ಸೇಡಿಯಾಪಿನ ಕಾಪು ಬಳಿ ಟಾಟಾ ಏಸ್ ಪಲ್ಟಿ; 12 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು

ಪುತ್ತೂರು: ಉಪ್ಪಿನಂಗಡಿಯಿಂದ ಪುತ್ತೂರಿನತ್ತ ಬರುತ್ತಿದ್ದ ಟಾಟಾ ಏಸ್ ವಾಹನವು ಸೇಡಿಯಾಪಿನ ಕಾಪು ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 12 ವರ್ಷದ ಬಾಲಕನೊಬ್ಬ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ರಸ್ತೆಯ ಬದಿಯ ಕಾಂಕ್ರೀಟ್ ಎಡ್ಜ್‌ಗೆ ವಾಹನದ ಚಕ್ರ ಸಿಲುಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬನ್ನಡ್ಕದಲ್ಲಿ ಸರ್ವೀಸ್ ರಸ್ತೆಗೆ ಗ್ರೀನ್ ಸಿಗ್ನಲ್: ₹5.83 ಕೋಟಿ ಕಾಮಗಾರಿಗೆ NHAI ತಾತ್ವಿಕ ಒಪ್ಪಿಗೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

ಅಪಘಾತದಲ್ಲಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಟಾಟಾ ಏಸ್ ವಾಹನಕ್ಕೂ ಹಾನಿಯಾಗಿದೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *