ಗೃಹ ಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಲರ್ಟ್!: ನಾಳೆಯಿಂದಲೇ ನಿಮ್ಮ ಮನೆಗೆ ಬರಲಿದ್ದಾರೆ ಎಸ್ಕಾಂ ಅಧಿಕಾರಿಗಳು

ಬೆಂಗಳೂರು : ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ನಡೆಯುತ್ತಿರುವ ಅಕ್ರಮ ಹಾಗೂ ದುರುಪಯೋಗವನ್ನು ತಡೆದು, ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭವನ್ನು ತಲುಪಿಸಲು ಕರ್ನಾಟಕ ಸರ್ಕಾರ ಭಾರಿ ಫಿಲ್ಟರ್ ಪ್ರಕ್ರಿಯೆಗೆ ಮುಂದಾಗಿದೆ. ಇದರ ಮೊದಲ ಹಂತವಾಗಿ, ಉಚಿತ ವಿದ್ಯುತ್ ನೀಡುವ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ (Gruha Jyothi) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ನಾಳೆಯಿಂದಲೇ (ಜುಲೈ 1) ರಾಜ್ಯಾದ್ಯಂತ ಅಧಿಕೃತವಾಗಿ ಆರಂಭವಾಗಲಿದೆ. ಬೆಸ್ಕಾಂ (BESCOM) ಸೇರಿದಂತೆ ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಈ ಬೃಹತ್ ತಪಾಸಣೆಯನ್ನು ಕೈಗೊಳ್ಳಲಿದ್ದಾರೆ.

ಮನೆ-ಮನೆ ಭೇಟಿ ನೀಡಿ ಆಪ್ ಮೂಲಕ ಪರಿಶೀಲನೆ:

Advertisement

ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಪ್ರತಿಯೊಬ್ಬರ ಮನೆಗೆ ಎಸ್ಕಾಂ ಸಿಬ್ಬಂದಿ ಖುದ್ದಾಗಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಪ್ರತ್ಯೇಕ ಮೊಬೈಲ್ ಆಪ್ (Mobile App) ಹಾಗೂ ಸ್ವಯಂ ಘೋಷಣಾ ಪತ್ರದ ಮೂಲಕ ಅರ್ಹ ಫಲಾನುಭವಿಗಳ ನೈಜ ಮಾಹಿತಿ ಮತ್ತು ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಸ್ಥಳದಲ್ಲೇ ಮರು-ಪರಿಶೀಲಿಸಿ ಪೂರ್ಣಗೊಳಿಸಲಿದ್ದಾರೆ.

ಇದನ್ನೂ ಓದಿ:ಒಂದೇ ವಾರದಲ್ಲಿ 3ನೇ ಬಾರಿ ಉಡುಪಿ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್!; ಪೊಲೀಸರಿಂದ ಬಿಗಿ ತಪಾಸಣೆ; ತನಿಖೆಯಲ್ಲಿ ಬಯಲಾಯ್ತು ಹುಸಿ ಬೆದರಿಕೆ!

ಫಲಾನುಭವಿಗಳು ಸಿದ್ಧವಾಗಿಟ್ಟುಕೊಳ್ಳಬೇಕಾದ 7 ಪ್ರಮುಖ ದಾಖಲೆಗಳು:

ಎಸ್ಕಾಂ ಸಿಬ್ಬಂದಿ ಮನೆಗೆ ಬಂದಾಗ ಗ್ರಾಹಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ತನಿಖೆಗೆ ಸಹಕರಿಸಲು ಮತ್ತು ಯೋಜನೆ ಮುಂದುವರಿಯಲು ಈ ಕೆಳಗಿನ ಪ್ರಮುಖ ಮೂಲ ದಾಖಲೆಗಳನ್ನು ತೋರಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಸಾರ್ವಜನಿಕರಲ್ಲಿ ವಿನಂತಿಸಿದೆ:

ಆಧಾರ್ ಕಾರ್ಡ್ (Aadhaar Card)

ಮತದಾರರ ಗುರುತಿನ ಚೀಟಿ (Voter ID)

ರೇಷನ್ ಕಾರ್ಡ್ (Ration Card)

ಪ್ಯಾನ್ ಕಾರ್ಡ್ (PAN Card)

ಫಲಾನುಭವಿಯ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ (Passport Size Photo)

ಜಾತಿ ಪ್ರಮಾಣ ಪತ್ರ (Caste Certificate)

ಬಾಡಿಗೆ ಒಪ್ಪಂದದ ಪತ್ರ (Rent Agreement – ಬಾಡಿಗೆದಾರರಿಗೆ ಮಾತ್ರ ಅನ್ವಯಿಸುತ್ತದೆ)

ಸರ್ಕಾರದ ಈ ಬಿಗಿ ಕ್ರಮದಿಂದಾಗಿ ನಕಲಿ ದಾಖಲೆ ಸೃಷ್ಟಿಸಿ ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಅನರ್ಹರಿಗೆ ದೊಡ್ಡ ಶಾಕ್ ಎದುರಾಗಲಿದ್ದು, ಕೇವಲ ಬಡ ಹಾಗೂ ಮಧ್ಯಮ ವರ್ಗದ ನೈಜ ಅರ್ಹ ಕುಟುಂಬಗಳಿಗೆ ಮಾತ್ರ ಯೋಜನೆ ಲಭ್ಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *