ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಜೀಪ್ ರಾಂಗ್ಲರ್ ‘ವೈಟ್‌ಕ್ಯಾಪ್ ಮೊಹಿಟೋ’ ಲಿಮಿಟೆಡ್ ಎಡಿಷನ್

ವಾಹನ ತಯಾರಕ ಸಂಸ್ಥೆಯಾದ ಜೀಪ್ ಇಂಡಿಯಾ ತನ್ನ ಜನಪ್ರಿಯ ಆಫ್-ರೋಡ್ ಎಸ್‌ಯುವಿ ರಾಂಗ್ಲರ್‌ನ ಹೊಸ ‘ವೈಟ್‌ಕ್ಯಾಪ್ ಮೊಹಿಟೋ ಲಿಮಿಟೆಡ್ ಎಡಿಷನ್’ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಕಂಪನಿಯ ಪ್ರಮುಖ ‘ರುಬಿಕಾನ್’ ವೆರಿಯೆಂಟ್ ಅನ್ನು ಆಧಾರವಾಗಿಟ್ಟುಕೊಂಡು ಈ ವಿಶೇಷ ಎಡಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಸಾಮಾನ್ಯ ಮಾದರಿಗೆ ಹೋಲಿಸಿದರೆ ಎಂಜಿನ್ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಮಾಡದಿರಲಾಗಿದ್ದು, ಹೊರಭಾಗ (Exterior) ಹಾಗೂ ಒಳಾಂಗಣದಲ್ಲಿ (Interior) ಹಲವು ನೂತನ ಮತ್ತು ಆಕರ್ಷಕ ಬದಲಾವಣೆಗಳನ್ನು ನೀಡಲಾಗಿದೆ. ಪ್ರಸ್ತುತ ಜೀಪ್ ರಾಂಗ್ಲರ್ ರುಬಿಕಾನ್ ಆವೃತ್ತಿಯ ಬೆಲೆ ₹70.8 ಲಕ್ಷ (ಎಕ್ಸ್-ಶೋರೂಂ) ಇದ್ದು, ಈ ಹೊಸ ವಿಶೇಷ ಆವೃತ್ತಿಯು ಇದಕ್ಕಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

Advertisement

ಏನೇನು ಹೊಸ ಬದಲಾವಣೆಗಳಿವೆ?:

ಆಕರ್ಷಕ ಕಾಂಟ್ರಾಸ್ಟ್ ಕಲರ್ Theme: ಈ ಎಸ್‌ಯುವಿಯು ಪ್ರತ್ಯೇಕವಾಗಿ ಬ್ರೈಟ್-ಗ್ರೀನ್ ‘ಮೊಹಿಟೋ’ ಬಣ್ಣದಲ್ಲಿ ಬರಲಿದ್ದು, ಇದಕ್ಕೆ ಕಾಂಟ್ರಾಸ್ಟ್ ನೀಡುವ ವೈಟ್ (ಬಿಳಿ) ಬಣ್ಣದ ರೂಫ್ ನೀಡಲಾಗಿದೆ.

Advertisement

ಐಕಾನಿಕ್ ‘1941’ ಡಿಕಾಲ್ಸ್: ಮುಂಭಾಗದ ಗ್ರಿಲ್ ಸುತ್ತಲೂ ಬಿಳಿ ಬಣ್ಣದ ಸರೌಂಡಿಂಗ್ ನೀಡಲಾಗಿದ್ದು, ಮೂಲ ‘ವಿಲಿಸ್ ಎಮ್‌ಬಿ ಜೀಪ್’ ಪರಿಚಯಿಸಲ್ಪಟ್ಟ 1941ರ ಸವಿನೆನಪಿಗಾಗಿ ಕಾರಿನ ಬದಿಗಳಲ್ಲಿ ‘1941’ ಡಿಕಾಲ್ಸ್ (Decals) ನೀಡಲಾಗಿದೆ.

ಎಕ್ಸ್‌ಟೀರಿಯರ್ ಲುಕ್: ಆಟೋಮೊಬೈಲ್‌ನ ಬೋಡಿ-ಕಲರ್ ಫೆಂಡರ್‌ಗಳು ಹಾಗೂ ಹಿಂಭಾಗದ ಟೇಲ್‌ಗೇಟ್‌ನಲ್ಲಿ ಬಿಳಿ ಬಣ್ಣದ ‘4 Wheel Drive’ ಸ್ಟಿಕ್ಕರ್ ನೀಡಲಾಗಿದೆ.

Advertisement

ಒಳಾಂಗಣದ ಪ್ರಮುಖ ವೈಶಿಷ್ಟ್ಯಗಳು: ಈ ವಿಶೇಷ ಎಡಿಷನ್‌ನಲ್ಲಿ ಇನ್‌ಬಿಲ್ಟ್ ‘ಡ್ಯಾಶ್‌ಕ್ಯಾಮ್’ ಹಾಗೂ ಬಲವರ್ಧಿತ ಗ್ರ್ಯಾಬ್ ಹ್ಯಾಂಡಲ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಉಳಿದಂತೆ ರುಬಿಕಾನ್ ಮಾದರಿಯಲ್ಲಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ವೇ ಪವರ್ಡ್ ಫ್ರಂಟ್ ಸೀಟ್‌ಗಳು, ADAS ಸುರಕ್ಷತಾ ವ್ಯವಸ್ಥೆ, 6 ಏರ್‌ಬ್ಯಾಗ್‌ಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 9-ಸ್ಪೀಕರ್ ಸಬ್‌ವೂಫರ್ ಹೊಂದಿರುವ ಆಲ್ಪೈನ್ ಆಡಿಯೋ ಸಿಸ್ಟಮ್ ಹಾಗೂ 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಮುಂದುವರಿಸಲಾಗಿದೆ.

ಇದನ್ನೂ ಓದಿ: ಟಾಟಾ ‘ಏರಿಸ್’ ಸೆಡಾನ್ ಅನಾವರಣಕ್ಕೆ ಸಿದ್ಧತೆ: ಟಿಗೋರ್ ಲೈನ್-ಅಪ್‌ಗೆ ಹೊಸ ಹೈ-ಟೆಕ್ ಲುಕ್
ಎಂಜಿನ್ ಹಾಗೂ ಕಾರ್ಯಕ್ಷಮತೆ

ಎಂಜಿನ್: 2.0-ಲೀಟರ್, 4-ಸಿಲಿಂಡರ್, ಡೈರೆಕ್ಟ್-ಇಂಜೆಕ್ಷನ್ ಟರ್ಬೊ-ಪೆಟ್ರೋಲ್ ಎಂಜಿನ್.

ಪವರ್ & ಟಾರ್ಕ್: 272 hp ಪವರ್ ಹಾಗೂ 400 Nm ಟಾರ್ಕ್.

ಗೇರ್‌ಬಾಕ್ಸ್: 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್.

ಡ್ರೈವ್ ಸಿಸ್ಟಮ್: ಸ್ಟ್ಯಾಂಡರ್ಡ್ 4×4 ಸಿಸ್ಟಮ್ ಮೂಲಕ ನಾಲ್ಕೂ ಚಕ್ರಗಳಿಗೆ ಶಕ್ತಿ ಸರಬರಾಜಾಗುತ್ತದೆ.

ಜೀಪ್ ಇಂಡಿಯಾ ಸಾಲಿನಲ್ಲಿರುವ ಇತರ ಕಾರುಗಳು:

ಪ್ರಸ್ತುತ ಜೀಪ್ ಇಂಡಿಯಾ ಭಾರತದಲ್ಲಿ ಕಂಪಾಸ್ (Compass), ಮೆರಿಡಿಯನ್ (Meridian), ರಾಂಗ್ಲರ್ (Wrangler) ಮತ್ತು ಗ್ರಾಂಡ್ ಚೆರೋಕಿ (Grand Cherokee) ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಆದರೆ ಎಲೆಕ್ಟ್ರಿಫೈಡ್ ಕಂಪಾಸ್, ಗ್ಲಾಡಿಯೇಟರ್ ಹಾಗೂ ರೆನೆಗೇಡ್ ಆವೃತ್ತಿಗಳು ಇನ್ನು ಸಹ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಬೇಕಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ