Breaking News

ಗುಜರಾತ್‌ನ ಮೋರ್ಬಿಯಲ್ಲಿ ವಿಸ್ಮಯ: ಕೃಷಿ ಭಾವಿಯಲ್ಲಿ ಸಾಗರದಂತೆ ತೇಲುತ್ತಿರುವ ಅಲೆಗಳು

ಮೋರ್ಬಿ : ಗುಜರಾತ್‌ನ ಮೋರ್ಬಿ ತಾಲೂಕಿನ ವೀರ್‌ಪರ್ಡಾ ಗ್ರಾಮದಲ್ಲಿ ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆಯೊಂದು ವರದಿಯಾಗಿದೆ. ಇಲ್ಲಿನ ರೈತರೊಬ್ಬರ ಜಮೀನಿನಲ್ಲಿರುವ ಸುಮಾರು 18 ಅಡಿ ಆಳದ ಬಾವಿಯಲ್ಲಿ ನೀರು ಸಾಗರದ ಅಲೆಗಳಂತೆ ನಿರಂತರವಾಗಿ ಚಲಿಸುತ್ತಿದ್ದು, ಸಾರ್ವಜನಿಕರು ಹಾಗೂ ವಿಜ್ಞಾನಿಗಳನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ‘ಅಲೆಗಳ ಬಾವಿ’ಯ ವೀಡಿಯೊಗಳು ವಿಪರೀತ ವೈರಲ್ ಆಗಿದ್ದು, ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಾವಿರಾರು ಸಂಖ್ಯೆಯಲ್ಲಿ ಹರಿದುಬರುತ್ತಿದ್ದಾರೆ.

ಕಳೆದ ಐದು ದಿನಗಳಿಂದ (ಆಗಸ್ಟ್ 2 ರಿಂದ) ಬಾವಿಯ ನೀರು ಮೇಲಿಂದ ಮೇಲೆ ದಂಡೆಗೆ ಅಪ್ಪಳಿಸುತ್ತಿದ್ದು, ಕೆಲವು ಬಾರಿ ನೀರು ಹೊರಚೆಲ್ಲುತ್ತಿದೆ. ಬಾವಿಯ ಈ ವಿಚಿತ್ರ ಚಲನೆಯಿಂದ ಸ್ಥಳೀಯರಲ್ಲಿ ಭೂಕಂಪದ ಭಯ ಆವರಿಸಿತ್ತು. ಆದರೆ ಗಾಂಧಿನಗರದ ಭೂಕಂಪಶಾಸ್ತ್ರ ಸಂಸ್ಥೆ (ISR) ಪರಿಶೀಲಿಸಿದ್ದು, ಈ ಪ್ರದೇಶದಲ್ಲಿ ಯಾವುದೇ ಭೂಕಂಪನ ಚಟುವಟಿಕೆಗಳು ಅಥವಾ ಸಕ್ರಿಯ ರಿಕ್ಟರ್ ಸೀಳುಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಂತರ್ಜಲ ಮರುಪೂರಣಗೊಳ್ಳುತ್ತಿದೆ . ಶಿಲೆಗಳ ಮಧ್ಯೆ ಸಿಲುಕಿಕೊಂಡಿದ್ದ ಗಾಳಿಯು ಒತ್ತಡದಿಂದ ಹೊರಬರಲು ಯತ್ನಿಸುತ್ತಿರುವುದರಿಂದ ಬಾವಿಯ ನೀರಿನಲ್ಲಿ ಈ ರೀತಿ ಅಲೆಗಳು ಸೃಷ್ಟಿಯಾಗುತ್ತಿವೆ ಎಂದು ಜಿಲ್ಲಾ ಭೂವಿಜ್ಞಾನಿ ತಿಳಿಸಿದ್ದಾರೆ. ಮೋರ್ಬಿ ಜಿಲ್ಲಾಧಿಕಾರಿ ಸ್ವಪ್ನಿಲ್ ಖರೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಗಾಂಧಿನಗರದ ಅಂತರ್ಜಲ ಸಂಶೋಧನಾ ತಂಡ ಹಾಗೂ ರಾಜ್ಯ ವಿಜ್ಞಾನಿಗಳಿಗೆ ಆದೇಶಿಸಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *