Breaking News

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯತ್ನಕ್ಕೆ ಯಶಸ್ಸು: 3 ಪ್ರಮುಖ ರಸ್ತೆಗಳ ಸುಧಾರಣೆಗೆ ಯೋಜನೆ ಸಿದ್ಧ, ಶೀಘ್ರದಲ್ಲೇ ತಾಂತ್ರಿಕ ಕೆಲಸ ಆರಂಭ

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಕಾಯುತ್ತಿದ್ದ ಗ್ರಾಮೀಣ ಭಾಗದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕ್ಷೇತ್ರದ ಪ್ರಮುಖ 3 ರಸ್ತೆಗಳನ್ನು ಒಟ್ಟು 12 ಕೋಟಿ ರೂಪಾಯಿ ವೆಚ್ಚದಲ್ಲಿ ಸುಧಾರಿಸಲು ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಂಕಿತ ಹಾಕಿದ್ದು, ಯೋಜನೆ ವರದಿ (DPR) ಸಿದ್ಧಪಡಿಸುವ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದು  ಶಾಸಕಿ ಭಾಗೀರಥಿ ಮುರುಳ್ಯ ಅವರ ನಿರಂತರ ಪ್ರಯತ್ನ ಫಲವಾಗಿ ಕಾರ್ಯ ರೂಪಕ್ಕೆ ಬಂದಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) ಹಂತ-5, ಘಟ್ಟ-2 ರ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಮಾನ್ಯ ಶಾಸಕರ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುಮೋದನೆ ದೊರೆತಿರುವ ರಸ್ತೆಗಳ ವಿವರ ಹೀಗಿದೆ:

ರಸ್ತೆಯ ಹೆಸರುಕಾಯ್ದಿರಿಸಿದ ಮೊತ್ತ
ಮರ್ಕಂಜ – ಎಲಿಮಲೆ ರಸ್ತೆ₹5 ಕೋಟಿ
ಎಡಮಂಗಲ – ಪುಲಿಕುಕ್ಕು ರಸ್ತೆ₹4 ಕೋಟಿ
ಐವರ್ನಾಡು – ದರ್ಖಾಸು ರಸ್ತೆ₹3 ಕೋಟಿ
ಒಟ್ಟು ಯೋಜನೆ ಮೌಲ್ಯ₹12 ಕೋಟಿ

 

ಇದನ್ನೂ ಓದಿ: ಸುಳ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರ ನಿರ್ಮಾಣಕ್ಕೆ ಆಗ್ರಹ: ಶಾಸಕರು, ಮೆಸ್ಕಾಂಗೆ ಭಾರತೀಯ ಮಜ್ದೂರ್ ಸಂಘ ಮನವಿ

ರಾಜ್ಯದ ಪ್ರಮುಖ ರಸ್ತೆಗಳಿಗೆ ಹಂತ-ಹಂತವಾಗಿ ಡಿಪಿಆರ್ ಟೆಂಡರ್ ಕರೆಯಲಾಗಿದ್ದು, ಸುಳ್ಯ ಕ್ಷೇತ್ರದ ಈ ಕಾಮಗಾರಿಗಳ DPR ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸಂಬಂಧಪಟ್ಟ ಇಲಾಖೆಯಿಂದ ಶೀಘ್ರದಲ್ಲೇ ಸಮಗ್ರ ಯೋಜನಾ ವರದಿ (DPR) ಸಲ್ಲಿಕೆಯಾಗಲಿದ್ದು, ಅದಾದ ತಕ್ಷಣವೇ ರಸ್ತೆಗಳ ಅಗಲೀಕರಣ, ಡಾಂಬರೀಕರಣ ಹಾಗೂ ತಾಂತ್ರಿಕ ಕಾಮಗಾರಿಗಳು ಅಧಿಕೃತವಾಗಿ ಚಾಲನೆ ಪಡೆಯಲಿವೆ. ಈ ಪ್ರಮುಖ ರಸ್ತೆಗಳ ಅಭಿವೃದ್ಧಿಯಿಂದ ಕೃಷಿ ಹಾಗೂ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ನಿತ್ಯದ ಸಂಚಾರ ಸುಗಮವಾಗಲಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *