Breaking News

ಉತ್ತರ ಕನ್ನಡ: ವೀಸಾ ಅವಧಿ ಮುಗಿದರೂ ಅಕ್ರಮ ವಾಸ; ಇಸ್ರೇಲ್ ಪ್ರಜೆಯನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು

ಹೊನ್ನಾವರ: ಭಾರತೀಯ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ ಇಸ್ರೇಲ್ ದೇಶದ ಪ್ರಜೆಯೊಬ್ಬನನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವಿದೇಶಿ ಪ್ರಜೆಯನ್ನು ಮಾರ್ಚಾವಿ ಅಸ್ಸಾಪ್ (Marchavi Assaf) ಎಂದು ಗುರುತಿಸಲಾಗಿದೆ.

ಇಸ್ರೇಲ್ ಪ್ರಜೆ ಮಾರ್ಚಾವಿ ಅಸ್ಸಾಪ್ ಅವರ ಭಾರತೀಯ ವೀಸಾ ಅವಧಿಯು 2025ರ ಏಪ್ರಿಲ್‌ನಲ್ಲೇ ಮುಕ್ತಾಯಗೊಂಡಿತ್ತು. ವೀಸಾ ಅವಧಿ ಮುಗಿದಿದ್ದರೂ ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅವರು ಅಕ್ರಮವಾಗಿ ಭಾರತದಲ್ಲೇ ವಾಸವಾಗಿದ್ದರು. ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದಿಂದ ಮುರುಡೇಶ್ವರದ ಕಡೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ, ಹೊನ್ನಾವರ ತಾಲೂಕಿನ ಹಳದಿಪುರ ರಾಷ್ಟ್ರೀಯ ಹೆದ್ದಾರಿ ಸಮೀಪ ಅನುಮಾನಸ್ಪದವಾಗಿ ಕಂಡುಬಂದ ಇವರನ್ನು ಹೊನ್ನಾವರ ಠಾಣೆಯ ಪೊಲೀಸರು ತಡೆದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ

ವಿಚಾರಣೆ ವೇಳೆ ವೀಸಾ ಅವಧಿ ಮುಕ್ತಾಯಗೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ರಮವಾಗಿ ನೆಲೆಸಿದ್ದ ಇಸ್ರೇಲ್ ಪ್ರಜೆಯನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ಗಡಿಪಾರು ಕ್ರಮಗಳಿಗಾಗಿ ಬೆಂಗಳೂರಿನಲ್ಲಿರುವ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ರವಾನಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *