-ಬಾಂಬೆ (IIT-Bombay) ಕ್ಯಾಂಪಸ್‌ನ ವಸತಿ ಪ್ರದೇಶದಲ್ಲಿ ಚಿರತೆಯೊಂದು ನಾಯಿಯ ಮೇಲೆ ಭೀಕರ ದಾಳಿ ನಡೆಸಿ, ಕೌತಕ ಪ್ರಾಣಿಗಳನ್ನು ಬೇಟೆಯಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 19ರಂದು ತಡರಾತ್ರಿ ಸುಮಾರು 2:00 ಗಂಟೆಗೆ ಸಿಬ್ಬಂದಿ ಹಾಸ್ಟೆಲ್ (Staff Hostel) ಆವರಣದಲ್ಲಿ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ (CCTV) ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಈ ಘಟನೆಯಿಂದಾಗಿ ಕ್ಯಾಂಪಸ್‌ನ ವಿದ್ಯಾರ್ಥಿಗಳು ಹಾಗೂ ನಿವಾಸಿಗಳಲ್ಲಿ ಭೀತಿ ಆವರಿಸಿದೆ.
ವೈರಲ್ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ, ಭಾರತೀಯ ತಳಿಯ ಬೀದಿ ನಾಯಿಯೊಂದು ಹಾಸ್ಟೆಲ್‌ನ ಮೆಟ್ಟಿಲುಗಳ ಬಳಿ ನಿಂತಿರುವುದು ಕಂಡುಬರುತ್ತದೆ. ಆ ನಾಯಿಗೆ ಮುಂಚಿತವಾಗಿಯೇ ಅಪಾಯದ ಮುನ್ಸೂಚನೆ ಸಿಕ್ಕಂತೆ ಕಾಣುತ್ತಿದ್ದು, ಅದು ಆತಂಕದಿಂದ ಬಲಗಡೆಗೆ ನೋಡುತ್ತಿರುತ್ತದೆ. ಕೆಲವೇ ಕ್ಷಣಗಳಲ್ಲಿ ಕತ್ತಲೆಯಿಂದ ನಿಶ್ಯಬ್ದವಾಗಿ ಪ್ರವೇಶಿಸುವ ಚಿರತೆ, ನಾಯಿಯತ್ತ ಹೆಜ್ಜೆ ಇಡುತ್ತದೆ.
ಇಲ್ಲಿದೆ ನೋಡಿ ವಿಡಿಯೋ:
A Leopard Entered IIT Bombay Campus at Staff Hostel and Viciously Attacked a Dog Caught on CCTV Camera😳 pic.twitter.com/bsfcUvBTXS
— Ghar Ke Kalesh (@gharkekalesh) June 19, 2026
ಚಿರತೆ ಒಮ್ಮಿಂದೊಮ್ಮೆಗೇ ನಾಯಿಯ ಮೇಲೆರಗಿ ಭೀಕರ ದಾಳಿ ನಡೆಸುತ್ತದೆ. ತನ್ನನ್ನು ರಕ್ಷಿಸಿಕೊಳ್ಳಲು ನಾಯಿ ಕೆಲ ಸೆಕೆಂಡುಗಳ ಕಾಲ ಹೋರಾಟ ನಡೆಸಿದರೂ, ಚಿರತೆಯ ಬಲದ ಮುಂದೆ ಅದು ಸಾಧ್ಯವಾಗುವುದಿಲ್ಲ. ಚಿರತೆಯು ನಾಯಿಯ ಕತ್ತನ್ನು ಬಲವಾಗಿ ಕಚ್ಚಿ ಹಿಡಿದು ಕ್ಷಣಾರ್ಧದಲ್ಲಿ ಅದನ್ನು ಕೊಂದು ಹಾಕುತ್ತದೆ. ಬಳಿಕ ನಾಯಿಯ ಮೃತದೇಹವನ್ನು ಕತ್ತಲೆಯಲ್ಲಿ ಎಳೆದೊಯ್ದು ಮಾಯವಾಗುತ್ತದೆ.
ಇದನ್ನೂ ಓದಿ: ಹೆಂಡತಿಯ ಕೈಕಾಲು ಕಟ್ಟಿ, ತಲೆ ಬೋಳಿಸಿ, ಮಸಿ ಬಳಿದು ಮೂತ್ರ ಕುಡಿಸಿದ ಪಾಪಿ; ಮಕ್ಕಳ ಕಣ್ಣೆದುರೇ ನರಕಯಾತನೆ
ಐಐಟಿ-ಬಾಂಬೆ ಕ್ಯಾಂಪಸ್ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ (Sanjay Gandhi National Park) ಗಡಿಗೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ವನ್ಯಜೀವಿಗಳ ಓಡಾಟ ಸಾಮಾನ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಸತಿ ಪ್ರದೇಶಗಳ ಬಳಿಯೇ ಚಿರತೆಗಳ ಹಾವಳಿ ಹೆಚ್ಚಾಗುತ್ತಿರುವುದು ಮತ್ತು ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಕುಟುಂಬಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


