ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್‌ಗಳ ಡಿಕ್ಕಿ; ಭಾರತೀಯ ಪ್ರಯಾಣಿಕ ದಾರುಣ ಸಾವು

ಖಠ್ಮಂಡು: ನೇಪಾಳದ ವಿಶ್ವಪ್ರಸಿದ್ಧ ಮೌಂಟ್ ಎವರೆಸ್ಟ್ (Mount Everest) ಪ್ರದೇಶದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಲ್ಯಾಂಡಿಂಗ್ ಆಗುವ ವೇಳೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಓರ್ವ ಭಾರತೀಯ ಪ್ರಯಾಣಿಕ ದಾರುಣವಾಗಿ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೌಂಟ್ ಎವರೆಸ್ಟ್ ಪ್ರದೇಶಕ್ಕೆ ಸಮೀಪದಲ್ಲಿರುವ ಫೆರಿಚೆ (Pheriche) ಹೆಲಿಪ್ಯಾಡ್‌ನಲ್ಲಿ ಈ ಅಪಘಾತ ಸಂಭವಿಸಿದೆ.

 ಒಂದು ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ, ಹೆಲಿಪ್ಯಾಡ್‌ನಲ್ಲಿದ್ದ ಮತ್ತೊಂದು ಹೆಲಿಕಾಪ್ಟರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡೂ ಹೆಲಿಕಾಪ್ಟರ್‌ಗಳು ನಿಯಂತ್ರಣ ತಪ್ಪಿ ನೆಲಕ್ಕುರುಳಿ ಪತನಗೊಂಡಿವೆ.  ಮೃತಪಟ್ಟ ವ್ಯಕ್ತಿಯನ್ನು ಭಾರತೀಯ ಮೂಲದ ಪ್ರಯಾಣಿಕ ಎಂದು ಗುರುತಿಸಲಾಗಿದ್ದು, ಅವರ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಗಾಯಾಳು ಪ್ರಯಾಣಿಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೀಕರ ದುರಂತ: ಹೆಲಿಕಾಪ್ಟರ್ ಪತನ; ಬೆಂಗಳೂರು ಮೂಲದ ಐವರು ಯಾತ್ರಾರ್ಥಿಗಳು ಸೇರಿ ಆರು ಮಂದಿ ಸಾವು

ಹಿಮಾಲಯನ್ ಪ್ರವಾಸೋದ್ಯಮ ಮತ್ತು ಟ್ರೆಕ್ಕಿಂಗ್‌ಗೆ ಹೆಸರಾಗಿರುವ ಈ ಮಾರ್ಗದಲ್ಲಿ ಹೆಲಿಕಾಪ್ಟರ್‌ಗಳು ಡಿಕ್ಕಿಯಾಗಿರುವುದು ಪ್ರವಾಸಿಗರಲ್ಲಿ ಭಾರಿ ಆತಂಕ ಮೂಡಿಸಿದ್ದು, ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ ಘಟನೆ ಕುರಿತು ತನಿಖೆಗೆ ಆದೇಶಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ