ಹೈದರಾಬಾದ್: ಹೈದರಾಬಾದ್ ಮಲ್ಕಾಜ್‌ಗಿರಿ ಕಮಿಷನರೇಟ್ ವ್ಯಾಪ್ತಿಯ ಬೋಡುಪ್ಪಲ್‌ನಲ್ಲಿ ಎಂಟು ತಿಂಗಳ ಕಂದಮ್ಮನನ್ನು ಅಪಹರಿಸಿದ್ದ ವಾಚ್‌ವುಮೆನ್ (Watchwoman) ಕೃತ್ಯವನ್ನು ಮೆಡಿಪಲ್ಲಿ ಪೊಲೀಸರು ಕೇವಲ ಮೂರೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಕಂದಮ್ಮನನ್ನು ಪೋಷಕರ ಮಡಿಲಿಗೆ ತಲುಪಿಸಿದ್ದಾರೆ.
ಈ ಪ್ರಕರಣದಲ್ಲಿ ಅಪಹರಣ ಎಸಗಿದ ಆರೋಪಿಯನ್ನು ನಲ್ಲ ದುರ್ಗಾ ಭವಾನಿ ಎಂದು ಗುರುತಿಸಲಾಗಿದೆ. ಉಪ್ಪಲ್ ಡಿಸಿಪಿ (DCP) ಸುರೇಶ್ ಕುಮಾರ್ ಅವರು ಈ ಕ್ಷಿಪ್ರ ಕಾರ್ಯಾಚರಣೆಯ ವಿವರಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ
ಇಂದು ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಡಯಲ್ 100 (Dial 100) ಮೂಲಕ 8 ತಿಂಗಳ ಗಂಡು ಮಗುವಿನ ಅಪಹರಣದ ಬಗ್ಗೆ ಮೆಡಿಪಲ್ಲಿ ಪೊಲೀಸ್ ಠಾಣೆಯ ಎಸ್‌ಹೆಚ್‌ಒ (SHO) ಅವರಿಗೆ ಮಾಹಿತಿ ತಲುಪಿತು. ಮಾಹಿತಿ ಸಿಗುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ತಕ್ಷಣವೇ 6 ಪ್ರತ್ಯೇಕ ವಿಶೇಷ ಪಡೆಗಳನ್ನು (Special Teams) ರಚಿಸಿದರು.
ಇದನ್ನೂ ಓದಿ: ರಾಜಸ್ಥಾನ: ಸರ್ಕಾರಿ ಆಸ್ಪತ್ರೆಯ ಸಿಲಿಂಗ್ ಕುಸಿದು ಮಹಿಳೆಯ ತಲೆಗೆ ಗಂಭೀರ ಗಾಯ
ಪ್ರಮುಖ ರೈಲ್ವೇ ನಿಲ್ದಾಣಗಳನ್ನು ಅಲರ್ಟ್ ಮಾಡಿದ್ದಲ್ಲದೆ, ದೇವರಕೊಂಡ ಹಾಗೂ ಸೂರ್ಯಪೇಟೆಯ ಡಿಎಸ್‌ಪಿಗಳೊಂದಿಗೆ ಸಮನ್ವಯ ಸಾಧಿಸಿ ಆ ಪ್ರದೇಶಗಳಿಗೂ ತಂಡಗಳನ್ನು ರವಾನಿಸಲಾಯಿತು.ಸಿಸಿಟಿವಿ ಹಾಗೂ ತಾಂತ್ರಿಕ ಬೆಂಬಲದ (Technical Evidence) ಆಧಾರದ ಮೇಲೆ ಮಹತ್ವದ ಸುಳಿವು ಪಡೆದ ಪೊಲೀಸರು, ಕರ್ಮನ್‌ಘಾಟ್ ಪ್ರದೇಶದಲ್ಲಿ ಆರೋಪಿ ನಲ್ಲ ದುರ್ಗಾ ಭವಾನಿಯನ್ನು ತಡೆದು, ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
VIDEO | Hyderabad: An eight-month-old infant, allegedly abducted by a watchwoman employed at his family’s residence in Boduppal, was rescued safely within three hours by the Medipally Police under the Malkajgiri Commissionerate.
The accused, identified as Nalla Durga Bhavani,… pic.twitter.com/jiy8qnjrvP
— Press Trust of India (@PTI_News) August 5, 2026
ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮಗುವನ್ನು ಆತನ ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಮೆಡಿಪಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

