Breaking News

ಬ್ರಾ ಮಧ್ಯದಲ್ಲಿರೋ ಆ ಸಣ್ಣ ಗಂಟಿನ ಹಿಂದಿದೆಯಾ ಸೀಕ್ರೆಟ್? ಫ್ಯಾಷನ್ ಜಗತ್ತಿನ ಕುತೂಹಲಕಾರಿ ಇತಿಹಾಸ

ದೆಹಲಿ : ನೀವು ಧರಿಸುವ ಬ್ರಾಗಳನ್ನು ಒಮ್ಮೆ ಗಮನಿಸಿ. ಎರಡು ಕಪ್‌ಗಳ ಮಧ್ಯಭಾಗದಲ್ಲಿ ಅತ್ಯಂತ ಸಣ್ಣದಾದ ರಿಬ್ಬನ್ ಬೋ (Bow), ಹೂವು ಅಥವಾ ಗಂಟು ಇರುವುದನ್ನು ನೋಡಿರುತ್ತೀರಿ. ಇದು ಯಾವುದೇ ಬೆಂಬಲ (Support) ನೀಡಲು ಅಥವಾ ಗಾತ್ರವನ್ನು ಹೊಂದಿಸಲು ಸಹಾಯ ಮಾಡುವುದಿಲ್ಲ. ಆದರೂ ಬಹುತೇಕ ಎಲ್ಲಾ ಒಳ ಉಡುಪುಗಳಲ್ಲಿ ಈ ಸಣ್ಣ ವಿನ್ಯಾಸ ಶತಮಾನಗಳಿಂದ ಹಾಗೆಯೇ ಉಳಿದುಕೊಂಡು ಬಂದಿದೆ. ಇದರ ಹಿಂದೆ ಏನಾದರೂ ಐತಿಹಾಸಿಕ ರಹಸ್ಯವಿದೆಯೇ? ಅಥವಾ ಇದು ಕೇವಲ ಫ್ಯಾಷನ್‌ಗಾಗಿ ಇದೆಯೇ? ಇಲ್ಲಿದೆ ಸಂಪೂರ್ಣ ವಿವರ.

ಬ್ರಾದಲ್ಲಿ ಎರಡು ಕಪ್‌ಗಳನ್ನು ಜೋಡಿಸುವ ಮಧ್ಯಭಾಗಕ್ಕೆ ತಾಂತ್ರಿಕವಾಗಿ ‘ಬ್ರಿಡ್ಜ್’ (Bridge) ಅಥವಾ ‘ಗೋರ್’ (Gore) ಎಂದು ಕರೆಯಲಾಗುತ್ತದೆ. ಈ ಜಾಗದಲ್ಲಿಯೇ ಸಣ್ಣ ಬೋ ಅನ್ನು ಜೋಡಿಸಲಾಗಿರುತ್ತದೆ. ಲೇಸ್, ಎಂಬ್ರಾಯ್ಡರಿಯಂತೆ ಇದು ಕೂಡ ಕೇವಲ ಒಂದು ಅಲಂಕಾರಿಕ ಅಂಶ (Embellishment) ಅಷ್ಟೇ.

1950ರ ದಶಕದ ಫ್ರೆಂಚ್ ಕ್ಯಾಡೋಲ್ (Cadolle) ಹಾಗೂ ಬಾಲಿ (Bali) ಬ್ರಾಗಳಲ್ಲೂ ಇಂತಹ ಸ್ಯಾಟಿನ್ ರಿಬ್ಬನ್ ಬೋಗಳನ್ನು ಬಳಸಲಾಗಿತ್ತು ಎಂದು ಒಳಉಡುಪುಗಳ ಇತಿಹಾಸ ದಾಖಲಿಸುವ ‘ಅಂಡರ್‌ಪಿನ್ನಿಂಗ್ಸ್ ಮ್ಯೂಸಿಯಂ’ ತಿಳಿಸುತ್ತದೆ. ಇಂಟರ್ನೆಟ್‌ನಲ್ಲಿ ಈ ಬೋ ಕುರಿತು ಒಂದು ಸಿದ್ಧಾಂತ ಬಹಳ ಪ್ರಸಿದ್ಧಿಯಲ್ಲಿದೆ. ಪುರಾತನ ಕಾಲದಲ್ಲಿ ಮಹಿಳೆಯರು ದೇಹವನ್ನು ಬಿಗಿಗೊಳಿಸಲು ‘ಕಾರ್ಸೆಟ್’ (Corset) ಧರಿಸುತ್ತಿದ್ದರು.

ಇದನ್ನೂ ಓದಿ: ಏಮ್ಸ್ ವೈದ್ಯರ ಅದ್ಭುತ ಸಾಧನೆ: 209 ಕೆಜಿ ತೂಕವಿದ್ದ ವ್ಯಕ್ತಿಗೆ ಯಶಸ್ವಿ ಬೆರಿಯಾಟ್ರಿಕ್ ಸರ್ಜರಿ, 49 ಕೆಜಿ ತೂಕ ಇಳಿತ

ಆಗ ಮುಂಭಾಗದಲ್ಲಿದ್ದ ಬಿಗಿಗೊಳಿಸುವ ಪಟ್ಟಿಯನ್ನು ಕಟ್ಟಲು ರಿಬ್ಬನ್ ಗಂಟನ್ನು (Bows) ಬಳಸಲಾಗುತ್ತಿತ್ತು. ಕಾರ್ಸೆಟ್‌ಗಳು ಕಣ್ಮರೆಯಾದ ಮೇಲೂ ನೆನಪಿಗಾಗಿ ಅಥವಾ ಸಂಪ್ರದಾಯಕ್ಕಾಗಿ ಬ್ರಾಗಳಲ್ಲಿ ಬೋ ಉಳಿದುಕೊಂಡಿದೆ ಎಂಬುದು ನೆಟ್ಟಿಗರ ಸಿದ್ಧಾಂತ. ಆದರೆ, ಇಂದಿನ ಬ್ರಾಗಳಿಗೂ ಅಂದಿನ ಕಾರ್ಸೆಟ್‌ಗಳ ಗಂಟಿಗೂ ನೇರ ಲಿಂಕ್ ಇದೆ ಎನ್ನಲು ಯಾವುದೇ ಬಲವಾದ ಐತಿಹಾಸಿಕ ಸಾಕ್ಷಿಗಳಿಲ್ಲ. ಹೀಗಾಗಿ ಇದನ್ನು ಸತ್ಯ ಎನ್ನುವುದಕ್ಕಿಂತ ಒಂದು ‘ಊಹೆ’ ಅಥವಾ ಸಿದ್ಧಾಂತ ಎನ್ನಬಹುದು.

ಆಧುನಿಕ ಎಲಾಸ್ಟಿಕ್‌ಗಳು ಬರುವುದಕ್ಕಿಂತ ಮುಂಚೆ ಉಡುಪುಗಳನ್ನು ಬಿಗಿಗೊಳಿಸಲು ಅಥವಾ ಹೊಂದಿಸಲು ರಿಬ್ಬನ್‌ಗಳನ್ನೇ ಬಳಸಲಾಗುತ್ತಿತ್ತು. ಆ ಕಾಲದಲ್ಲಿ ರಿಬ್ಬನ್ ತುದಿಯನ್ನು ಸುಂದರವಾಗಿ ಗಂಟು (Bow) ಹಾಕುವುದು ಸಾಮಾನ್ಯ ಅಭ್ಯಾಸವಾಗಿತ್ತು.ಕ್ರಮೇಣ ಇದು ಒಳಉಡುಪುಗಳ ಶೈಲಿಯಾಗಿಯೇ ಬದಲಾಯಿತು. 1920ರ ದಶಕದ ಸಿಲ್ಕ್ ಕ್ಯಾಮಿಸೋಲ್ ಉಡುಪುಗಳಲ್ಲೂ ಹೂವು ಮತ್ತು ರಿಬ್ಬನ್ ಬೋಗಳ ಅಲಂಕಾರವಿತ್ತು.

ಬ್ರಾದ ಮಧ್ಯಭಾಗವು ಕಣ್ಣಿಗೆ ತಕ್ಷಣ ಕಾಣಿಸುವ ಮುಖ್ಯ ಕೇಂದ್ರ. ಅಲ್ಲಿ ಸಣ್ಣ ಅಲಂಕಾರಿಕ ಬೋ ಇರಿಸುವುದರಿಂದ ಉಡುಪಿಗೆ ಒಂದು ಪರಿಪೂರ್ಣ ಹಾಗೂ ಸುಂದರ ನೋಟ ಸಿಗುತ್ತದೆ. ಇಂದಿನ ಆಧುನಿಕ ಬ್ರಾಗಳು ಎಷ್ಟೇ ತಂತ್ರಜ್ಞಾನ, ವೈವಿಧ್ಯಮಯ ಫ್ಯಾಬ್ರಿಕ್ ಹಾಗೂ ಆಕಾರಗಳಲ್ಲಿ ಬಂದರೂ, ಈ ಸಣ್ಣ ಬೋ ಮಾತ್ರ ಇಂದಿಗೂ ಮಾಯವಾಗಿಲ್ಲ. ಇದು ಯಾವುದೇ ಬೆಂಬಲ ನೀಡುವುದಿಲ್ಲ, ಗಾತ್ರವನ್ನೂ ಬದಲಾಯಿಸುವುದಿಲ್ಲ. ಆದರೂ, ನೋಟಕ್ಕೆ ಚಂದ ಎಂಬ ಒಂದೇ ಕಾರಣಕ್ಕೆ ಫ್ಯಾಷನ್ ಜಗತ್ತಿನಲ್ಲಿ ಇದು ದಶಕಗಳಿಂದ ಹಾಗೆಯೇ ಉಳಿದುಕೊಂಡಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *