Breaking News

ಮಂಗಳೂರು: ಕೆಎಫ್‌ಸಿ ಮಳಿಗೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ! ಕೊಳೆತ ಚಿಕನ್ ಪತ್ತೆ ಆರೋಪ, ರೆಸ್ಟೋರೆಂಟ್ ಸೀಲ್

ಮಂಗಳೂರು : ಇಲ್ಲಿನ ಕೆ.ಎಸ್.ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ‘ಸಿಟಿ ಸೆಂಟರ್’ ಮಾಲ್‌ನ ಕೆಎಫ್‌ಸಿ (KFC) ಚಿಕನ್ ಮಳಿಗೆಯ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.

ಆನ್‌ಲೈನ್ ಮೂಲಕ ಆರ್ಡರ್ ಮಾಡಲಾಗಿದ್ದ ಚಿಕನ್‌ನಿಂದ ತೀವ್ರ ದುರ್ವಾಸನೆ ಬರುತ್ತಿದ್ದು, ಅದು ಕೊಳೆತು ಹೋಗಿದೆ ಎಂದು ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ಜರುಗಿದೆ.

ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಮೇಲ್ನೋಟಕ್ಕೆ ಕೆಟ್ಟ ವಾಸನೆ ಬರುತ್ತಿದ್ದ ಹಾಗೂ ಕೊಳೆತ ಸ್ಥಿತಿಯಲ್ಲಿದ್ದ ಚಿಕನ್ ತುಂಡುಗಳು ಪತ್ತೆಯಾಗಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಅತಿವೃಷ್ಟಿ-ಬರ ಎದುರಿಸಲು ಸರ್ಕಾರ  ಸಚಿವರಿಗೆ ಜಿಲ್ಲಾ ಪ್ರವಾಸ ಮತ್ತು ತುರ್ತು ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶ

ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ (ಸುಮಾರು 4-5 ತಿಂಗಳ ಹಿಂದೆ) ಪ್ಯಾಕ್ ಮಾಡಲಾಗಿದ್ದ ಕೋಳಿ ಮಾಂಸವನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ಆದರೆ ಫ್ರೋಜನ್ ಚಿಕನ್ (Frozen Chicken) ಆಗಿರುವುದರಿಂದ ತಿಂಗಳುಗಟ್ಟಲೆ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು ಕೆಎಫ್‌ಸಿ ಸಿಬ್ಬಂದಿ ಅಧಿಕಾರಿಗಳ ಮುಂದೆ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣವೇ ಮಳಿಗೆಯಲ್ಲಿದ್ದ ಕೋಳಿ ಮಾಂಸ ಹಾಗೂ ಕರಿಯಲು ಬಳಸುತ್ತಿದ್ದ ಖಾದ್ಯ ತೈಲದ (Oil) ಸ್ಯಾಂಪಲ್‌ಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ (Lab) ಕಳುಹಿಸಿಕೊಟ್ಟಿದ್ದಾರೆ.

ಸದ್ಯ ಕೆಎಫ್‌ಸಿ ಮಳಿಗೆಯನ್ನು ತಾತ್ಕಾಲಿಕವಾಗಿ ಬಂದ್ (Close) ಮಾಡಿಸಲಾಗಿದ್ದು, ಲ್ಯಾಬ್ ವರದಿ ಬಂದ ನಂತರ ಸಂಸ್ಥೆ ಹಾಗೂ ಆಡಳಿತ ಮಂಡಳಿ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *