ನಾಶಿಕ್: ಬೀದಿ ನಾಯಿಗಳ ಹಾವಳಿ ಮತ್ತು ಕಡಿತದ ಪ್ರಕರಣಗಳು ಮಿತಿಮೀರಿದ್ದರೂ ಸ್ಥಳೀಯ ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶಗೊಂಡ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ – UBT) ಯುವಸೇನಾ ಕಾರ್ಯಕರ್ತರು, ಪುರಸಭೆ ಅಧಿಕಾರಿಯ ಮೇಜಿನ ಮೇಲೆಯೇ ಬೀದಿ ನಾಯಿಗಳನ್ನು ಬಿಟ್ಟು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.
ನಾಸಿಕ್ ಜಿಲ್ಲೆಯ ನಿಫಾಡ್ ನಾಗರ ಪಂಚಾಯತಿ ಮುಖ್ಯ ಅಧಿಕಾರಿ ಧೀರಜ್ ಭಾಮ್ರೆ ಅವರ ಕಚೇರಿಯಲ್ಲಿ ಈ ಪ್ರಸಂಗ ನಡೆದಿದ್ದು, ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಯುವಸೇನಾ ಜಿಲ್ಲಾಧ್ಯಕ್ಷ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಚೇರಿಗೆ ನುಗ್ಗಿದ ಕಾರ್ಯಕರ್ತರು, ತಂದಿದ್ದ ಎರಡು ಗೋಣಿಚೀಲಗಳ ಗಂಟನ್ನು ಬಿಚ್ಚಿ ಬೀದಿ ನಾಯಿಗಳನ್ನು ಅಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆಯೇ ಬಿಟ್ಟರು.
🚨 Fed up with being ignored, angry activists in Nashik’s Niphad brought the problem straight to the officials’ desks!
After complaint after complaint about the stray dog menace went unheard, protesters released stray dogs right inside the Nagar Panchayat office. If the… pic.twitter.com/zUpaqRCCtm
— Oxomiya Jiyori 🇮🇳 (@SouleFacts) September 17, 2026
ತಿಭಟನಾಕಾರರು ಅಧಿಕಾರಿಯ ಮೇಜಿನ ಮೇಲೆ ನೋಟುಗಳ ಹಾರವನ್ನು ಇಟ್ಟು, ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು “ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಡಿತದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ
ಮತ್ತೊಂದೆಡೆ, ಮುಂಬೈನ ಹೈರೈಸ್ ಅಪಾರ್ಟ್‌ಮೆಂಟ್ ಒಂದರ ಲಿಫ್ಟ್‌ನಲ್ಲಿ ಸಾಕುನಾಯಿಯೊಂದು ಮಕ್ಕಳ ಮೇಲೆ ದಾಳಿ ಮಾಡಲು ಯತ್ನಿಸಿದ ಪ್ರತ್ಯೇಕ ಘಟನೆ ವರದಿಯಾಗಿದೆ. ಲಿಫ್ಟ್‌ನಲ್ಲಿದ್ದ ಹೆಣ್ಣುಮಗಳು ನಾಯಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾರ್ವಜನಿಕರಲ್ಲಿ ಸಾಕುನಾಯಿಗಳ ನಿಯಂತ್ರಣದ ಕುರಿತೂ ಆತಂಕ ಮೂಡಿಸಿವೆ.

