ಗ್ರಹಗಳ ಸಂಚಾರ ಹಾಗೂ ನಕ್ಷತ್ರಗಳ ಬದಲಾವಣೆಯ ಆಧಾರದ ಮೇಲೆ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಗಳ ಇಂದಿನ (ಸೋಮವಾರ) ದ್ವಾದಶ ರಾಶಿಫಲದ ವಿವರ ಇಲ್ಲಿದೆ. ನಿಮ್ಮ ರಾಶಿಗನುಗುಣವಾಗಿ ಇಂದಿನ ದಿನದ ಫಲ ಹಾಗೂ ಪರಿಹಾರಗಳು ಹೇಗಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
♈ ಮೇಷ ರಾಶಿ
ರಾಶ್ಯಾಧಿಪತಿ ಕುಜನು ನೀಚಸ್ಥಾನ ಕರ್ಕಾಟಕದಲ್ಲಿ ಸಂಚರಿಸುತ್ತಿದ್ದಾನೆ. ಸ್ವಾತಿ ನಕ್ಷತ್ರದಲ್ಲಿ ಚಂದ್ರನ ಸಂಚಾರದಿಂದ ಐದು ಗ್ರಹಗಳ ಶುಭಫಲವಿದ್ದು, ಆಸೆ-ಆಕಾಂಕ್ಷೆಗಳು ಹೆಚ್ಚಾಗಿರುತ್ತವೆ. ಆರ್ಥಿಕವಾಗಿ ಉತ್ತಮ ಸ್ಥಿತಿ ಇರಲಿದೆ. ಉದ್ಯೋಗ ಮತ್ತು ವ್ಯವಸಾಯದಲ್ಲಿ ಲಾಭ, ಪ್ರಯಾಣ ಯೋಗ ಹಾಗೂ ವಾಹನ ಯೋಗವಿದೆ. ಮಕ್ಕಳಿಂದ ಶುಭ ಸಮಾಚಾರ ಸಿಗಲಿದೆ. ಆದರೆ ಸ್ನೇಹಿತರು ಮತ್ತು ಬಂಧುಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: ಮೂರು
ದಿಕ್ಕು: ಉತ್ತರ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ತ್ರಿನೇತ್ರಾಯೈ ನಮಃ” ಮಂತ್ರ ಜಪಿಸಿ.
♉ ವೃಷಭ ರಾಶಿ
ಶುಕ್ರನು ತುಲಾ ರಾಶಿಯಲ್ಲಿದ್ದು, ಆರು ಗ್ರಹಗಳ ಶುಭಫಲವಿದೆ. ಆರ್ಥಿಕವಾಗಿ ಅಧಿಕ ಲಾಭ, ಉದ್ಯೋಗದಲ್ಲಿ ಬಡ್ತಿ, ಮನೆಗೆ ಬಂಧುಗಳ ಆಗಮನ ಹಾಗೂ ವಿವಾಹ ವಿಚಾರದಲ್ಲಿ ಒಳ್ಳೆಯ ಬೆಳವಣಿಗೆಯಾಗಲಿದೆ. ಉದ್ಯೋಗದಲ್ಲಿ ಮಾತುಕತೆಯಿಂದ ಸಣ್ಣಪುಟ್ಟ ಕಿರಿಕಿರಿ ಸಾಧ್ಯತೆ ಇದೆ. ಭೂಮಿ ಕೆಲಸ, ಮನೆ ಕಟ್ಟುವ ಯೋಗ ಹಾಗೂ ಹೊಸ ಉದ್ಯಮಕ್ಕೆ ಪ್ರಯತ್ನ ಮಾಡಬಹುದು. ಆರೋಗ್ಯ ಮತ್ತು ವಾಹನ ಯೋಗ ಉತ್ತಮವಾಗಿದೆ. ಮಕ್ಕಳ ವಿಚಾರದಲ್ಲಿ ಶುಭ ಸಮಾಚಾರ ಕೇಳುವಿರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: ಎರಡು
ದಿಕ್ಕು: ಪೂರ್ವ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ವಿರೂಪಾಕ್ಷಾಯ ನಮಃ” ಮಂತ್ರ ಜಪಿಸಿ.
♊ ಮಿಥುನ ರಾಶಿ
ಬುಧ ರಾಶ್ಯಾಧಿಪತಿಯಾಗಿದ್ದು, ಐದು ಗ್ರಹಗಳ ಶುಭಫಲವಿದೆ. ಕೆಲಸಗಳಲ್ಲಿ ಆಲಸ್ಯ ಹಾಗೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ಹಳೆ ಬಾಕಿ ವಸೂಲಿಯಾಗಿ, ಸಾಲ ತೀರುವಳಿ ಆಗಲಿದೆ. ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗಲಿದೆ. ಆಸ್ತಿ ಕಲಹ ಇತ್ಯರ್ಥ ಹಾಗೂ ಕಾನೂನು ವಿಚಾರಗಳಲ್ಲಿ ಶುಭ ಫಲವಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಸರ್ಕಾರಿ ನೌಕರರು, ರೈತರು ಹಾಗೂ ವ್ಯಾಪಾರಸ್ಥರಿಗೆ ಅತ್ಯುತ್ತಮ ದಿನ.
ಅದೃಷ್ಟ ಬಣ್ಣ: ತಿಳಿ ಹಳದಿ
ಅದೃಷ್ಟ ಸಂಖ್ಯೆ: ಆರು
ದಿಕ್ಕು: ದಕ್ಷಿಣ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ತ್ರಿಲೋಕೇಶಾಯ ನಮಃ” ಮಂತ್ರ ಜಪಿಸಿ.
♋ ಕರ್ಕಾಟಕ ರಾಶಿ
ಚಂದ್ರನು ಸ್ವಾತಿ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ನಾಲ್ಕು ಗ್ರಹಗಳ ಶುಭಫಲವಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಕೆಲಸಗಳಲ್ಲಿ ಶುಭ, ಹಳೆ ಬಾಕಿ ವಸೂಲಿ ಹಾಗೂ ಆನ್ಲೈನ್/ಮಾರ್ಕೆಟಿಂಗ್ ವ್ಯವಹಾರದಲ್ಲಿ ಲಾಭ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ವಿವಾಹ ವಿಷಯಗಳು ಸ್ವಲ್ಪ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ವೈಮನಸ್ಯ ಬರದಂತೆ ಎಚ್ಚರವಿಸಿ. ವಿದ್ಯಾರ್ಥಿಗಳಿಗೆ ಉದ್ಯೋಗದ ಶುಭಸುದ್ದಿ ಸಿಗಲಿದೆ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: ಏಳು
ದಿಕ್ಕು: ಪೂರ್ವ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ಶ್ರೀಕಂಠೇಶ್ವರಾಯ ನಮಃ” ಮಂತ್ರ ಜಪಿಸಿ.
♌ ಸಿಂಹ ರಾಶಿ
ರವಿ ರಾಶ್ಯಾಧಿಪತಿಯಾಗಿದ್ದು, ಆರು ಗ್ರಹಗಳ ಶುಭಫಲವಿದೆ. ಆತ್ಮವಿಶ್ವಾಸ ಹೆಚ್ಚಿರಲಿದ್ದು, ಗುರಿ ಸಾಧನೆ ಮಾಡುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಭಿವೃದ್ಧಿ ಹಾಗೂ ಹಳೆ ಬಾಕಿ ವಸೂಲಿಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ಶತ್ರುಗಳು ಮಿತ್ರರಾಗುತ್ತಾರೆ. ಅಣ್ಣ-ತಮ್ಮಂದಿರ ಹಾಗೂ ಹಳೆಯ ಆಸ್ತಿ ಕಲಹಗಳು ಇತ್ಯರ್ಥಗೊಳ್ಳಲಿವೆ. ದೂರ ಪ್ರಯಾಣ ಯೋಗವಿದೆ. ರಾಜಕೀಯ ವ್ಯಕ್ತಿಗಳು, ರೈತರು ಹಾಗೂ ಸರ್ಕಾರಿ ನೌಕರರಿಗೆ ಲಾಭದಾಯಕ ದಿನ.
ಅದೃಷ್ಟ ಬಣ್ಣ: ಆರೆಂಜ್
ಅದೃಷ್ಟ ಸಂಖ್ಯೆ: ಒಂದು
ದಿಕ್ಕು: ಉತ್ತರ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ವಿಶ್ವೇಶ್ವರಾಯ ನಮಃ” ಮಂತ್ರ ಜಪಿಸಿ.
♍ ಕನ್ಯಾ ರಾಶಿ
ಬುಧ ರಾಶ್ಯಾಧಿಪತಿಯಾಗಿದ್ದು, ಐದು ಗ್ರಹಗಳ ಶುಭಫಲವಿದೆ. ಉತ್ತಮ ಮಾತುಗಾರಿಕೆ ಹಾಗೂ ಕರಕುಶಲ ಕೆಲಸ ನಿರ್ವಹಣೆಯಿಂದ ಮೆಚ್ಚುಗೆ ಗಳಿಸುವಿರಿ. ಧನಸ್ಥಾನದಲ್ಲಿ ಚಂದ್ರನ ಸಂಚಾರದಿಂದ ನಿಖರವಾದ ಮಾತುಗಳನ್ನಾಡುವಿರಿ. ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವಿರುತ್ತದೆ. ವಸ್ತು ಖರೀದಿ, ಮನೆ ರಿಪೇರಿ ಅಥವಾ ಬದಲಾವಣೆ, ಆಸ್ತಿ ಕಲಹ ಇತ್ಯರ್ಥವಾಗಲಿದೆ. ಧರ್ಮ ಕಾರ್ಯಗಳಲ್ಲಿ ಭಾಗಿ. ಗುತ್ತಿಗೆದಾರರು, ಶಿಕ್ಷಕರು ಹಾಗೂ ವ್ಯಾಪಾರಸ್ಥರಿಗೆ ಶುಭ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: ಎಂಟು
ದಿಕ್ಕು: ಪಶ್ಚಿಮ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ಪಶುಪತಯೇ ನಮಃ” ಮಂತ್ರ ಜಪಿಸಿ.
♎ ತುಲಾ ರಾಶಿ
ಶುಕ್ರ ರಾಶ್ಯಾಧಿಪತಿಯಾಗಿದ್ದು, ಸ್ವಾತಿ ನಕ್ಷತ್ರದಲ್ಲಿ ಚಂದ್ರನ ಸಂಚಾರವಿದೆ. ಅನಗತ್ಯ ಪ್ರದರ್ಶನ ಬೇಡ, ಇಲ್ಲವಾದರೆ ಶತ್ರುಗಳು ಹೆಚ್ಚಾಗಬಹುದು. ಆರ್ಥಿಕವಾಗಿ ಹಾಗೂ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಇದೆ. ಉದ್ಯೋಗದಲ್ಲಿ ಬಡ್ತಿ ಲಭಿಸಲಿದ್ದು, ಜವಾಬ್ದಾರಿಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ಪ್ರೇಮ ವ್ಯವಹಾರಗಳಿಗೆ ಮನ್ನಣೆ ಸಿಗಲಿದೆ. ಸಾಹಿತಿಗಳು, ಸಿನಿಮಾ ನಟರು ಮತ್ತು ಪತ್ರಕರ್ತರಿಗೆ ಉತ್ತಮ ದಿನ. ತಾಳ್ಮೆ ಮತ್ತು ಸಹನೆ ಅತ್ಯಗತ್ಯ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: ಎರಡು
ದಿಕ್ಕು: ಉತ್ತರ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ವೀರಭದ್ರಾಯ ನಮಃ” ಮಂತ್ರ ಜಪಿಸಿ.
♏ ವೃಶ್ಚಿಕ ರಾಶಿ
ಕುಜ ರಾಶ್ಯಾಧಿಪತಿಯಾಗಿದ್ದು, ಆರು ಗ್ರಹಗಳ ಶುಭಫಲವಿದೆ. ದೊಡ್ಡ ಯೋಜನೆಗಳಿಗೆ ಮನ್ನಣೆ ಸಿಗಲಿದೆ ಹಾಗೂ ಸರ್ಕಾರದ ಯೋಜನೆಗಳಿಂದ ಲಾಭ ಪಡೆಯುವಿರಿ. ಕೆಲಸಗಳಲ್ಲಿ ತೃಪ್ತಿ, ಹಳೆ ಬಾಕಿ ವಸೂಲಿಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಭೇಟಿ ಹಾಗೂ ಆಕಸ್ಮಿಕ ಪ್ರಯಾಣ ಯೋಗವಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಾಹನ ಯೋಗ ಹಾಗೂ ಸಂತಾನ ಯೋಗ ಕೂಡಿಬರಲಿದೆ.
ಅದೃಷ್ಟ ಬಣ್ಣ: ಆರೆಂಜ್
ಅದೃಷ್ಟ ಸಂಖ್ಯೆ: ನಾಲ್ಕು
ದಿಕ್ಕು: ಪಶ್ಚಿಮ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ಮಹಾದೇವಾಯ ನಮಃ” ಮಂತ್ರ ಜಪಿಸಿ.
♐ ಧನು ರಾಶಿ
ಗುರು ರಾಶ್ಯಾಧಿಪತಿಯಾಗಿದ್ದು, ನಾಲ್ಕು ಗ್ರಹಗಳ ಶುಭಫಲವಿದೆ. ಇಂದು ಬಿಡುವಿಲ್ಲದ ಕೆಲಸದಿಂದ ಬ್ಯುಸಿ ಇರಲಿದ್ದೀರಿ. ಭೂ ಸಂಬಂಧಿ ವಿಷಯಗಳಲ್ಲಿ ಶುಭ ಫಲವಿದೆ. ಅನಿರೀಕ್ಷಿತ ಪ್ರಯಾಣ ಯೋಗವಿದೆ. ಪತಿ-ಪತ್ನಿಯರಲ್ಲಿ ಸಣ್ಣಪುಟ್ಟ ಕಲಹಗಳು ಬಂದು ಹೋಗಬಹುದು. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಯೋಚಿಸಿ. ಉದ್ಯೋಗ ಬದಲಾವಣೆಗೆ ಯೋಚಿಸುತ್ತಿರುವವರಿಗೆ ಉತ್ತಮ ಅವಕಾಶ. ಆನ್ಲೈನ್ ವ್ಯಾಪಾರಸ್ಥರು, ಶಿಕ್ಷಣ ಕ್ಷೇತ್ರ ಹಾಗೂ ಸಿವಿಲ್ ಇಂಜಿನಿಯರ್ಗಳಿಗೆ ಶುಭ.
ಅದೃಷ್ಟ ಬಣ್ಣ: ಆರೆಂಜ್
ಅದೃಷ್ಟ ಸಂಖ್ಯೆ: ಒಂಬತ್ತು
ದಿಕ್ಕು: ಪಶ್ಚಿಮ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ನಮಃ ಶಿವಾಯ” ಮಂತ್ರ ಜಪಿಸಿ.
♑ ಮಕರ ರಾಶಿ
ಶನಿ ರಾಶ್ಯಾಧಿಪತಿಯಾಗಿದ್ದು, ಐದು ಗ್ರಹಗಳ ಶುಭಫಲವಿದೆ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭ ಫಲವಿದೆ. ಪ್ರೇಮ ವ್ಯವಹಾರಗಳಿಗೆ ಉತ್ತಮ ಮನ್ನಣೆ ಸಿಗಲಿದೆ. ಸರ್ಕಾರಿ ನೌಕರರು, ರೈತರು, ರಿಯಲ್ ಎಸ್ಟೇಟ್, ಕಬ್ಬಿಣ ಮತ್ತು ಹಾರ್ಡ್ವೇರ್ ವ್ಯಾಪಾರಿಗಳು ಹಾಗೂ ರೈಲ್ವೆ ಇಲಾಖೆಯವರಿಗೆ ಲಾಭದಾಯಕ ದಿನ. ಆರೋಗ್ಯ ಚೆನ್ನಾಗಿರುತ್ತದೆ. ಮಕ್ಕಳ ಉದ್ಯೋಗದ ಚಿಂತೆ ಸ್ವಲ್ಪ ಕಾಡಬಹುದು.
ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆ: ಏಳು
ದಿಕ್ಕು: ಪೂರ್ವ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ನಮೋ ಭಗವತೇ ರುದ್ರಾಯ” ಮಂತ್ರ ಜಪಿಸಿ.
♒ ಕುಂಭ ರಾಶಿ
ಶನಿ ರಾಶ್ಯಾಧಿಪತಿಯಾಗಿದ್ದು, ಐದು ಗ್ರಹಗಳ ಶುಭಫಲವಿದೆ. ಮನಸ್ಸಿನಲ್ಲಿ ಸ್ವಲ್ಪ ಭಯದ ವಾತಾವರಣ ಹಾಗೂ ಆರೋಗ್ಯದ ಚಿಂತೆ ಕಾಡಬಹುದು. ನಿರೀಕ್ಷಿತ ಫಲಿತಾಂಶಗಳು ತಡವಾದರೂ, ಸಂಧ್ಯಾಕಾಲದಲ್ಲಿ ಶುಭಸುದ್ದಿ ಕೇಳುವಿರಿ. ಭೂ ವ್ಯವಹಾರಗಳಲ್ಲಿ ಶುಭ ಫಲವಿದೆ. ಬ್ಯಾಂಕ್, ಪೋಸ್ಟಲ್ ಹಾಗೂ ಇಲಾಖಾ ನೌಕರರು ಕೆಲಸದಲ್ಲಿ ಜಾಗರೂಕರಾಗಿರಿ. ಉದ್ಯೋಗದಲ್ಲಿ ಸಣ್ಣಪುಟ್ಟ ಅಪವಾದಗಳು ಬರಬಹುದು, ಎಚ್ಚರವಿರಲಿ. ಆಸ್ತಿ ಮಾರಾಟದಲ್ಲಿ ಲಾಭ ಹಾಗೂ ವಿವಾಹ ಮಾತುಕತೆಗಳಲ್ಲಿ ಯಶಸ್ಸು ಸಿಗಲಿದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: ಎಂಟು
ದಿಕ್ಕು: ದಕ್ಷಿಣ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ಶೂಲಪಾಣಯೇ ನಮಃ” ಮಂತ್ರ ಜಪಿಸಿ.
♓ ಮೀನ ರಾಶಿ
ಗುರು ರಾಶ್ಯಾಧಿಪತಿಯಾಗಿದ್ದು, ಐದು ಗ್ರಹಗಳ ಶುಭಫಲವಿದೆ. ವೃಥಾ ತಿರುಗಾಟ ಹಾಗೂ ಸ್ವನಿಂದನೆಗೆ ಅವಕಾಶ ನೀಡಬೇಡಿ. ಕೆಲಸಗಳಲ್ಲಿ ಅಜಾಗರೂಕತೆ ಅಥವಾ ನಿರ್ಲಕ್ಷ್ಯ ಬೇಡ. ಹಳೆಯ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮವಿರಲಿದೆ. ಆಸ್ತಿ ಕಲಹಗಳು ಮತ್ತೆ ಉಲ್ಬಣಿಸುವ ಸಾಧ್ಯತೆಯಿದೆ. ರೈತಾಪಿ ವರ್ಗದವರು, ವ್ಯಾಪಾರಸ್ಥರು, ಶಿಕ್ಷಣ, ನ್ಯಾಯಾಂಗ ಇಲಾಖೆ ಹಾಗೂ ಔಷಧಿ ವ್ಯಾಪಾರಿಗಳಿಗೆ ಶುಭ. ದೇವತಾ ಕಾರ್ಯ, ಜಪ ಮತ್ತು ದಾನ-ಧರ್ಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: ಐದು
ದಿಕ್ಕು: ಪೂರ್ವ ದಿಕ್ಕಿನ ಪ್ರಯಾಣ ಶುಭ
ಪರಿಹಾರ: “ಓಂ ಭೂತಪತಯೇ ನಮಃ” ಮಂತ್ರ ಜಪಿಸಿ.

