ನೂಹ್: ಹರ್ಯಾಣದ ನೂಹ್ (Nuh) ಜಿಲ್ಲೆಯ ತಾವಡು ಸೌರ ಪೋಲಿಸ್ ಠಾಣಾ ವ್ಯಾಪ್ತಿಯ ಛಾರೋಡಾ ಬಸ್ ಸ್ಟ್ಯಾಂಡ್ ಬಳಿ ಜುಲೈ 29ರ ಬುಧವಾರ ಸಾಯಂಕಾಲ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗದಿಂದ ಬಂದ ಆಲ್ಟೋ ಕಾರೊಂದು ನಿಯಂತ್ರಣ ಕಳೆದುಕೊಂಡು, ಹಾದಿಹೋಕನಿಗೆ ಬಲವಾಗಿ ಡಿಕ್ಕಿ ಹೊಡೆದು, ರಸ್ತೆ ಬದಿಯಿದ್ದ ಪಿಕ್‌ಅಪ್ ವಾಹನ, ಬೈಕ್ ಹಾಗೂ ಇನ್ನೊಂದು ಕಾರಿಗೆ ಸರಣಿ ಡಿಕ್ಕಿ ಹೊಡೆದು ಬಳಿಕ ಟೈಲ್ಸ್ ಶೋರೂಮ್‌ಗೆ ನುಗ್ಗಿದೆ.
ಈ ಘೋರ ಅಪಘಾತದಲ್ಲಿ ಬಲಿಫೀಠಕ್ಕೆ ಬಿದ್ದ ಬಹರಾಂಪುರದ ಕಪಿಲ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಡೀ ದುರಂತ ಶೋರೂಮ್‌ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸರೆಯಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
VIDEO | Three critical after speeding car hits one, crashes into parked cars, showroom in Haryana’s Nuh, CCTV captures July 29 incident. More details awaited.
(Source: Third Party) pic.twitter.com/oW65GbFLeL
— Press Trust of India (@PTI_News) July 30, 2026
ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೇಗವಾಗಿ ಬಂದ ಕಾರು ಮೊದಲು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಾಗ ಆತ ಗಾಳಿಯಲ್ಲಿ ಚೆಂಡಿನಂತೆ ಹಾರಿ ದೂರ ಬಿದ್ದಿರುವುದು ಕಾಣಿಸುತ್ತದೆ. ನಂತರ ಆ ವಾಹನವು ಪಿಕ್‌ಅಪ್ ವ್ಯಾನ್, ಬೈಕ್ ಹಾಗೂ ಮತ್ತೊಂದು ಕಾರಿಗೆ ಬಲವಾಗಿ ಗುದ್ದಿ, ಟೈಲ್ಸ್ ಶೋರೂಮ್‌ನ ಗಾಜುಗಳನ್ನು ಒಡೆದು ಕಟ್ಟಡದೊಳಗೆ ನುಗ್ಗಿದೆ.
ಇದನ್ನೂ ಓದಿ: ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ಪಲ್ಟಿ: ಒಬ್ಬ ಸಾವು, 26 ಮಂದಿಗೆ ಗಂಭೀರ ಗಾಯ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ನಲ್ಹಡ್‌ನ ಶಾಹೀದ್ ಹಸನ್ ಖಾನ್ ಮೇವಾತಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ ಓರ್ವ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ತಾವಡು ಸದರ್ ಪೊಲೀಸ್ ಅಧಿಕಾರಿಗಳು ವಾಹನವನ್ನು ಜಪ್ತಿ ಮಾಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

