ಮಂಗಳೂರು ಜೈಲಿನ ಸಿಗ್ನಲ್ ಜ್ಯಾಮರ್‌ಗಳಿಂದ ಸಾರ್ವಜನಿಕರಿಗೆ ನೆಟ್‌ವರ್ಕ್ ಸಮಸ್ಯೆ: ಪರಿಹಾರಕ್ಕೆ ತಾಂತ್ರಿಕ ಕ್ರಮ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದ (Mangaluru District Prison) ಆವರಣದಲ್ಲಿ ಅಳವಡಿಸಲಾಗಿರುವ ಸಿಗ್ನಲ್ ಜ್ಯಾಮರ್‌ಗಳಿಂದಾಗಿ ಸುತ್ತಮುತ್ತಲಿನ ವಸತಿ ಪ್ರದೇಶಗಳು ಹಾಗೂ ಉದ್ಯಮಗಳಿಗೆ ಮೊಬೈಲ್ ನೆಟ್‌ವರ್ಕ್ ವ್ಯತ್ಯಯವಾಗುತ್ತಿರುವ ಕುರಿತು ನಾಗರಿಕರಿಂದ ದೂರುಗಳು ಬಂದಿದ್ದು, ಸಮಸ್ಯೆ ನಿವಾರಣೆಗೆ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಜಂಟಿ ತಾಂತ್ರಿಕ ಸಮೀಕ್ಷೆ & ಜ್ಯಾಮರ್ ತೀವ್ರತೆ ಮರುಹೊಂದಾಣಿಕೆ

ಈ ಕುರಿತು ‘ಎಕ್ಸ್’ (X) ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ:

ಸಂಬಂಧಪಟ್ಟ ತಾಂತ್ರಿಕ ಏಜೆನ್ಸಿಯೊಂದಿಗೆ ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಆಂಟೆನಾ ಕಾನ್ಫಿಗರೇಶನ್ ಹಾಗೂ ಜ್ಯಾಮಿಂಗ್ ತೀವ್ರತೆಯನ್ನು (Jamming Strength) ಕಾರಾಗೃಹದ ಆವರಣಕ್ಕಷ್ಟೇ ಸೀಮಿತಗೊಳಿಸಲು ಮರುಹೊಂದಿಸಲಾಗಿದೆ. ಕಾರಾಗೃಹದ ಒಳಗಿನ ಭದ್ರತೆಗೆ ಧಕ್ಕೆಯಾಗದಂತೆ ಹಾಗೂ ಹೊರಗಿನ ಸಾರ್ವಜನಿಕರಿಗೆ ಮೊಬೈಲ್ ಕರೆ ಮತ್ತು ಇಂಟರ್ನೆಟ್ ಸಂಪರ್ಕಕ್ಕೆ ತೊಂದರೆಯಾಗದಂತೆ ಟೆಲಿಕಾಂ ಪೂರೈಕೆದಾರರೊಂದಿಗೆ ಹೆಚ್ಚುವರಿ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಕರಾವಳಿಯಲ್ಲಿ ಇತಿಹಾಸ ಬರೆದ ಸಂಪುಟ ಸಭೆ: ಮಂಗಳೂರಿನ ‘ಪ್ರಜಾಸೌಧ’ದಲ್ಲಿ ರಾಜ್ಯ ಸಚಿವ ಸಂಪುಟ ಕಲಾಪ; ದಕ್ಷಿಣ ಕನ್ನಡಕ್ಕೆ ‘ಹೊಸ ನೋಟ’ದ ಭರವಸೆ 

5G ಜ್ಯಾಮರ್ಸ್ ಹಾಗೂ ಸಾರ್ವಜನಿಕರ ದಶಕಗಳ ಆಕ್ರೋಶ

ಮಂಗಳೂರು ಜೈಲಿನ ಸುತ್ತಮುತ್ತಲಿನ 1 ರಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರು, ವ್ಯಾಪಾರಿಗಳು ಹಾಗೂ ಸಂಸ್ಥೆಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಇತ್ತೀಚೆಗೆ 5G ಮೊಬೈಲ್‌ಗಳನ್ನು ತಡೆಯಲು ಜ್ಯಾಮರ್‌ಗಳನ್ನು ಮೇಲ್ದರ್ಜೆಗೇರಿಸಿದ ನಂತರ, ಕಾಲ್ ಡ್ರಾಪ್, ಯುಪಿಐ (UPI) ಡಿಜಿಟಲ್ ಪಾವತಿ ವಿಫಲತೆ ಹಾಗೂ ಇಂಟರ್ನೆಟ್ ಸಂಪರ್ಕ ಕಡಿತಗೊಳ್ಳುತ್ತಿರುವ ದೂರುಗಳು ಹೆಚ್ಚಾಗಿದ್ದವು.ಜ್ಯಾಮರ್ಸ್ ನಿಷ್ಕ್ರಿಯಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜೈಲು ಆವರಣದ ಬಳಿ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ, ಹತ್ತಿರದಲ್ಲೇ ಇರುವ ಜಿಲ್ಲಾ ನ್ಯಾಯಾಲಯದ ಕಲಾಪಗಳಿಗೂ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮಂಗಳೂರು ಬಾರ್ ಅಸೋಸಿಯೇಷನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *