Breaking News

ಸಿಲಿಂಡರ್ ಒಳಗಿಟ್ಟು ಅಕ್ರಮ ಮದ್ಯ ಸಾಗಣೆ!: ಕಿಲಾಡಿ ಸ್ಮಗ್ಲರ್‌ಗಳ ಪ್ಲಾನ್ ಪತ್ತೆ ಮಾಡಿದ ಅಧಿಕಾರಿಗಳು

ಪಟ್ನಾ: ಮದ್ಯಪಾನ ನಿಷೇಧ ಜಾರಿಯಲ್ಲಿರುವ ಬಿಹಾರ ರಾಜ್ಯದಲ್ಲಿ ಮದ್ಯದ ಕಳ್ಳಸಾಗಣೆದಾರರು (Liquor Smugglers) ಪೊಲೀಸರ ಕಣ್ಣಿಗೆ ಮಣ್ಣೆರಚಲು ದಿನಕ್ಕೊಂದು ವಿಚಿತ್ರ ಮತ್ತು ನೂತನ ಉಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಕುಚಾಯ್‌ಕೋಟ್‌ನಲ್ಲಿ (Kuchaykot) ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಇಂತಹದ್ದೇ ಒಂದು ವಿಚಿತ್ರ ಕಳ್ಳಸಾಗಣೆ ಜಾಲ ಬೆಳಕಿಗೆ ಬಂದಿದೆ.

ಸಾಮಾನ್ಯ ಗ್ಯಾಸ್ ಸಿಲಿಂಡರ್ ಹಾಗೂ ಬೈಕ್ ಸೀಟ್ ಅಡಿಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಅಡಗಿಸಿಟ್ಟು ಮದ್ಯ ಸಾಗಿಸುತ್ತಿದ್ದ ಬೈಕ್ ಸವಾರನೊಬ್ಬನನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: “ಕುಮಾರಸ್ವಾಮಿ ನಿಂದಿಸಲು ಸಮಯವಿದೆ, ಕ್ಷೇತ್ರಕ್ಕೆ ಸಮಯವಿಲ್ಲ”: ಜೆಡಿಎಸ್ ಆರೋಪಗಳೇನು

ಅಷ್ಟಕ್ಕೂ ಮದ್ಯ ಅಡಗಿಸಿಟ್ಟಿದ್ದು ಹೇಗೆ?:

ನೋಡಲು ಸಾಮಾನ್ಯ ಗ್ಯಾಸ್ ಸಿಲಿಂಡರ್‌ನಂತೆ ಕಾಣುವಂತೆ ಮೇಲ್ಭಾಗದ ಭಾಗವನ್ನು ಸಿದ್ಧಪಡಿಸಲಾಗಿತ್ತು. ಆದರೆ, ಆ ಸಿಲಿಂಡರ್‌ನ ಕೆಳಭಾಗದಲ್ಲಿ ಪ್ರತ್ಯೇಕವಾದ ರಹಸ್ಯ ಬಾಕ್ಸ್ (Concealed Section) ರೂಪಿಸಿ ಅದರೊಳಗೆ ಮಧ್ಯದ ಬಾಟಲಿಗಳನ್ನು ಬಾಂಧಿಸಿಡಲಾಗಿತ್ತು. ಕೇವಲ ಸಿಲಿಂಡರ್ ಮಾತ್ರವಲ್ಲದೆ, ದ್ವಿಚಕ್ರ ವಾಹನದ (Motorcycle) ಸೀಟ್ ಅಡಿಯಲ್ಲೂ ಸಹ ಹೆಚ್ಚುವರಿ ಮದ್ಯದ ಪ್ಯಾಕೆಟ್‌ಗಳನ್ನು ತುರುಕಿ ಸಾಗಿಸಲಾಗುತ್ತಿತ್ತು.

ಇಲ್ಲಿದೆ ನೋಡಿ ವಿಡಿಯೋ:


ಕುಚಾಯ್‌ಕೋಟ್ ಗಡಿ ಭಾಗದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಬಂದ ಬೈಕ್ ಅನ್ನು ತಡೆದು ಪರಿಶೀಲಿಸಿದಾಗ ಈ ಕಳ್ಳಸಾಗಣೆಯ ಅಸಲಿ ಬಣ್ಣ ಬಯಲಾಗಿದೆ. ಬೈಕ್ ಸವಾರ ಸಾಗಿಸುತ್ತಿದ್ದ ವಿನೂತನ ಹಾಗೂ ಅಸಹಜ ರಹಸ್ಯ ವ್ಯವಸ್ಥೆಯನ್ನು ಕಂಡು ಸ್ವತಃ ಅಬಕಾರಿ ಅಧಿಕಾರಿಗಳೇ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *