ಮುನ್ಸಿಗಂಜ್ : ಬಾಂಗ್ಲಾದೇಶದ ಪ್ರಸಿದ್ಧ ಪದ್ಮಾ ಸೇತುವೆಯ (Padma Bridge) ಮೇಲೆ ಎರಡು ಖಾಸಗಿ ಬಸ್‌ಗಳ ನಡುವಿನ ರೇಸಿಂಗ್ ಜಟಾಪಟಿಯಿಂದಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಲವರು ಶಂಕಿತವಾಗಿ ಮೃತಪಟ್ಟಿದ್ದು, ಸೇತುವೆಯ ಮೂಲಸೌಕರ್ಯಕ್ಕೂ ಹಾನಿಯಾಗಿದೆ.ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಜಾರುತ್ತಿದ್ದರೂ ಅದನ್ನು ಲೆಕ್ಕಿಸದೆ, ಎರಡು ಬಸ್‌ಗಳ ಚಾಲಕರು ಪರಸ್ಪರ ಓವರ್‌ಟೇಕ್ ಮಾಡಲು ರೇಸಿಂಗ್‌ನಲ್ಲಿ ತೊಡಗಿದ್ದರು.
ಪದ್ಮಾ ಸೇತುವೆಯ ಮೇಲೆ ಚಾಲಕರ ನಿಯಂತ್ರಣ ತಪ್ಪಿದ ಬಸ್‌ಗಳು ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ವಾಹನಗಳು ತೀವ್ರವಾಗಿ ಜಖಂಗೊಂಡಿವೆ. ಅಪಘಾತದಲ್ಲಿ ಮೃತರ ಸಂಖ್ಯೆ ಹೆಚ್ಚಿರುವ ಸಾಧ್ಯತೆಯಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ
ಇಲ್ಲಿದೆ ನೋಡಿ ವಿಡಿಯೋ:
Horrific Accident on Padma Bridge in Munshiganj, Bangladesh. Due to Race Between Two Buses
Information suggests that a horrific accident occurred when two buses, racing on a road that had turned slippery due to rain, attempted to overtake each other.
They noted that the death… pic.twitter.com/AtIQMy8L7G
— Siraj Noorani (@sirajnoorani) September 2, 2026
ಘಟನೆಯ ರಭಸಕ್ಕೆ ಪದ್ಮಾ ಸೇತುವೆಯ ತಡೆಗೋಡೆ ಹಾಗೂ ಪ್ರಮುಖ ಮೂಲಸೌಕರ್ಯ ಭಾಗಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

