Breaking News

ರಾಜ್ಯದ ಮತ್ತಷ್ಟು ತಾಲೂಕುಗಳು ಬರಪೀಡಿತ: ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ ಹೊಸದಾಗಿ ಸೇರ್ಪಡೆ, ಬರಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಎದುರಾಗಿರುವ ಭೀಕರ ಬರದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರವು ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ಪರಿಸ್ಥಿತಿಯ ನಿರಂತರ ಮೌಲ್ಯಮಾಪನದ ನಂತರ, ರಾಜ್ಯದ ಹೊಸದಾಗಿ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ಒಟ್ಟು ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ. ಇದರ ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ಕೂಡ ಸೇರಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು, “ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಪತ್ಕಾಲದಲ್ಲೂ ಸಿಗಲಿದೆ ರಕ್ತ: ವಿಕ್ಟೋರಿಯಾ, ಕಿಮ್ಸ್, ವಿಮ್ಸ್, ವೆನ್‌ಲಾಕ್ ಆಸ್ಪತ್ರೆಗಳಿಗೆ ರಕ್ತ ಸಂಗ್ರಹಣಾ ವಾಹನಗಳ ಕೊಡುಗೆ

24 ತೀವ್ರ ಹಾಗೂ 16 ಮಧ್ಯಮ ಬರಪೀಡಿತ ತಾಲೂಕುಗಳು:

ಸರ್ಕಾರದ ಮಾಹಿತಿಯಂತೆ, ಈ ಹಿಂದೆ ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಹೊಸದಾಗಿ ಸೇರ್ಪಡೆಗೊಂಡ 40 ತಾಲೂಕುಗಳ ಪೈಕಿ:

ತೀವ್ರ ಬರಪೀಡಿತ ತಾಲೂಕುಗಳು: 24

ಮಧ್ಯಮ ಬರಪೀಡಿತ ತಾಲೂಕುಗಳು: 16

“ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದೆ. ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲೂ ಹೆಚ್ಚುವರಿ ತಾಲೂಕುಗಳನ್ನು ‘ಗ್ರೌಂಡ್ ಟ್ರೂಥಿಂಗ್’ (Ground Trothing) ಪರಿಶೀಲನೆಗೆ ಸೇರಿಸಲಾಗುವುದು. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ ನಿಯಮಾನುಸಾರ ಸೂಕ್ತ ನೆರವು ತಲುಪಿಸಲು ಬದ್ಧರಿದ್ದೇವೆ” ಎಂದು  ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಜಿಲ್ಲೆಹೊಸದಾಗಿ ಬರಪೀಡಿತವೆಂದು ಘೋಷಿಸಲಾದ ತಾಲೂಕುಗಳು
ಬೆಂಗಳೂರು ದಕ್ಷಿಣಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ
ದಾವಣಗೆರೆಜಗಳೂರು
ಮೈಸೂರುಪಿರಿಯಾಪಟ್ಟಣ
ಕೊಪ್ಪಳಕುಷ್ಟಗಿ
ಬೀದರ್ಔರಾದ್
ಬೆಳಗಾವಿಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ
ವಿಜಯಪುರಇಂಡಿ, ಚಡಚಣ, ತಾಳಿಕೋಟೆ
ಗದಗಗದಗ, ಮುಂಡರಗಿ, ರೋಣ
ಹಾವೇರಿಹಿರೇಕೆರೂರು
ಧಾರವಾಡಧಾರವಾಡ, ಕಲಘಟಗಿ, ಕುಂದಗೋಳ, ಅಳ್ನಾವರ
ಶಿವಮೊಗ್ಗಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ
ಚಿಕ್ಕಮಗಳೂರುಚಿಕ್ಕಮಗಳೂರು, ಕಳಸ
ಕೊಡಗುಮಡಿಕೇರಿ, ಕುಶಾಲನಗರ
ದಕ್ಷಿಣ ಕನ್ನಡಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ
ಉಡುಪಿಉಡುಪಿ, ಬೈಂದೂರು
ಉತ್ತರ ಕನ್ನಡಅಂಕೋಲಾ, ಭಟ್ಕಳ, ಹಳಿಯಾಳ, ಶಿರಸಿ

Leave a Reply

Your email address will not be published. Required fields are marked *