‘ಅಗ್ನಿವೀರ’ರಿಗೆ ಕೇಂದ್ರ ಸರ್ಕಾರದಿಂದ ಭಾರಿ ಸಿಹಿಸುದ್ದಿ: ಸೇವಾ ಅವಧಿ ಹೆಚ್ಚುವರಿ 2 ವರ್ಷ ವಿಸ್ತರಣೆ

ನವದೆಹಲಿ: ದೇಶದ ಯುವಜನತೆಗೆ ಹಾಗೂ ಸೇನಾ ಆಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಭಾರಿ ಸಿಹಿಸುದ್ದಿ ನೀಡಿವೆ. ಭಾರತೀಯ ಸೇನೆಯ ‘ಅಗ್ನಿವೀರ್’ (Agniveer) ಯೋಜನೆಯಡಿಯ ಸೇವಾ ಅವಧಿಯನ್ನು ಹೆಚ್ಚುವರಿಯಾಗಿ 2 ವರ್ಷಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನವದೆಹಲಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಈ ಪರಿಷ್ಕೃತ ಯೋಜನೆಯ ಮಹತ್ವದ ವಿವರಗಳನ್ನು ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರವು 2022ರ ಜೂನ್ 14ರಂದು ‘ಅಗ್ನಿಪಥ್’ (Agnipath) ಯೋಜನೆಯನ್ನು ಜಾರಿಗೊಳಿಸಿತ್ತು. ಅಗ್ನಿವೀರರ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲಾಗುವುದು ಮತ್ತು ಕಾಲಕಾಲಕ್ಕೆ ಯೋಜನೆಯ ನಿಯಮಗಳನ್ನು ಪರಿಶೀಲಿಸಲಾಗುವುದು ಎಂದು ಯೋಜನೆ ಜಾರಿಯ ಸಂದರ್ಭದಲ್ಲೇ ಸ್ಪಷ್ಟಪಡಿಸಲಾಗಿತ್ತು. ಅಗ್ನಿವೀರರ ಪ್ರಥಮ ಬ್ಯಾಚ್ ಇದೀಗ ತಮ್ಮ ನಿಗದಿತ 4 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸುವ ಹಂತದಲ್ಲಿದೆ.

Advertisement

“ಕಳೆದ ನಾಲ್ಕು ವರ್ಷಗಳಲ್ಲಿ ನಡೆಸಲಾದ ಅಗ್ನಿವೀರರ ಕಾರ್ಯಕ್ಷಮತೆಯ ಮೌಲ್ಯಮಾಪನದಿಂದ ನಮಗೆ ಅತ್ಯಂತ ಸಕಾರಾತ್ಮಕ ಮತ್ತು ಆಶಾದಾಯಕ ಪ್ರತಿಕ್ರಿಯೆಗಳು ಲಭ್ಯವಾಗಿವೆ,” ಎಂದು ಸಿಡಿಎಸ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2026: ಮೇ 15 ರಿಂದ ಪ್ರವೇಶ ಪತ್ರ ಲಭ್ಯ; ಜೂನ್‌ನಲ್ಲಿ ಪರೀಕ್ಷೆ!

Advertisement

ಹಳೆಯ ನಿಯಮ vs ಪರಿಷ್ಕೃತ ಯೋಜನೆಯ ಹೊಸ ಬದಲಾವಣೆ:

ಹಳೆಯ ನಿಯಮದಂತೆ (25% ಪ್ರವೇಶ): ಈ ಮುಂಚಿನ ನಿಯಮದಂತೆ, 4 ವರ್ಷಗಳ ಸೇವೆ ಮುಗಿಸಿದ ಅರ್ಹತೆಯ ಆಧಾರದ ಮೇಲೆ ಶೇಕಡಾ 25ರಷ್ಟು ಅಗ್ನಿವೀರರನ್ನು ಮಾತ್ರ ನಿರಂತರ/ಖಾಯಂ ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತಿತ್ತು. ಇನ್ನುಳಿದ ಶೇ.75ರಷ್ಟು ಅಗ್ನಿವೀರರು ಶಿಸ್ತುಬದ್ಧ ಹಾಗೂ ಪ್ರೇರಿತ ಯುವಕರಾಗಿ ಸಮಾಜಕ್ಕೆ ಮರಳುವ ವ್ಯವಸ್ಥೆ ಜಾರಿಯಲ್ಲಿತ್ತು. ಪರಿಷ್ಕೃತ ಯೋಜನೆಯಡಿ, ಸಮಾಜಕ್ಕೆ ಮರಳಬೇಕಿದ್ದ ಶೇ.75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ 2 ವರ್ಷಗಳ ಸೇವಾ ಅವಧಿಯನ್ನು ನೀಡಲಾಗುತ್ತದೆ. ಈ ಹೆಚ್ಚುವರಿ 2 ವರ್ಷಗಳ ಸೇವಾ ಅವಧಿ ಪೂರ್ಣಗೊಂಡ ನಂತರ, ಆಸಕ್ತಿ ಹೊಂದಿರುವ ಪ್ರತಿಯೊಬ್ಬ ಅಗ್ನಿವೀರರನ್ನು ನಿಗದಿತ ಆಯ್ಕೆ ಮಾನದಂಡಗಳ (Selection Criteria) ಆಧಾರದ ಮೇಲೆ ಸಶಸ್ತ್ರ ಪಡೆಗಳಿಗೆ ಪೂರ್ಣ ಪ್ರಮಾಣದಲ್ಲಿ ಸೇರಿಸಿಕೊಳ್ಳಲಾಗುತ್ತದೆ ಎಂದು ಸಿಡಿಎಸ್ ಪ್ರಕಟಿಸಿದ್ದಾರೆ.

Advertisement

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ