Breaking News

ನಂತೂರಿನಲ್ಲಿ ಭೀಕರ ಅಪಘಾತ: ಅಮ್ಮನ ಮುಂದೆಯೇ ಪ್ರಾಣ ಬಿಟ್ಟ ಮಗಳು, ಕಳಚಿಕೊಂಡಿತು ಕುಟುಂಬದ ಆಧಾರ

ಮಂಗಳೂರು, ಫೆ.6: ನಗರದ ನಂತೂರು (Nanthoor) ಬಳಿ ಭೀಕರ ಅಪಘಾತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. 24 ವರ್ಷದ ಯುವತಿ ದೀಪ್ತಿ, ನಂತೂರು ಬಸ್ ನಿಲ್ದಾಣದ ಬಳಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದಲ್ಲಿ ಅತ್ಯಂತ ಕರುಣಾಜನಕ ವಿಷಯವೆಂದರೆ ದೀಪ್ತಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಅದೇ ಬಸ್‌ನಲ್ಲಿ ಆಕೆಯ ತಾಯಿ ಶಾಲಿನಿ ಮತ್ತು ತಂಗಿಯರು ಪ್ರಯಾಣಿಸುತ್ತಿದ್ದರು. ತನ್ನ ಕಣ್ಣೆದುರೇ ಮಗಳು ಅಪಘಾತಕ್ಕೆ ಈಡಾಗುವುದನ್ನು ಕಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ದೀಪ್ತಿಯ ತಂದೆ ಮಹೇಶ್ ಅವರು ಪೌರಕಾರ್ಮಿಕರಾಗಿದ್ದರು, ಅವರು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಜಾಗಕ್ಕೆ ಅನುಕಂಪದ ಆಧಾರದ ಮೇಲೆ ಶಾಲಿನಿ (ತಾಯಿ) ಕೆಲಸಕ್ಕೆ ಸೇರಿದ್ದರು. ಶಾಲಿನಿ ಅವರು ಕಷ್ಟಪಟ್ಟು ತನ್ನ ಐವರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದರು. ಬಿ.ಕಾಂ ಪದವೀಧರೆಯಾಗಿದ್ದ ದೀಪ್ತಿ, ಎಲ್‌ಐಸಿ (LIC) ಏಜೆಂಟ್ ಆಗಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದರು ಮತ್ತು ಕುಟುಂಬಕ್ಕೆ ಆಧಾರವಾಗಿದ್ದರು.

Advertisement

ಇದನ್ನೂ ಓದಿ: ಕಲ್ಲುಗುಂಡಿ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನ; ತಂದೆಯ ಕೃತ್ಯಕ್ಕೆ ಪತಿಯೂ ಸಾಥ್

ಈ ಘಟನೆಯನ್ನು ಖಂಡಿಸಿ ದಲಿತ ಸಂಘಟನೆಗಳ ನಾಯಕರು ಕದ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಶೀಲ್ ಕುಮಾರ್ ರೆಡ್ಡಿ ಅವರು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಈಗಾಗಲೇ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಅಪಘಾತವು ಮಂಗಳೂರಿನ ಸಂಚಾರ ವ್ಯವಸ್ಥೆ ಮತ್ತು ಖಾಸಗಿ ಬಸ್‌ಗಳ ಅತಿವೇಗದ ಚಾಲನೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಆತಂಕ ಮೂಡಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು