Breaking News

5 ಕೋಟಿ ರೂ. ನಕಲಿ ಮದ್ದು ಪ್ರಕರಣ: SIT ತನಿಖೆಗೆ ಆದೇಶಿಸಿದ ಸಚಿವ ಯು.ಟಿ. ಖಾದರ್; ‘ಕೊಲೆ ಯತ್ನ’ ಕೇಸ್ ದಾಖಲಿಸಲು ಪ್ರಸ್ತಾವನೆ

ಮಂಗಳೂರು: ಬಿಡದಿ ಬಳಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾದ ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧ (Spurious Drugs) ದಂದೆಯ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಂಗಳವಾರ ಮಂಗಳೂರಿನಲ್ಲಿ ಭರವಸೆ ನೀಡಿದ್ದಾರೆ. ಈ ಅಂತರರಾಜ್ಯ ದಂದೆಯ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಪೊಲೀಸ್ ಅಧಿಕಾರಿಗಳು, ಗೃಹ ಇಲಾಖೆ ಹಾಗೂ ಆಯುಷ್ ಅಧಿಕಾರಿಗಳನ್ನು ಒಳಗೊಂಡ ಜಂಟಿ ತನಿಖೆ ನಡೆಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ, ಔಷಧ ನಿಯಂತ್ರಣ ಇಲಾಖೆ (Drugs Control Department) ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನೊಳಗೊಂಡ ಎಸ್‌ಐಟಿ ರಚಿಸಿ, ನಕಲಿ ಇನ್‌ವಾಯ್ಸ್‌ಗಳು ಹಾಗೂ ವೋಚರ್‌ಗಳ ಮೂಲವನ್ನು ತನಿಖೆ ನಡೆಸಲಾಗುತ್ತದೆ.

ನಕಲಿ ಮದ್ದುಗಳ ದಂದೆ ಇತರೆ ರಾಜ್ಯಗಳಿಗೂ ವಿಸ್ತರಿಸಿರುವುದರಿಂದ, ಕೇಂದ್ರದ ಔಷಧ ಕಣ್ಗಾವಲು ಅಧಿಕಾರಿಯನ್ನು ನಿಯೋಜಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ಈ ಹಗರಣದ ಮೌಲ್ಯ ₹5 ಕೋಟಿಗೂ ಅಧಿಕವಾಗಿರುವುದರಿಂದ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಜೋಹರ್ ಕೃತ್ಯವನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಸಿದ ಸ್ವರಾ ಭಾಸ್ಕರ್: ‘ನಿರ್ಲಜ್ಜತನ’ ಎಂದ ರಣವೀರ್ ಶೋರೆ

‘ಕೊಲೆ ಯತ್ನ’ ಕೇಸ್ ದಾಕಲಿಸಲು ಕಾನೂನು ತಿದ್ದುಪಡಿಗೆ ಆಗ್ರಹ!

ಮಾನವ ಜೀವಗಳೊಂದಿಗೆ ಚೆಲ್ಲಾಟವಾಡುವ ನಕಲಿ ಔಷಧ ತಯಾರಕರಿಗೆ ಕೇವಲ ದಂಡ ಅಥವಾ ಲೈಸೆನ್ಸ್ ರದ್ದುಪಡಿಸುವ ಸಣ್ಣ ಶಿಕ್ಷೆ ಸಾಲದು ಎಂದ ಸಚಿವರು. ಇಂತಹ ಘೋರ ಅಪರಾಧ ಎಸಗುವವರ ವಿರುದ್ಧ ‘ಕೊಲೆ ಯತ್ನ’ (Attempt to Murder) ಅಥವಾ ‘ಕೊಲೆ’ (Murder) ಪ್ರಕರಣ ದಾಖಲಿಸುವಂತೆ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು. ಜಪ್ತಿಯಾದ ಬ್ಯಾಚ್‌ನ ಎಲ್ಲಾ ನಕಲಿ ಔಷಧಗಳನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್‌ಗಳಿಂದ ತಕ್ಷಣವೇ ಹಿಂಪಡೆಯಲು ಆದೇಶಿಸಲಾಗಿದೆ. ಔಷಧಗಳ ಗುಣಮಟ್ಟವನ್ನು ಕಾಲಕಾಲಕ್ಕೆ ತಪಾಸಣೆ ಮಾಡಲು ಹೈಟೆಕ್ ಪ್ರಯೋಗಾಲಯ ಸ್ಥಾಪನೆ ಅಥವಾ ಪ್ರಸ್ತುತ ಇರುವ ಲ್ಯಾಬ್‌ಗಳ ಜೊತೆ ಸಹಭಾಗಿತ್ವ ವಹಿಸಲು ಸರ್ಕಾರ ಚಿಂತನೆ ನಡೆಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *