ಗ್ಲ್ಯಾಸ್ಗೋ : ಕಾಮನ್ವೆಲ್ತ್ ಗೇಮ್ಸ್ ೨೦೨೬ರ ಪುರುಷರ ೬೫ ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಭಾರತದ ರಾಜ ಮುತ್ತುಪಾಂಡಿ ಅತ್ಯದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ (Silver Medal) ಗೆದ್ದುಕೊಂಡಿದ್ದಾರೆ.
ಸ್ನಾಚ್ (Snatch) ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ (Clean & Jerk) ವಿಭಾಗದಲ್ಲಿ 160 ಕೆಜಿ ಸೇರಿ ಒಟ್ಟು 286 ಕೆಜಿ ತೂಕ ಎತ್ತುವ ಮೂಲಕ ಅವರು ಈ ಸಾಧನೆ ಮಾಡಿದರು. ವರ್ಷಗಳ ಕಾಲ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಾಜ ಮುತ್ತುಪಾಂಡಿ, ತಮ್ಮ ಕಠಿಣ ಪರಿಶ್ರಮ ಹಾಗೂ ಛಲದಿಂದ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: ಪೇಪರ್ ಲೀಕ್ ಮಾಫಿಯಾಗೆ ಮುಕ್ತಿ: ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026’ ಮಂಡನೆ
ಇಲ್ಲಿದೆ ನೋಡಿ ವಿಡಿಯೋ:
Congratulations to Shri Raja Muthupandi on clinching the Silver medal in the Men’s 65kg Weightlifting event at the Commonwealth Games 2026.
A remarkable achievement that reflects years of hard work and determination.
Wishing him many more victories in the years ahead.… pic.twitter.com/d9DrCOS8w1
— Tejasvi Surya (@Tejasvi_Surya) July 27, 2026
ಕಾಮನ್ವೆಲ್ತ್ ಗೇಮ್ಸ್ 2026ರ ಪುರುಷರ ೬೫ ಕೆಜಿ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶ್ರೀ ರಾಜ ಮುತ್ತುಪಾಂಡಿ ಅವರಿಗೆ ಅಭಿನಂದನೆಗಳು. ವರ್ಷಗಳ ಕಠಿಣ ಶ್ರಮ ಹಾಗೂ ಬಲವಾದ ನಿಶ್ಚಯಕ್ಕೆ ಸಿಕ್ಕ ಗಮನಾರ್ಹ ಸಾಧನೆ ಇದು. ಮುಂಬರುವ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಹಾಗೂ ವಿಜಯಗಳು ಲಭಿಸಲಿ ಎಂದು ಹಾರೈಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್ ಮೂಲಕ ತಿಳಿಸಿದ್ದಾರೆ.

