ಬಂಗಾರ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಐದೇ ತಿಂಗಳಲ್ಲಿ ಭಾರಿ ಕುಸಿತ; ಇಂದಿನ ರೇಟ್ ಹೀಗಿದೆ

ದೆಹಲಿ: ನಿರಂತರವಾಗಿ ಏರಿಕೆ ಕಾಣುತ್ತಾ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಹಳದಿ ಲೋಹದ (Gold Price) ಬೆಲೆಯಲ್ಲಿ ಇದೀಗ ಸತತ ಇಳಿಕೆಯ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ವಾರಾಂತ್ಯದ ಅಲ್ಪ ಕುಸಿತದ ಬೆನ್ನಲ್ಲೇ, ವಾರದ ಆರಂಭದ ದಿನವಾದ ಇಂದು (ಜುಲೈ 13) ಚಿನ್ನದ ದರ ಮತ್ತೆ ಪ್ರತಿ 10 ಗ್ರಾಂಗೆ 130 ರೂಪಾಯಿಗಳಷ್ಟು ಅಗ್ಗವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಎದ್ದಿರುವ ಇರಾನ್ ಯುದ್ಧದ ಬಿಕ್ಕಟ್ಟು ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆಯ ಸಮೀಕರಣಗಳನ್ನು ಬದಲಾಯಿಸಿದ್ದು, ಇದು ಚಿನ್ನದ ಬೆಲೆಯ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಕೇವಲ ಐದಾರು ತಿಂಗಳಲ್ಲಿ ರೂ. 3,500 ಕ್ಕೂ ಹೆಚ್ಚು ಇಳಿಕೆ!:

ಕಳೆದ ಜನವರಿ ತಿಂಗಳ ಕೊನೆಯಲ್ಲಿ ಪ್ರತಿ 1 ಗ್ರಾಂ ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ ಬರೋಬ್ಬರಿ 17,885 ರೂಪಾಯಿಗಳಷ್ಟಿತ್ತು. ಆದರೆ ಅಲ್ಲಿಂದೀಚೆಗೆ ಸತತ ಐದಾರು ತಿಂಗಳುಗಳಿಂದ ಚಿನ್ನದ ಮಾರುಕಟ್ಟೆ ಇಳಿಕೆಯ ಹಾದಿಯಲ್ಲೇ ಸಾಗುತ್ತಿದ್ದು, ಇದೀಗ 1 ಗ್ರಾಂ ಬೆಲೆ 14,291 ರೂಪಾಯಿಗೆ ತಲುಪಿದೆ. ಇದರರ್ಥ, ಕೇವಲ ಅರ್ಧ ವರ್ಷದ ಅವಧಿಯಲ್ಲಿ ಬಂಗಾರದ ದರದಲ್ಲಿ ಪ್ರತಿ ಗ್ರಾಮ್‌ಗೆ ಮೂರೂವರೆ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಇಳಿಕೆ ಕಂಡುಬಂದಂತಾಗಿದೆ.

ಇದನ್ನೂ ಓದಿ: ದೇಶಾದ್ಯಂತ ಇಪಿಎಫ್ ನಿಷ್ಕ್ರಿಯ ಖಾತೆಗಳಲ್ಲಿ 9,330 ಕೋಟಿ ರೂ. ಬಾಕಿ: ಆರ್‌ಟಿಐ ಅರ್ಜಿಗೆ ಇಪಿಎಫ್‌ಒ ಮಾಹಿತಿ
ದೇಶದಲ್ಲಿ ಇಂದಿನ (ಜುಲೈ 13) ಚಿನ್ನ ಹಾಗೂ ಬೆಳ್ಳಿ ದರಗಳ ಕಂಪ್ಲೀಟ್ ಡಿಟೇಲ್ಸ್:

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಜಾರಿಯಲ್ಲಿರುವ ಪರಿಷ್ಕೃತ ದರಗಳ ಪಟ್ಟಿ ಈ ಕೆಳಗಿನಂತಿದೆ:

1. 22 ಕ್ಯಾರಟ್ ಆಭರಣ ಚಿನ್ನ (Jewelry Gold):

1 ಗ್ರಾಂ ಬೆಲೆ: ರೂ. 13,100

10 ಗ್ರಾಂ (1 ತೊಲ) ಬೆಲೆ: ರೂ. 1,31,000

2. 24 ಕ್ಯಾರಟ್ ಅಪರಂಜಿ ಚಿನ್ನ (Pure Gold):
1 ಗ್ರಾಂ ಬೆಲೆ: ರೂ. 14,291

10 ಗ್ರಾಂ (1 ತೊಲ) ಬೆಲೆ: ರೂ. 1,42,910

3. 18 ಕ್ಯಾರಟ್ ಚಿನ್ನ (18K Gold):

1 ಗ್ರಾಂ ಬೆಲೆ: ರೂ. 10,718

ಬೆಳ್ಳಿ ಬೆಲೆ ವಿವರ (Silver Price):

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿ ದರದಲ್ಲೂ ಸದ್ಯ ಸ್ಥಿರತೆ ಕಾಯ್ದುಕೊಳ್ಳಲಾಗಿದೆ.

1 ಗ್ರಾಂ ಬೆಳ್ಳಿ ಬೆಲೆ: ರೂ. 235

100 ಗ್ರಾಂ ಬೆಳ್ಳಿ ಬೆಲೆ: ರೂ. 23,500

(ಗಮನಿಸಿ: ತಮಿಳುನಾಡು ಹಾಗೂ ಕೇರಳದ ಕೆಲವು ಪ್ರಮುಖ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ ಸದ್ಯ ರೂ. 24,000 ರಷ್ಟಿದೆ).

ಬೆಂಗಳೂರು ಮಾರುಕಟ್ಟೆ ಸ್ಥಿತಿ:

ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ 10 ಗ್ರಾಂಗೆ ರೂ. 1,31,000 ಆಗಿದ್ದರೆ, 24 ಕ್ಯಾರಟ್ ಶುದ್ಧ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ ರೂ. 1,42,910 ಆಗಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ 100 ಗ್ರಾಂಗೆ 23,500 ರೂಪಾಯಿಗಳಲ್ಲಿ ವಹಿವಾಟು ಮುಂದುವರಿಸಿದೆ. ಮದುವೆ ಹಾಗೂ ಹಬ್ಬಗಳ ಸೀಸನ್ ಆರಂಭಕ್ಕೂ ಮುನ್ನವೇ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆ ಹಾದಿ ಹಿಡಿದಿರುವುದು ಗ್ರಾಹಕರಲ್ಲಿ ಭಾರಿ ಸಂತಸ ಮೂಡಿಸಿದೆ.

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಪ್ರತಿ 1 ಗ್ರಾಂ ಇಂದಿನ ಮಾರುಕಟ್ಟೆ ಬೆಲೆ ಹೀಗಿದೆ:

ನಗರಗಳು1 ಗ್ರಾಂ ಆಭರಣ ಚಿನ್ನದ ಬೆಲೆ (22 ಕ್ಯಾರಟ್)
ಬೆಂಗಳೂರುರೂ. 13,100
ಮುಂಬೈರೂ. 13,100
ಕೋಲ್ಕತಾರೂ. 13,100
ಕೇರಳರೂ. 13,100
ಭುವನೇಶ್ವರ್ರೂ. 13,100
ಚೆನ್ನೈರೂ. 13,200
ದೆಹಲಿರೂ. 13,115
ಜೈಪುರ್ರೂ. 13,115
ಲಕ್ನೋರೂ. 13,115
ಅಹ್ಮದಾಬಾದ್ರೂ. 13,105

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *