Breaking News

New Movie: ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

Movie : ಕನ್ನಡ ಚಿತ್ರರಂಗಕ್ಕೆ ವಿಶೇಷತೆಯುಳ್ಳ ಮತ್ತೊಂದು ವಿಭಿನ್ನ ಕಥೆಯ ಸಿನಿಮಾ ಸೇರ್ಪಡೆಯಾಗುತ್ತಿದೆ. ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಎಂಬ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ. ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಹಳ್ಳಿಯ ಸರಳ ಬದುಕು, ಗ್ರಾಮೀಣ ಸಂಸ್ಕೃತಿ, ಮಾನವೀಯ ಸಂಬಂಧಗಳು ಹಾಗೂ ಸಮಾಜಕ್ಕೆ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರ, ಶೀರ್ಷಿಕೆಯಂತೆಯೇ ಪ್ರೇಕ್ಷಕರ ಹೃದಯಕ್ಕೆ ನೇರವಾಗಿ ತಲುಪುವ ಭರವಸೆ ನೀಡುತ್ತಿದೆ. ಭದ್ರಾವತಿ ಮೂವಿ ಮೇಕರ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.

Advertisement

30 ವರ್ಷಗಳ ಹಿಂದಿನ ಕಥೆ ;

ಸುಮಾರು 30 ವರ್ಷದ ಹಿಂದಿನ ಕಥೆಗಳನ್ನಿಟ್ಟುಕೊಂಡು ಹೊರಬರುತ್ತಿರುವ ಸಿನೆಮಾ ಇದಾಗಿದ್ದು, ಸಾಮಾನ್ಯ ವಾಣಿಜ್ಯ ಚಿತ್ರಗಳ ಗದ್ದಲದ ನಡುವೆ,  ಗ್ರಾಮೀಣ ಬದುಕಿನ ನೈಜತೆಯನ್ನು ತೆರೆಗೆ ತರುವ ಪ್ರಯತ್ನವೇ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.  ಹಳ್ಳಿ ಜನರ ಸಮಸ್ಯೆಗಳು, ಅವರ ಸಂವೇದನೆ, ಒಗ್ಗಟ್ಟು ಮತ್ತು ಸಂಘರ್ಷಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಎಂ.ವೈ.ಕೃಷ್ಣ ಅವರು G1 News ಗೆ ತಿಳಿಸಿದ್ದಾರೆ.

ಚಿತ್ರತಂಡದ ಮೂಲಗಳ ಪ್ರಕಾರ, ಇದು ಮನರಂಜನೆಯ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವಂತಹ ಕಥೆಯನ್ನು ಹೊಂದಿರಲಿದೆ. ಬೀದಿ ಬೀದಿಯಲ್ಲಿ ಪರದೆ ಕಟ್ಟಿಕೊಂಡು ನಾಟಕ ಮಾಡುವವರ ಕಥೆ ಹೊಂದಿರುವ ಈ ಕಥೆಯೇ ಮುಖ್ಯ ಪಾತ್ರಧಾರಿ. ಹೌದು…ಸಾಮಾನ್ಯ ಸಿನಿಮಾಗಳ ಹಾದಿಯಿಂದ ವಿಭಿನ್ನವಾಗಿ ಸಾಗುವ ಈ ಕಲಾತ್ಮಕ ಚಿತ್ರದಲ್ಲಿ ನಾಯಕನಿಲ್ಲ. ಕಥೆಯೇ ತನ್ನ ತೂಕ, ತನ್ನ ಧ್ವನಿ, ತನ್ನ ನಾಯಕತ್ವವನ್ನು ಹೊತ್ತುಕೊಂಡಿದೆ. ಹಳ್ಳಿ ಹಳ್ಳಿಗೆ ಹೋಗಿ ಸಿನಿಮಾ ಕಥೆ ಹೇಳೋ ಕಥೆ ರಂಗಣ್ಣ ಒಂದು ಕಡೆ ಆದ್ರೆ, ಕಾಳಿಂಗ ಈ ಕಥೆಯ ಮುಖ್ಯ ವಿಲನ್. ಯಾರೇ ನಾಟಕ ಮಾಡುವರ ತಂಡ ಬಂದಲ್ಲಿ ಅವರನ್ನ ಎತ್ತಾಕೊಂಡು ಬಂದು ಅವನ ಬಳಿ ಕೂಡಿಹಾಕಿಕೊಂಡು ಮನಸಿಗೆ ಬಂದಂತೆ ನಾಟಕ ಮಾಡಿಸುತ್ತಾನೆ… ಕಥೆ ರಂಗಣ್ಣ ಮುಂದೆ ಏನು ಮಾಡುತ್ತಾನೆ ಎನ್ನುವುದನ್ನು ಸಿನಿಮಾ ನೋಡಿದ್ರೆನೇ ತಿಳಿಯುವುದು‌.. ಹಳ್ಳಿ ಬದುಕಿನ ನೈಜ ಭಾವನೆಗಳನ್ನು ಸಿನೆಮಾ ಪರದೆಯ ಮೇಲೆ ಮೂಡಿಸಿ, ಪ್ರೇಕ್ಷಕರ ಮನಸ್ಸಿಗೆ ನೇರವಾಗಿ ತಲುಪುವ ಭರವಸೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಆಶಾಕಿರಣವಾಗಿ ಕಾಣಿಸುತ್ತಿದೆ. ಅಲ್ಲದೇ ಆದಷ್ಟು ಶೀಘ್ರದಲ್ಲಿ ಇದು ತೆರೆ ಮೇಲೆ‌ ಬರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Karkala : ಕುದುರೆಮುಖ ಸೇರಿ ಈ ವನ್ಯಜೀವಿ ವಲಯಗಳಲ್ಲಿ ಚಾರಣಕ್ಕೆ ನಿರ್ಬಂಧ

ಈ ಸಿನೆಮಾದ ಮುಖ್ಯ ಪಾತ್ರಧಾರಿಗಳು ; ಬಾಲಾಜಿ ಮನೋಹರ್, ಶಿವರಾಜ್ ಕೆ.ಆರ್. ಪೆಟ್ಟೇ, ಹರ್ಷಿಲ್ ಕೌಶಿಕ್, ತರುಣ್, ಅನಿಕಾ ರಮ್ಯಾ, ರಾಜವಿಷ್ಣು, ನವೀನ್ ಪಡೀಲ್, ದೀಪಕ್ ರೈ, ರಘು ಪಾಂಡೇಶ್ವರ್, ಪಾಯಲ್ ಚೇಂಗಪ್ಪ, ಡುಮ್ಮ ಗಿರಿ, ಚಂದ್ರಪ್ರಭಾ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಎಂ.ವೈ.ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಕುಮಾರ್ ಎನ್. ಭದ್ರಾವತಿ ಅವರು ನಿರ್ಮಾಪಕರಾಗಿದ್ದಾರೆ. ಚಿತ್ರದ ದೃಶ್ಯಗಳಿಗೆ ಖ್ಯಾತ ಛಾಯಾಗ್ರಾಹಕ ಆದರ್ಶ ಅವರ ಕ್ಯಾಮೆರಾ ಜೀವ ತುಂಬಿದೆ.

ತಾಂತ್ರಿಕ ತಂಡಗಳ ವಿವರ:

ನಿರ್ದೇಶನ: ಎಂ.ವೈ. ಕೃಷ್ಣ, ನಿರ್ಮಾಣ: ಕುಮಾರ್ ಎನ್. ಬದ್ರಾವತಿ, ಛಾಯಾಗ್ರಹಣ: ಆದರ್ಶ & ನವೀನ್ ಆಕ್ಷಿ,  ಸಂಗೀತ: ಸಾಯಿ ವಂಶಿ , ಸಂಪಾದನೆ: ದೀಪು ಎಸ್. ಕುಮಾರ್, ಗೀತರಚನೆ: ಅರುಂಜಿತ್ ಎಸ್.ಎಂ., ಅಭಿಷೇಕ್, ಎಂ.ವೈ. ಕೃಷ್ಣ, ಮಧು ಮಿಲಿಂದ್, ವಿಎಫ್‌ಎಕ್ಸ್: ವಿ.ಜಿ. ರಾಜನ್,ನಿರ್ದೇಶನ ತಂಡ: ಅಮಿತ್ ಜಿ, ಶಿವಕುಮಾರ್ ಡಿ.ಕೆ, ಮನೋಜ್ ಆರ್, ದಿವ್ಯ ಗ್ರೀಷ್ಮಾ, ಅಜಯ್ ಸೂರ್ಯ, ಕಾರ್ತಿಕ್ ರಾಮ್, ಚೇತನ್ ರಾಜ್, ಮಧು ಮಿಲಿಂದ್, ಲಕ್ಷ್ಮಣ್ ಕೇಸರಿ, ದರ್ಶನ್ ಗೌಡ, ರವಿತೇಜ, ಸ್ಟೋರಿ ಬೋರ್ಡ್: ಸಾಕ್ಸಿ ಶಿವ, ವಸ್ತ್ರ ವಿನ್ಯಾಸ (ಕಾಸ್ಟ್ಯೂಮ್): ಗಣೇಶ್, ಕಲಾ ನಿರ್ದೇಶನ: ರಾಘು, ಶ್ರೀನಿವಾಸ್, ರಮೇಶ್, ಪ್ರೊಡಕ್ಷನ್ ಮ್ಯಾನೇಜರ್: ಸೋಮಶೇಖರ್
ಸೋಶಿಯಲ್ ಮೀಡಿಯಾ ಪಾಲುದಾರ: ಡಿ.ಕೆ. ನವೀನ್
ಟೈಟಲ್ ಡಿಸೈನ್: ಸಂತೋಷ್ ರಾಧಾಕೃಷ್ಣ, ಸೌಂಡ್ ಡಿಸೈನ್: ಹೇಮಾ ಸುವರ್ಣ, ಪಿಆರ್‌ಒ: ಆರ್. ಚಂದ್ರಶೇಖರ್, ಸ್ಥಿರಚಿತ್ರಗಳು (ಸ್ಟಿಲ್ಸ್): ಅಜಯ್
ಪಬ್ಲಿಸಿಟಿ ಡಿಸೈನ್: ಕಾಣಿ ಸ್ಟುಡಿಯೋ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು