Breaking News

ಬುಧವಾರದ ದಿನ ಭವಿಷ್ಯ: ವೃಷಭ, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ನಿಮ್ಮ ರಾಶಿ ಫಲ ಇಲ್ಲಿದೆ

ಮೇಷ (Aries)

ಮಾತಿನ ಮೇಲೆ ನಿಯಂತ್ರಣವಿರಲಿ; ಅನಗತ್ಯ ಜಗಳ ಹಾಗೂ ವಾಗ್ವಾದಗಳಿಂದ ದೂರವಿರುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಶುಭ ಫಲ ಸಿಗಲಿದೆ. ಕುಟುಂಬದಲ್ಲಿ ತಾಳ್ಮೆ ವಹಿಸಿ.

ವೃಷಭ (Taurus)

ಇಂದು ನಿಮಗೊಂದು ಅದೃಷ್ಟದ ದಿನ. ಮಾಡುವ ಕೆಲಸ-ಕಾರ್ಯಗಳಲ್ಲಿ ಅಪಾರ ಲಾಭ ತರಲಿದ್ದು, ಕಚೇರಿಯಲ್ಲಿ ನಿಮ್ಮ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಅವಕಾಶಗಳು ದೊರೆಯಲಿವೆ.

ಮಿಥುನ (Gemini)

ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅನಿರೀಕ್ಷಿತ ಧನಲಾಭದ ಯೋಗವಿದೆ. ಆದರೆ, ಯಾವುದೇ ಮುಖ್ಯ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಉದ್ಯೋಗ ಬದಲಾವಣೆಗೆ ಇದು ಸರಿಯಾದ ಸಮಯವಲ್ಲ.

ಕರ್ಕಾಟಕ (Cancer)

ಕೆಲಸದ ಸ್ಥಳದಲ್ಲಿ ಮಾತನಾಡುವಾಗ ನಿಗಾವಹಿಸಿ. ಉದ್ಯೋಗ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣದ ಯೋಗವಿದೆ. ಅನಗತ್ಯ ಹಾಗೂ ದೊಡ್ಡ ಮೊತ್ತದ ಖರ್ಚುಗಳನ್ನು ತಡೆಹಿಡಿಯುವುದು ಸೂಕ್ತ.

ಸಿಂಹ (Leo)

ವ್ಯಾಪಾರ-ವಹಿವಾಟಿನಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳ ಸಲಹೆಗಳನ್ನು ನಿರ್ಲಕ್ಷಿಸದಿರಿ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ.

ಕನ್ಯಾ (Virgo)

ಸಕಾರಾತ್ಮಕ ಚಿಂತನೆ ಹೊಂದಿರುವ ಜನರೊಂದಿಗೆ ಸಮಯ ಕಳೆಯಿರಿ. ಹಣಕಾಸಿನ ತೊಂದರೆಗಳಿಂದ ಮುಕ್ತಿ ಸಿಗುವ ಲಕ್ಷಣಗಳಿವೆ. ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ.

ತುಲಾ (Libra)

ಉದ್ಯೋಗಿಗಳಿಗೆ ಕಚೇರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಸೌಲಭ್ಯಗಳು ಹೆಚ್ಚಾಗಲಿವೆ. ವ್ಯಾಪಾರಿಗಳಿಗೆ ಹೊಸ ಒಪ್ಪಂದಗಳು ಸಿಗಲಿವೆ.

ವೃಶ್ಚಿಕ (Scorpio)

ಹಳೆಯ ಸಾಲಗಳನ್ನು ತೀರಿಸಲು ದಾರಿಗಳು ಕಂಡುಕೊಳ್ಳುವಿರಿ. ವೃತ್ತಿಜೀವನದಲ್ಲಿ ಬಡ್ತಿ ಹಾಗೂ ಅಭಿವೃದ್ಧಿಯ ಯೋಗವಿದೆ. ಖಾಸಗಿ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ.

ಧನು (Sagittarius)

ಕಷ್ಟಗಳು ಕಳೆದು ಶುಭಫಲಗಳು ಸನ್ನಿಹಿತವಾಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಹಿಂದಿನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಚೇತರಿಕೆ ಕಂಡುಬರಲಿದೆ.

ಮಕರ (Capricorn)

ಸಣ್ಣ ಪ್ರಮಾಣದ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಪ್ರಗತಿದಾಯಕ ದಿನ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದ್ದು, ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ.

ಕುಂಭ (Aquarius)

ಸಂಸಾರದಲ್ಲಿ ಪ್ರೀತಿ ಮತ್ತು ಸಹಕಾರ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಆಭರಣ ಹಾಗೂ ವಸ್ತ್ರೋದ್ಯಮದಲ್ಲಿ ಲಾಭವಾಗುವ ಸೂಚನೆಗಳಿವೆ. ಮನಃಸ್ಥೈರ್ಯದಿಂದ ಕೈಗೆತ್ತಿಕೊಂಡ ಕೆಲಸಗಳು ಪೂರ್ಣಗೊಳ್ಳಲಿವೆ.

ಮೀನ (Pisces)

ದಿನದ ಆರಂಭದಲ್ಲಿ ಕೆಲಸಗಳು ಸಕಾರಾತ್ಮಕವಾಗಿ ನೆರವೇರಲಿವೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಶ್ರಮಕ್ಕೆ ತಕ್ಕಂತೆ ಆದಾಯ ಹಾಗೂ ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

Leave a Reply

Your email address will not be published. Required fields are marked *