Breaking News

21 ವರ್ಷಗಳ ಸೇವೆಯಲ್ಲಿ 25 ಬಾರಿ ವರ್ಗಾವಣೆ!: ಭ್ರಷ್ಟರ ಸಿಂಹಸ್ವಪ್ನ ಐಎಎಸ್ ಅಧಿಕಾರಿ ತುಕಾರಾಂ ಮುಂಢೆಗೆ ಎಫ್‌ಡಿಎ ಜವಾಬ್ದಾರಿ

ಮುಂಬೈ: ಭ್ರಷ್ಟಾಚಾರ, ನಿಷ್ಕಾಳಜಿ ಹಾಗೂ ನಿಯಮಬಾಹಿರ ಚಟುವಟಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ಹೊಂದಿರುವ ಮಹಾರಾಷ್ಟ್ರ ಕೆಡರ್‌ನ ಜನಪ್ರಿಯ ಐಎಎಸ್ (IAS) ಅಧಿಕಾರಿ ತುಕಾರಾಂ ಮುಂಢೆ (Tukaram Mundhe) ಅವರು ತಮ್ಮ 21 ವರ್ಷಗಳ ಸರಕಾರಿ ಸೇವಾವಧಿಯಲ್ಲಿ ಬರೋಬ್ಬರಿ 25 ನೇ ಬಾರಿಗೆ ವರ್ಗಾವಣೆಗೊಂಡಿದ್ದಾರೆ. ಪ್ರಸ್ತುತ ಅವರನ್ನು ಮಹಾರಾಷ್ಟ್ರದ ಆಹಾರ ಮತ್ತು ಹೌಸಧ ನಿಯಂತ್ರಣ ಮಂಡಳಿ (Food and Drug Administration – FDA) ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

2005 ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ತುಕಾರಾಂ ಮುಂಢೆ ಅವರು ತಾವಿದ್ದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹೆಸರಾಗಿದ್ದಾರೆ. ಅವರ ನಿಯಮನಿಷ್ಠೆ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿಯದ ಸ್ವಭಾವದಿಂದಾಗಿ ಆಗಾಗ್ಗೆ ವರ್ಗಾವಣೆಗೆ ಒಳಗಾಗುತ್ತಲೇ ಬಂದಿದ್ದಾರೆ.

ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿಯ (FDA) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಅವರು ರಾಜ್ಯಾದ್ಯಂತ ಕಲ್ಮಶ ಹಾಗೂ ನಕಲಿ ಆಹಾರ ತಯಾರಕರ ವಿರುದ್ಧ ಸಮರ ಸಾರಿದ್ದಾರೆ.

ಕೇವಲ ಕೆಲವೇ ವಾರಗಳಲ್ಲಿ ನಕಲಿ ಹಾಲು, ಕಲಬೆರಕೆ ಪನೀರ್, ತುಪ್ಪ ಹಾಗೂ ನಿಷೇಧಿತ ಗುಟ್ಕಾ ಜಾಲಗಳ ಮೇಲೆ ನೂರಾರು ದಾಳಿಗಳನ್ನು ನಡೆಸಿ, ಹಲವರ ವಿರುದ್ಧ ‘ಮಕೋಕಾ’ (MCOCA) ನಂತಹ ಕಠಿಣ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದ್ದಾರೆ.

ಇದನ್ನೂ ಓದಿ:ಎನ್‌ಎಸ್‌ಎ ಅಜಿತ್ ಡೋವಲ್‌ಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿದ ಗೃಹ ಸಚಿವ ಅಮಿತ್ ಶಾ

ರಾಜಕಾರಣಿಗಳು ಹಾಗೂ ಪ್ರಭಾವಿಗಳ ವಿರೋಧ ಕಟ್ಟಿಕೊಂಡರೂ ಸಾರ್ವಜನಿಕ ಸೇವೆ ಹಾಗೂ ಕಟ್ಟುನಿಟ್ಟಿನ ಕರ್ತವ್ಯ ಪಾಲನೆಯಿಂದಾಗಿ ತುಕಾರಾಂ ಮುಂಢೆ ಅವರು ಸಾರ್ವಜನಿಕ ವಲಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *