ನೆಲ್ಯಾಡಿ ಬೈಲಿನಲ್ಲಿ ₹60 ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಬೈಲು ಎಂಬಲ್ಲಿ ₹60 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಕೇಂದ್ರ ಸರ್ಕಾರದ NDRF ಹಾಗೂ ರಾಜ್ಯ ಸರ್ಕಾರದ SDRF ಅನುದಾನದಡಿ 60:40 ಅನುಪಾತದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ.

Advertisement

ಇದನ್ನೂ ಓದಿ: ಸುಳ್ಯ-ಕಡಬ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮನವಿ

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಚುನಾವಣೆಯ ಸಂದರ್ಭದಲ್ಲಿ ಬೈಲು ಭಾಗದ ಜನರಿಗೆ ನೂತನ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದೆ. ಮುಂದಿನ ಚುನಾವಣೆಗೂ ಮುನ್ನ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ಇದೀಗ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಸ್ಥಳೀಯರ ಬಹುದಿನಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ ಎಂದು ತಿಳಿಸಿದರು.

Advertisement

ಕಕ್ವೆಯಲ್ಲಿ ತಡೆಗೋಡೆಗೆ ಗುದ್ದಲಿಪೂಜೆ

ಕಕ್ವೆಯಲ್ಲಿ ತಡೆಗೋಡೆಗೆ ಶಾಸಕಿ ಭಾಗೀರಥಿ‌ ಮುರುಳ್ಯ ಗುದ್ದಲಿಪೂಜೆ
ಕಕ್ವೆಯಲ್ಲಿ ತಡೆಗೋಡೆಗೆ ಶಾಸಕಿ ಭಾಗೀರಥಿ‌ ಮುರುಳ್ಯ ಅವರಿಂದ ಗುದ್ದಲಿಪೂಜೆ

ಆಲಂಕಾರು ಗ್ರಾಮದ ಕಕ್ವೆ ಎಂಬಲ್ಲಿ ನೂತನವಾಗಿ NDRF ಮತ್ತು SDRF ಅನುದಾನಲ್ಲಿ ನಿರ್ಮಾಣವಾಗಲಿರುವ ತಡೆ ಗೋಡೆಗೆ ಇಂದು ಶಾಸಕರು ಗುದ್ದಲಿಪೂಜೆ ನೆರವೇರಿಸಲಾಯಿತು.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ