Breaking News

ಮುಂಬೈ: ಲಿಫ್ಟ್‌ನ ಒಳಗಿದ್ದಾಗ ಬಲೂನ್‌ ಸ್ಫೋಟ : ಇಬ್ಬರಿಗೆ ಗಾಯ

ಮುಂಬೈ, ಫೆ,4:  ಲಿಫ್ಟ್‌ವೊಂದರಲ್ಲಿ ಗ್ಯಾಸ್ ತುಂಬಿದ ಬಲೂನ್‌ಗಳು ಸ್ಫೋಟಗೊಂಡ ಆಘಾತಕಾರಿ ಘಟನೆಯೊಂದು ನಡೆದಿದೆ. ಮುಂಬೈನಲ್ಲಿ ನಡೆದ ಈ ಘಟನೆಯಲ್ಲಿ, ವ್ಯಕ್ತಿಯೊಬ್ಬರು ಬಲೂನ್‌ಗಳನ್ನು ಹಿಡಿದುಕೊಂಡು ಲಿಫ್ಟ್ ಪ್ರವೇಶಿಸಿದಾಗ ಈ ಅನಾಹುತ ಸಂಭವಿಸಿದೆ. ಲಿಫ್ಟ್‌ನ ಒಳಗಿದ್ದಾಗ ಬಲೂನ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಲಿಫ್ಟ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಬಲೂನ್‌ಗಳನ್ನು ಹಿಡಿದುಕೊಂಡು ಲಿಫ್ಟ್ ಪ್ರವೇಶಿಸಿದಾಗ ಈ ಅನಾಹುತ ಸಂಭವಿಸಿದೆ. ಇದರಿಂದ ಲಿಫ್ಟ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಈ ದೃಶ್ಯವು ಲಿಫ್ಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೊದಲು ಒಬ್ಬ ಮಹಿಳೆ ಟ್ರಾಲಿಯೊಂದಿಗೆ ಲಿಫ್ಟ್ ಪ್ರವೇಶಿಸುತ್ತಾರೆ, ನಂತರ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಚೀಲದಲ್ಲಿ ಬಲೂನ್‌ಗಳನ್ನು ಹಿಡಿದು ಒಳಬರುತ್ತಾರೆ. ಲಿಫ್ಟ್ ಬಾಗಿಲು ಮುಚ್ಚಿದ ಕೆಲವೇ ಕ್ಷಣಗಳಲ್ಲಿ ಆ ಬಲೂನ್‌ಗಳು ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಸ್ಫೋಟಗೊಳ್ಳುತ್ತವೆ. ಇಡೀ ಲಿಫ್ಟ್ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆಯಿಂದ ಆವೃತವಾಗುತ್ತದೆ. ಈ ಸ್ಫೋಟದಲ್ಲಿ ಲಿಫ್ಟ್‌ನಲ್ಲಿದ್ದ ಮಹಿಳೆ ಮತ್ತು ಇಬ್ಬರು ಪುರುಷರು ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್, ಸ್ಫೋಟದ ತೀವ್ರತೆಯ ಹೊರತಾಗಿಯೂ ಅವರು ತಕ್ಷಣ ಲಿಫ್ಟ್‌ನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇದನ್ನೂ ಓದಿ: ಮದ್ಯಪಾನ ಮಾಡಿದ್ದ 10ನೇ ತರಗತಿಯ ವಿದ್ಯಾರ್ಥಿ 7ನೇ ಮಹಡಿಯಿಂದ ಬಿದ್ದು ಸಾವು

ಇಲ್ಲಿದೆ ನೋಡಿ ವಿಡಿಯೋ

ಈ ಬಲೂನ್‌ಗಳಲ್ಲಿ ಹೈಡ್ರೋಜನ್ (Hydrogen) ಅನಿಲವನ್ನು ತುಂಬಲಾಗಿತ್ತು ಎಂದು ಶಂಕಿಸಲಾಗಿದೆ. ಹೈಡ್ರೋಜನ್ ಅತ್ಯಂತ ಚಲನಶೀಲ ಅನಿಲವಾಗಿದ್ದು, ಉಷ್ಣಾಂಶದಿಂದಲೂ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಈ ಸಂಬಂಧ ಗೋರೆಗಾಂವ್ ಪೊಲೀಸರು ನಿರ್ಲಕ್ಷ್ಯದ ಆರೋಪದ ಮೇಲೆ ಬಲೂನ್ ಮಾರಾಟಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು